ಕೊಳ್ಳೆಗಾಲ, ಜು.6-ಬೀದಿ ದೀಪಗಳು ಕಳೆದ 5-6 ತಿಂಗಳಿನಿಂದ ಕೆಟ್ಟು ನಿಂತಿವೆ ಇನ್ನೂ ದುರಸ್ತಿ ಮಾಡಿಲ್ಲ. ಜನ ನಮ್ಮನ್ನು ಬೈಯುತ್ತಿದ್ದಾರೆ. ವಾರ್ಡ್ಗಳಿಗೆ ಅಳವಡಿಸಲಾಗಿದ್ದ ಸೋಲರ್ ಲೈಟ್ಗಳ ಬ್ಯಾಟರಿಗಳು ಕಳ್ಳತನವಾಗಿವೆ ಎಂದು ಸದಸ್ಯರು ಸಭಾಧ್ಯಕ್ಷರ ಗಮನಕ್ಕೆ ತರಲಾಯಿತು.
ನಗರಸಭೆ ಸಭಾಂಗಣದಲ್ಲಿ ನಗರಸಭಾಧ್ಯಕ್ಷ ಎಸ್.ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಇದಕ್ಕೆ ಉತ್ತರಿಸಿದ ಅಧಿಕಾರಿ ಸಿದ್ದಪ್ಪ, ನಗರಸಭೆಯಲ್ಲಿ ಬಿಲ್ ಆಗಿಲ್ಲದ ಕಾರಣ ಸಂಬಂದ ಪಟ್ಟ ಗುತ್ತಿಗೆದಾರರು ದುರಸ್ತಿ ಮಾಡಲು ಮುಂದಾಗುತ್ತಿಲ್ಲ. ಡಾ.ರಾಜ್ಕುಮಾರ್ ರಸ್ತೆ, ಅಂಬೇಡ್ಕರ್ ರಸ್ತೆ, ಎಲï.ಇ.ಡಿ ಲೈಟï, ಕಾವೇರಿ ರಸ್ತೆ, ಲಿಂಗಣಪುರ ರಸ್ತೆಗಳಲ್ಲಿ ಸಿ.ಎಫ್.ಎಲï ಬಲ್ಬ್ಗಳನ್ನು ಅಳವಡಿಸಬೇಕಿದೆ ಎಂದು ಮಾಹಿತಿ ನೀಡಿದರು.
ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ಅಳವಡಿಸಿರುವ ಮೋಟಾರುಗಳು ಪದೇ ಪದೇ ಕೆಟ್ಟು ನಿಲ್ಲುತ್ತಿವೆ ಗುಣಮಟ್ಟದ ಮೋಟರ್ಗಳನ್ನು ಅಳವಡಿಸಲು ಸಾಧ್ಯವಾಗುತ್ತಿಲ್ಲವೆ ಎಂದು ಸದಸ್ಯರು ಸಭೆಗೆ ದೂರಿದರು.
ಪರಿಸರ ಇಂಜಿನಿಯರ್ ನಿಗದಿತ ವೇಳೆಗೆ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಆಗಿದ್ದರು ನಟರಾಜು ಎಂಬ ನೌಕರನಿಗೆ ಹಲವಾರು ದಿನಗಳಿಂದ ಹಾಜರಾತಿ ನೀಡಿಲ್ಲ ಎಂದು ಸದಸ್ಯ ಎ.ಪಿ ಶಂಕರ್ ತರಾಟೆಗೆ ತಗೆದುಕೊಂಡಾಗ ಮುಂದೆ ನಿಗದಿತ ವೇಳೆಗೆ ಕರ್ತವ್ಯಕ್ಕೆ ಹಾಜರಾಗುವುದಾಗಿ ಸಭೆಗೆ ತಿಳಿಸಿದರು.
ಬಸ್ ನಿಲ್ದಾಣದಲ್ಲಿ ಸುಂಕ ವಸೂಲಿ ಮಾಡುವ ಸಂಬಂದ ಟೆಂಡರï ಕರೆಯುವ ಹಾಗೂ ಟೆಂಡರï ಮೊತ್ತ ಹೆಚ್ಚಳ ಮಾಡುವ ಕುರಿತ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಒಪ್ಪಿದರೆ ಅದೇ ಮೊತ್ತಕ್ಕೆ ಮುಂದುವರೆಸಿ ಇಲ್ಲ ಮರು ಟೆಂಡರï ಕರೆಯಿರಿ. ಹಾಗೂ ನೀರು ಶುದ್ಧಿಕರಣ ಕೇಂದ್ರಕ್ಕೆ ಭದ್ರತೆಯ ದೃಷ್ಠಿಯಿಂದ ಸಿ.ಸಿ ಕ್ಯಾಮರ ಅಳವಡಿಸುವಂತೆ ಮಾಡಿದ ಮನವಿಗೆ ಅಳವಡಿಸುವಂತೆ ತೀಮಾ9ನಿಸಲಾಯಿತು.
ರಾಷ್ಟ್ರೀಯ ಹೆದ್ದಾರಿ ಅಗಲಿಕರಣ ಕಾಮಗಾರಿಗೆ ಸಂಬಂಧ ಪಟ್ಟಂತೆ ದಾಖಲೆ ನೀಡುವಂತೆ ಸಂತ್ರಸ್ತರಿಗೆ ಸೂಚಿಸಿದ್ದು, ಅದರಂತೆ ನಗರಸಭೆಗೆ ದಾಖಲಾತಿ ಸಲ್ಲಿಸಿದ್ದರು. ಆದರೆ ಹಿಂದಿನ ಪೌರಾಯುಕ್ತರು ಹಿಂದಿನ ಕೊಯಮತ್ತೂರು ಜಿಲ್ಲೆಯ ಅಡಳಿತದ ವೇಳೆ ಹೆದ್ದಾರಿ 150 ಅಡಿ ಅಗಲ ವಿಶಾಲವಾಗಿತ್ತು. ಅದಕ್ಕೆ ಸಂಬಂದಿಸಿದ ನಕ್ಷೆ. ನಮ್ಮ ಬಳಿ ದಾಖಲಾತಿ ಇರುವುದಾಗಿ ಹೇಳುತ್ತಿದ್ದರು. ಈಗ ಆ ದಾಖಲಾತಿಗಳನ್ನು ನೀಡಿ ಎಂದು ಸದಸ್ಯ ಪರಮೇಶ್ವರಯ್ಯ ಪಟ್ಟು ಹಿಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಪ್ರಭಾರ ಪೌರಾಯುಕ್ತ ಹೇಂಮಂತ್ ಕುಮಾರ್ ಪ್ರಕರಣ ನ್ಯಾಯಾಲಯದಲ್ಲಿದೆ ಈಗ ಅದರ ಕುರಿತು ಮಾತನಾಡುವುದು ಬೇಡ ಎಂದು ತೆರೆ ಎಳೆದರು.
ಉಪಾಧ್ಯಕ್ಷ ಶಿವಾನಂದ, ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಹರ್ಷ ಪ್ರಭಾರ ಪೌರಾಯುಕ್ತ ಹೇಮಂತ್ ಕುಮಾರ್, ಎಇಇ ಗಂಗಾಧರ್, ಎಇ ಗಳಾದ ನಾಗೇಂದ್ರ, ನಟರಾಜು, ಸಂಯೋಜನಾಧಿಕಾರಿ ಪರಶಿವ ಹಾಗೂ ನಗರಸಭಾ ಸದಸ್ಯರು ಹಾಜರಿದ್ದರು.