
ನವದೆಹಲಿ: ಬಾಲಿವುಡ್ ಮತ್ತು ಹಾಲಿವುಡ್ ನಲ್ಲಿ ಮಿಂಚುತ್ತಿರುವ ವಿಶ್ವದ ಸೆಕ್ಸಿ ಮಹಿಳೆ ಪ್ರಿಯಾಂಕಾ ಚೋಪ್ರಾ ಅವರು ಫೋಟೋ ಶೇರಿಂಗ್ ತಾಣ ಇನ್ ಸ್ಟಾಗ್ರಾಮ್ ನಲ್ಲಿ 25 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಲಿವುಡ್ ಸೂಪರ್ ಸ್ಟಾರ್ ಅಮಿತ್ ಬಚ್ಚನ್ ಅವರನ್ನು ಹಿಂದಿಕ್ಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇನ್ ಸ್ಟಾಗ್ರಾಮ್ ನಲ್ಲಿ 13.5 ಮಿಲಿಯನ್ ಫಾಲೋವರ್ಸ್, ಬಿಗ್ ಬಿ 9.5 ಮಿಲಿಯನ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 22.7 ಮಿಲಿಯನ್, ಬಾಲಿವುಡ್ ಶಾರುಖ್ ಖಾನ್ 13.3 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
25 ಮಿಲಿಯನ್ ದಾಟಿದ ತನ್ನ ಫಾಲೋವರ್ಸ್ ಗಳಿಗೆ ದೇಶಿ ಗರ್ಲ್ ಧನ್ಯವಾದ ಹೇಳಿದ್ದು, ನಿಮ್ಮ ಪ್ರೀತಿಗೆ ಥ್ಯಾಂಕ್ಯೂ…. ನಿಮ್ಮನ್ನು ಮತ್ತೆ ಪ್ರೀತಿಸುತ್ತೇನೆ ಎಂದು ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.