1995ರಲ್ಲಿ ಸರಿನ್ ಅನಿಲ ದಾಳಿ: 6 ಜನರಿಗೆ ಮರಣದಂಡಣೆ

ಟೋಕಿಯೋ, ಜು.6- ಜಪಾನ್ ರಾಜಧಾನಿ ಟೋಕಿಯೋ ಸಬ್ ವೇನಲ್ಲಿ 1995ರಲ್ಲಿ ನಡೆದ ಮಾರಕ ಸರಿನ್ ಅನಿಲ ದಾಳಿ ಸಂಬಂಧ ಜಪಾನ್ ಸರ್ಕಾರ ಇಂದು ಧಾರ್ಮಿಕ ನಾಯಕ ಮತ್ತು ಆತನ 6 ಸಹಚರರಿಗೆ ಮರಣದಂಡಣೆ ಶಿಕ್ಷೆ ವಿಧಿಸಿದೆ. ಆಮ್-ಷಿನ್‍ರಿಕಿಯೋ ಬಣದ ಧಾರ್ಮಿಕ ಮುಖಂಡ ಶೋಕೋ ಅಷುರ ಮತ್ತು ಆತನ 6 ಅನುಯಾಯಿಗಳನ್ನು ಇಂದು ಗಲ್ಲಿಗೆ ಏರಿಸಲಾಯಿತು ಎಂದು ಜಪಾನ್ ಸರ್ಕಾರದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್ 20, 1995 ರಂದು ನಡೆದ ಸರಿನ್ ಗ್ಯಾಸ್ ದಾಳಿಯಲ್ಲಿ 13 ಮಂದಿ ಮೃತಪಟ್ಟು , ಒಂದು ಸಾವಿರಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದರು. ಇವರಲ್ಲಿ ಕೆಲವರು ದೃಷ್ಟಿಹೀನರಾಗಿದ್ದಾರೆ. ಸುದೀರ್ಘ ವಿಚಾರಣೆಯ ನಂತರ ಶೋಕೋ ಮತ್ತು ಆತನ 6 ಅನುಯಾಯಿಗಳಿಗೆ ಮರಣದಂಡನೆ ವಿಧಿಸಿರುವುದನ್ನು ಜಪಾನೀಯರು ಸ್ವಾಗತಿಸಿದ್ದಾರೆ. ಸ್ಥಳೀಯ ಭಯೋತ್ಪಾದನೆ ನಿಗ್ರಹದಲ್ಲಿ ಇದೊಂದು ಮಹತ್ವದ ಕ್ರಮವಾಗಿದೆ ಎಂದು ರಾಜಕೀಯ ಪಕ್ಷದ ನಾಯಕರು ಬಣ್ಣಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ