ಬೆಂಗಳೂರು, ಜು.6-ಕುಡಿಯಲು ಹಣ ಕೊಡದ ಪತ್ನಿಯನ್ನು ಪತಿಯೇ ಕೊಲೆ ಮಾಡಿರುವ ಘಟನೆ ರಾತ್ರಿ ಸೋಲದೇವನಹಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಸ್ತೂರಿ (35) ಪತಿಯಿಂದ ಕೊಲೆಯಾದ ಗೃಹಿಣಿ. ಆಕೆಯ ಪತಿ, ಆರೋಪಿ ರಾಜಾಸಿಂಗ್ ಮೂಲತಃ ಮಧ್ಯಪ್ರದೇಶದವರು. ಪತ್ನಿ ಕಸ್ತೂರಿ ಹಾಗೂ ತಂಗಿಯೊಂದಿಗೆ ಚಿಕ್ಕಸಂದ್ರದ ಬೋನ್‍ಮಿಲ್‍ನಲ್ಲಿ ನಿರ್ಮಾಣವಾಗುತ್ತಿರುವ ಅಪಾರ್ಟ್ ಮೆಂಟ್‍ನ ಕಾರ್ಮಿಕರ ಶೆಡ್‍ನಲ್ಲಿ ರಾಜಾಸಿಂಗ್ ವಾಸವಿದ್ದ.
ನಿನ್ನೆ ಸಂಜೆ 7.30ರಲ್ಲಿ ಕುಡಿಯಲು ಹಣ ನೀಡುವಂತೆ ಪತ್ನಿಯನ್ನು ರಾಜಾಸಿಂಗ್ ಪೀಡಿಸಿದ್ದಾನೆ. ಹಣ ಕೊಡದ ಕಾರಣ ಕೋಪಗೊಂಡು ಹಾಲೋಬ್ರಿಕ್ಸ್‍ನಿಂದ ಪತ್ನಿ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೆÇಲೀಸರು ತಿಳಿಸಿದ್ದಾರೆ. ಮೃತ ದೇಹವನ್ನು ಸಪ್ತಗಿರಿ ಆಸ್ಪತ್ರೆಯಲ್ಲಿಡಲಾಗಿದೆ. ಸೋಲದೇವನಹಳ್ಳಿ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.