ಪ್ರಿಯಾಂಕ ಉಪೇಂದ್ರ ಅವರಿಂದ `ಶಬ್ದ’ ಕಿರುಚಿತ್ರದ ಅನಾವರಣ

 

ಎಸ್.ಕೆ.ಎಂಟರ್ಟೈನ್ಮೆಂಟ್ಸ್ ಲಾಂಛನದಲ್ಲಿ ಡಾ||ಜಿ.ಕೃಷ್ಣಮೂರ್ತಿ ಅವರು ನಿರ್ಮಿಸಿರುವ `ಶಬ್ದ` ಕಿರುಚಿತ್ರವನ್ನು ಇತ್ತೀಚೆಗೆ ನಟಿ ಪ್ರಿಯಾಂಕ ಉಪೇಂದ್ರ ಬಿಡುಗಡೆ ಮಾಡಿದರು. ಹದಿನೈದು ನಿಮಿಷಗಳ ಈ ಕಿರುಚಿತ್ರವನ್ನು ಯೂಟ್ಯುಬ್ನಲ್ಲಿ ವೀಕ್ಷಿಸಬಹುದು.

ಎಂ.ಎಸ್.ರಾಮಯ್ಯ ವೈದ್ಯಕೀಯ ವಿಭಾಗದಲ್ಲಿ ಪ್ರೊಫೆಸರ್ ಆಗಿರುವ ಡಾ||ಎಸ್.ಕೋಕಿಲ ಈ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ಸೂಕ್ಷ್ಮ ಮನಸ್ಸಿನ ವ್ಯಕ್ತಿಗಳ ಮೇಲೆ `ಶಬ್ದ` ಯಾವ ರೀತಿ ಪಾರಿಣಾಮ ಬೀರಬಹುದು ಎಂಬ ಕಥಾಹಂದರವನ್ನು ಈ ಕಿರುಚಿತ್ರ ಹೊಂದಿದೆ.

ಇತ್ತೀಚೆಗೆ ತಮ್ಮ ನಿವಾಸದಲ್ಲಿ ಈ ಕಿರುಚಿತ್ರವನ್ನು ಅನಾವರಣಗೊಳಿಸಿ, ವೀಕ್ಷಿಸಿದ ನಟಿ ಪ್ರಿಯಾಂಕ ಉಪೇಂದ್ರ ಅವರು ಕಿರುಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನಾಡಿದರು.

ಗುಣಶೇಖರ್ ಹಾಗೂ ಹರಿಕೃಷ್ಣ ಅವರ ಛಾಯಾಗ್ರಹಣವಿರುವ ಈ ಕಿರುಚಿತ್ರಕ್ಕೆ ಹರಿಕೃಷ್ಣ ಅವರ ಸಂಕಲನವಿದೆ. ಶೃತಿಕುಮಾರ್ ಹಾಗೂ ಮುಕುಂದ್ ಎನ್.ಎಸ್ ಈ ಕಿರುಚಿತ್ರದಲ್ಲಿ ನಟಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ