ಈ ವಾರ ತೆರೆಗೆ ` ಅಸತೋಮ ಸದ್ಗಮಯ’

ಅಸತೋಮ ಸದ್ಗಮಯ ಕನ್ನಡ ಚಲನಚಿತ್ರವು ಇದೇ ಜುಲೈ 6ರಂದು ರಾಜ್ಯಾದ್ಯಂತ ಏಕಕಾಲಕ್ಕೆ 50 ಸಿಂಗಲ್ ಸ್ಕೀನ್ ಚಿತ್ರಮಂದಿರಗಳಲ್ಲಿ ಮತ್ತು 20 ಮಲ್ಟಿಪ್ಲೆಕ್ಸ್ಗಳಲ್ಲಿ ಬಿಡುಗಡೆಯಾಗಿದೆ. ಐಕೇರ್ ಮೂವೀಸ್ ಬ್ಯಾನರಿನಡಿಯಲ್ಲಿ ಅಶ್ವಿನ್ ಪಿರೇರಾರವರು ಈ ಚಿತ್ರವನ್ನ ನಿರ್ಮಿಸಿದ್ದು, ರಾಜೇಶ್ ವೇಣೂರ್ ನಿರ್ದೇಶನ ಮಾಡಿದ್ದಾರೆ. ವಿಜಯ್ ಮೂವಿಸ್ರವರು ಈ ಚಿತ್ರವನ್ನ ರಾಜ್ಯಾದ್ಯಂತ ಹಂಚಿಕೆ ಮಾಡುತ್ತಿದ್ದಾರೆ.

ರಾಧಿಕಾ ಚೇತನ್, ಕಿರಣ್ ರಾಜ್, ಲಾಸ್ಯ ನಾಗರಾಜ್, ದೀಪಕ್ ಶೆಟ್ಟಿ ಹಾಗೂ ಬೇಬಿ ಚಿತ್ರಾಲಿ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ.

ಈ ಚಿತ್ರವನ್ನ ಪ್ರಸ್ತುತ ಜನರೇಶನ್ನ ಮೆಂಟಾಲಿಟಿ ಬಗ್ಗೆ ಮಾಡಲಾಗಿದ್ದು, ಸಂಬಂದಗಳು ಮತ್ತು ಬುದ್ಧಿವಂತಿಕೆ ಈ ಚಿತ್ರದ ಪ್ರಮುಖ ವಿಷಯವಾಗಿದೆ. ಜೊತೆಗೆ ಪ್ರಸ್ತುತ ಶಿಕ್ಷಣ ವ್ಯವಸ್ತೆಯ ಬಗ್ಗೆಯೂ ಈ ಚಿತ್ರದಲ್ಲಿ ಪ್ರಸ್ತಾಪಿಸಲಾಗಿದ್ದು ಇದೊಂದು ಸಂಪೂರ್ಣ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರವಾಗಿದೆ.

ಈ ಚಿತ್ರಕ್ಕೆ ವಹಾಬ್ ಸಲೀಂ ಸಾಹಿತ್ಯ ಮತ್ತು ಸಂಗೀತವಿದ್ದು, ವಿಜಯ್ ಪ್ರಕಾಶ್, ಅನುರಾದ ಭಟ್, ಪದ್ಮಲತಾ, ಅಲಾಪ್ ರಾಜು ಹಾಡುಗಾರಿಕೆ ಇದೆ.

ಮಣಿಕಾಂತ್ ಕದ್ರಿ ಹಿನ್ನೆಲೆ ಸಂಗೀತ ವಿದ್ದು, ಕಿಶೋರ್ ಕುಮಾರ್ ಛಾಯಾಗ್ರಹಣ ಮತ್ತು ರವಿಚಂದ್ರನ್ ಸಂಕಲನವಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ