ಹುಬ್ಬಳ್ಳಿ- ಹುಬ್ಬಳ್ಳಿಯ ಕೋರ್ಟ್ ವೃತ್ತದಲ್ಲಿರುವ ಶ್ರೀಸಾಯಿ ಮಂದಿರದ ‘ಶ್ರೀ ಶಿರಡಿ ಸಾಯಿ ಸದ್ಭಕ್ತ ಮಂಡಳಿ’ಯು, ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿದೆ ಎಂದು ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ದೀಪಕ ಜಾಧವ ಆರೋಪಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನ್ಯಾಯಾಲಯದ ಆದೇಶ ಗಾಳಿಗೆತೂರಿದ ಸಾಯಿ ಮಂದಿರ ಆಡಳಿತ ಮಂಡಳಿಯು, ನ್ಯಾಯಾಲಯದಿಂದ ತಡೆಯಾಜ್ಞೆ ಇದ್ದರೂ, ಸರ್ವ ಸದಸ್ಯರ ಸಾಮಾನ್ಯ ಸಭೆ ಕರೆದಿರುವುದು ಸರಿಯಲ್ಲ ಎಂದಿದ್ದಾರೆ. ಸಾಯಿ ಸದ್ಭಕ್ತ ಆಡಳಿತ ಮಂಡಳಿಯು ಯಾವುದೇ ಆಡಳಿತಾತ್ಮಕ ವ್ಯವಹಾರ ನಡೆಸದಂತೆ 03-04-2018 ರಂದು ಜಿಲ್ಲಾ ಪ್ರಧಾನ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ. ಆದರೆ, ಆಡಳಿತ ಮಂಡಳಿಯು ಮಧ್ಯಂತರ ಆದೇಶದ ನಡುವೆಯು 08-07-2018 ರಂದು ಸರ್ವ ಸದಸ್ಯರ ಸಾಮಾನ್ಯ ಸಭೆ ಕರೆದಿದೆ ಎಂದು ಅವರು ಆರೋಪಿಸಿದ್ದಾರೆ. ಸಾಯಿ ಮಂದಿರವನ್ನು ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಮಠದ ಮಾದರಿಯಲ್ಲಿ ಪಬ್ಲಿಕ್ ಟ್ರಸ್ಟ್ ಕಮಿಟಿ ಮಾಡುವಂತೆ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಮಿತಿಯಿಂದ ಒತ್ತಾಯಿಸಿ, ಜಿಲ್ಲಾ ನ್ಯಾಯಾಲಯದಲ್ಲಿ ಧಾವೆ ಕೂಡ ಹೂಡಿದೆ ಎಂದರು.