ನವದೆಹಲಿ: ಐಸಿಐಸಿಐ ಬ್ಯಾಂಕಿನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮಾಜಿ ಅಧಿಕಾರಿ ಜಿಸಿ ಚತುರ್ವೇದಿ ಅವರನ್ನು ನೇಮಕ ಮಾಡಿದ ನಂತರ ಮತ್ತೆ ಮೂವರು ನಿವೃತ್ತ ಅಧಿಕಾರಿಗಳ ಹೆಸರುಗಳು ಸಾರ್ವಜನಿಕ ವಲಯ ಬ್ಯಾಂಕುಗಳ ಮುಖ್ಯಸ್ಥರಾಗಿ ನೇಮಿಸುವ ಕುರಿತು ಹೆಸರುಗಳು ಕೇಳಿಬರುತ್ತಿವೆ.ನಮ್ಮಲ್ಲಿ ಹಲವು ನಿವೃತ್ತ ಅಧಿಕಾರಿಗಳು ಇನ್ನೂ ಸಕ್ರಿಯರಾಗಿರುವವರು ಇದ್ದಾರೆ. ಅವರ ಹೆಸರುಗಳು ಎಲ್ಐಸಿ-ಐಡಿಬಿಐ ಬ್ಯಾಂಕಿನ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ಕುರಿತು ಕೇಳಿಬರುತ್ತಿವೆ. ಇವರಲ್ಲಿ ಹಲವರು ಈ ಹಿಂದೆ ಹಣಕಾಸು ಸಚಿವಾಲಯದಲ್ಲಿ ಕೆಲಸ ಮಾಡಿದ ಅನುಭವಿಗಳಾಗಿದ್ದಾರೆ. ಹೀಗಾಗಿ ಐಡಿಬಿಐ-ಎಲ್ಐಸಿ ಬ್ಯಾಂಕಿನ ಪರಿಷ್ಕೃತ ಬ್ಯಾಂಕಿನಲ್ಲಿ ಕೆಲಸ ಮಾಡಲು ಅವರಿಗೆ ಸುಲಭವಾಗುತ್ತದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ಹೇಳುತ್ತಾರೆ.ಮಾಜಿ ಕಂದಾಯ ಇಲಾಖೆ ಕಾರ್ಯದರ್ಶಿ ಶಕ್ತಿಕಾಂತ್ ದಾಸ್, ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದ ಡಿ ಕೆ ಮಿತ್ತಲ್, ಸೆಬಿಯ ಮಾಜಿ ಮುಖ್ಯಸ್ಥ ಸಿ ಬಿ ಬಾವೆ ಅವರ ಹೆಸರುಗಳು ಕೇಳಿಬರುತ್ತಿವೆ. ಇವರ ಹೆಸರುಗಳು ಐಸಿಐಸಿಐ ಬ್ಯಾಂಕಿನ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿದ್ದವು.ಐಡಿಬಿಐ-ಎಲ್ಐಸಿ ಒಪ್ಪಂದದಿಂದ ಈಗಿರುವ ವ್ಯವಸ್ಥೆಗಳು ಇನ್ನೂ ಉತ್ತಮವಾಗುವ ಸಾಧ್ಯತೆಯಿದೆ. ಎರಡೂ ಪ್ರಮುಖ ಹಣಕಾಸು ಸಂಸ್ಥೆಗಳನ್ನು ಮುನ್ನಡೆಸುವವರು ಹುದ್ದೆಗಳಿಗೆ ನೇಮಕವಾಗಬೇಕಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.