ಚನ್ನಪಟ್ಟಣ, ಜು.6- ವೈದ್ಯರ ಮೇಲೆ ಹಲ್ಲೆ ನಡೆಸಿ ಹಣ ದರೋಡೆ ಮಾಡಿದ ಪ್ರಕರಣವನ್ನು ಬೇಧಿಸಿದ ನಗರ ಪೆÇಲೀಸರು ಆರು ಮಂದಿ ಡಕಾಯಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರ ನಿವಾಸಿ ಕಿರಣ್‍ಕುಮಾರ್ (26), ತಾಲ್ಲೂಕಿನ ಸಂಕಲಗೆರೆ ಗ್ರಾಮದ ಕಾರ್ತೀಕ್ (25) ಬೆಂಗಳೂರಿನ ಚಿಕ್ಕಲ್ಲಸಂದ್ರದ ಸುನೀಲ್ ಆಲಿಯಾಸ್ ಟೀ ಅಂಗಡಿ ಸುನೀಲ್ (27) ಪಾಂಡವಪುರ ಕಣಿವೆಕೊಪ್ಪಲಿನ ವಿನಯ್ (27) ರಾಕೇಶ್ (28) ಸತೀಶ್ ಅಲಿಯಾಸ್ ಅಮಾವಾಸ್ಯೆ (28) ಬಂಧಿತ ಆರೋಪಿಗಳು.
ಜು.23ರ ರಾತ್ರಿ 11ರ ಸುಮಾರಿನಲ್ಲಿ ನಗರದ 7ನೆ ಕ್ರಾಸ್, ಕುವೆಂಪುನಗರ ಖ್ಯಾತ ಮಕ್ಕಳ ತಜ್ಞ ಡಾ.ರಾಜಣ್ಣ ಅವರ ನಿವಾಸಕ್ಕೆ ನುಗ್ಗಿದ ಈ ಡಕಾಯಿತರು ಮಾರಕ ಆಯುಧಗಳಿಂದ ಹಲ್ಲೆ ನಡೆಸಿ ಗಾಯಗೊಳಿಸಿ ಅವರ ಬಳಿಯಿದ್ದ ಒಂದೂವರೆ ಲಕ್ಷ ರೂ. ಹಣ, ಮೊಬೈಲ್, ಎಟಿಎಂ ಕಾರ್ಡ್ ದರೋಡೆ ನಡೆಸಿ ಪರಾರಿಯಾಗಿದ್ದರು. ಪ್ರಕರಣದ ಬಗ್ಗೆ ನಗರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಲ್ಲದೆ, ವೈದ್ಯರ ಮನೆ ಡಕಾಯಿತಿ ಪ್ರಕರಣ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿತ್ತು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಮೇಶ್, ಪೆÇಲೀಸ್ ಉಪವಿಭಾಗಾಧಿಕಾರಿ ಮಂಜುನಾಥ್ ಮಾರ್ಗದರ್ಶನದಲ್ಲಿ ಚನ್ನಪಟ್ಟಣ ವೃತ್ತ ನಿರೀಕ್ಷಕ ಸತೀಶ್, ರಾಮನಗರ ನಿಸ್ತಂತು ವಿಭಾಗದ ನಿರೀಕ್ಷಕ ಶಿವಶಂಕರ್, ನಗರ ಪೆÇಲೀಸ್ ಠಾಣೆ ಪಿಎಸ್‍ಐ ಚೈತನ್ಯ, ಪೂರ್ವ ಪೆÇಲೀಸ್ ಠಾಣೆ ಪಿಎಸ್‍ಐ ಹೇಮಂತ್‍ಕುಮಾರ್, ಅಪರಾಧ ವಿಭಾಗದ ಪಿಎಸ್‍ಐ ಭಾಸ್ಕರ್, ಎಂ.ಕೆ.ದೊಡ್ಡಿ ಪೆÇಲೀಸ್ ಠಾಣೆ ಪಿಎಸ್‍ಐ ಶಿವಕುಮಾರ್ ಡಕಾಯಿತರ ಪತ್ತೆಗಾಗಿ ಬಲೆ ಬೀಸಿದ್ದರು.
ದರೋಡೆ ಪ್ರಕರಣ ಸಂಬಂಧ ಹಲವಾರು ಮಾಹಿತಿ ಕಲೆ ಹಾಕಿದ ಖಡಕ್ ಪೆÇಲೀಸ್ ಅಧಿಕಾರಿಗಳ ತಂಡ ವೈದ್ಯರ ನಿವಾಸದ ಬಳಿಯೇ ಇರುವ ಅರಣ್ಯ ಕಚೇರಿಯಲ್ಲಿ ವಾಹನ ಚಾಲಕನಾಗಿದ್ದ ಸಂಕಲಗೆರೆ ಕಿರಣ್‍ಕುಮಾರ್ ಮೇಲೆ ಸಂದೇಹಗೊಂಡು ಅವರದೇ ದಾಟಿಯಲ್ಲಿ ಆತನಿಗೆ ಅತಿಥ್ಯ ನೀಡಿದಾಗ ದರೋಡೆ ರಹಸ್ಯ ಬಯಲಾಗಿದೆ. ವೈದ್ಯರ ಜತೆ ಪರಿಚಿತನಾಗಿದ್ದ ಕಿರಣ್‍ಕುಮಾರ್ ಅವರ ಪೂರ್ವಾಪರ ತಿಳಿದುಕೊಂಡು ಹೊರಗಿನ ಸ್ನೇಹಿತರ ಜತೆ ಮಾಸ್ಟರ್ ಪ್ಲಾನ್ ಮಾಡಿ ತನ್ನ ಬಳಿ ಕರೆಸಿಕೊಂಡು ಮುಖಕ್ಕೆ ಮಾಸ್ಕ್ ಧರಿಸಿ ಈ ಈ ಕೃತ್ಯವೆಸಗಿದ್ದಾನೆಂದು ಮಾಹಿತಿಯಿಂದ ಲಭ್ಯವಾಗಿದೆ. ಬಂಧಿತರಿಂದ 30 ಸಾವಿರ ನಗದು, ಒಂದು ಐ ಫೆÇೀನ್, ಮೊಬೈಲ್, ಕೃತ್ಯಕ್ಕೆ ಬಳಸಿದ ಲಾಂಗ್ ವಶಪಡಿಸಿಕೊಂಡಿರುವ ಪೆÇಲೀಸರು 6 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.