ಕಾರು ಕಳ್ಳರ ಬಂಧನ

ದಾವಣಗೆರೆ,ಜು.7- ವಾಟರ್ ಸರ್ವೀಸ್ ಹಾಗೂ ಶೋರೂಂಗಳಿಗೆ ಬಂದ ಕಾರುಗಳನ್ನು ಚಾಲಾಕಿತನದಿಂದ ಅಪಹರಿಸುತ್ತಿದ್ದ ಮೂವರು ಅಂತಾರಾಜ್ಯ ದರೋಡೆಕೋರರನ್ನು ದಾವಣಗೆರೆ ಪೆÇಲೀಸರು ಬಂಧಿಸಿದ್ದಾರೆ.
ಗೋವಾ ರಾಜ್ಯದ ಮಡಗೋವಾ ವಾಸಿಗಳಾದ ಆಟೋ ಕಲ್ಸಲ್‍ಟೆನ್ಸಿ ನಡೆಸುತ್ತಿದ್ದ ವಾಸಿಂ ಸಯ್ಯದ್(32) ನಜೀರ್ ಅಹಮದ್ ಶೇಖ್(26), ಚಾಲಕ ವೃತ್ತಿ ಮಾಡುತ್ತಿದ್ದ ಶಫಿಶೇಖ್(25) ಬಂಧಿತ ಆರೋಪಿಗಳು.
ವಾಟರ್ ಸರ್ವೀಸ್‍ಗೆ, ಬಣ್ಣ ಬದಲಾಯಿಸಲು ಹಾಗೂ ಶೋರೂಂಗಳಿಗೆ ಬರುತ್ತಿದ್ದ ಕಾರುಗಳನ್ನು ಆರೋಪಿಗಳು ಕದಿಯುತ್ತಿದ್ದರು ಎಂದು ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕರಿ ಆರ್.ಚೇತನ್ ತಿಳಿಸಿದರು.
ಟಾಕುಠೀಕಾಗಿ ಡ್ರೆಸ್ ಮಾಡಿಕೊಂಡು ಶೋರಂಗಳಿಗೆ ಹೋಗಿ ಶ್ರೀಮಂತರಂತೆ ಫೆÇೀಸ್ ಕೊಟ್ಟು ಕಾರು ಖರೀದಿಸುವ ನೆಪದಲ್ಲಿ ಕಾರುಗಳನ್ನು ಓಡಿಸುವಂತೆ ನಟಿಸಿ ಹಾಗೆಯೇ ಪರಾರಿಯಾಗುತ್ತಿದ್ದರು.
ನಂತರ ಆರೋಪಿಗಳು ಕದ್ದು ತಂದ ಕಾರುಗಳ ಬಣ್ಣ ಹಾಗೂ ನಂಬರ್ ಪ್ಲೇಟ್ ಚೆಸ್ಸಿ ನಂಬರ್ ಬದಲಿಸಿ ಮಾರಾಟ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ಗೊತ್ತಾಗಿದೆ.
ಆರೋಪಿಗಳಾದ 65 ಲಕ್ಷ ಬೆಲೆಯ 4 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೊನ್ನೆ ಮಧ್ಯಾಹ್ನ ಶ್ಯಾಮನೂರು ಆಂಜನಪ್ಪ ಎಂಬುವರು ತಮ್ಮ ಇನೋವಾ ಕ್ರಿಸ್ಟಾ ವಾಹನವನ್ನು ತನುಶ್ರೀ ಸರ್ವೀಸ್ ಪಾಯಿಂಟ್‍ಗೆ ಬಿಟ್ಟಿದ್ದರು.
ಸಂಜೆ ಬಂದು ತಮ್ಮ ಕಾರನ್ನು ತೆಗೆದುಕೊಳ್ಳಲು ಬಂದಾಗ ಅವರಿಗೆ ಶಾಖ್ ಕಾದಿತ್ತು. ಮಾಧ್ಯಹ್ನವೇ ನಿಮ್ಮ ಕಡೆಯವರೇ ಬಂದು ತೆಗೆದುಕೊಂಡು ಹೋದರಲ್ಲ ಎಂದು ಸರ್ವೀಸ್ ಸ್ಟೇಷನ್‍ನವರು ಹೇಳಿದ್ದಾರೆ.
ಆಂಜನಪ್ಪ ತಕ್ಷಣ ನಗರ ಠಾಣೆಗೆ ದೂರು ನೀಡಿದ್ದರು. ನಗರ ಪೆÇಲೀಸರು ಈ ಕರತ್ನಾಕ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಚೇತನ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ