ಭೀಮಾತೀರದ ಹಂತಕನ ಹತ್ಯೆ ಪ್ರಕರಣ ಆರೋಪಿ ಬಂಧನ

ವಿಜಯಪುರ,ಜು.5 – ಭೀಮಾತೀರದ ಹಂತಕ ಗಂಗಾಧರ ಚಡಚಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಸಾಹುಕಾರ್ ಬೈರಗೊಂಡನನ್ನು ಬಂಧಿಸಲಾಗಿದೆ ಎಂದು ಸಿಐಡಿ ಮೂಲಗಳು ಖಚಿತಪಡಿಸಿವೆ.
ಇಂದು ಬೆಳಗಿನ ಜಾವ ಬೈರಗೊಂಡನನ್ನು ಇಂಡಿ ತಾಲೂಕಿನ ಕೆರೂರು ಗ್ರಾಮದ ಅವರ ನಿವಾಸದಲ್ಲಿ ಸಿಐಡಿ ಪೆÇಲೀಸರು ಬಂಧಿಸಿದ್ದಾರೆ. ಬಂಧನದ ಭೀತಿ ಎದುರಿಸುತ್ತಿದ್ದ ಸಾಹುಕಾರ ಬೈರಗೊಂಡ ವಿಜಯಪುರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಕೊಲೆ ಆರೋಪ ಎದುರಿಸುತ್ತಿರುವ ಕಾರಣ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು.
ಗಂಗಾಧರ ಚಡಚಣ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಹದೇವ ಸಾಹುಕಾರ ಪ್ರಕರಣ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡಿದ್ದ. ಹಲವು ದಿನಗಳಿಂದ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಸುದೀರ್ಘ ಸಮಯದಿಂದ ಮನೆಗೆ ಬಂದಿರದ ಕಾರಣ ಅಲ್ಲಿಗೆ ಬಂದೇ ಬರುತ್ತಾನೆ ಎಂಬ ನಿರೀಕ್ಷೆಯೊಂದಿಗೆ ಕಾದಿದ್ದರು. ನಿನ್ನೆ ಮಧ್ಯರಾತ್ರಿ ಮಹದೇವ ಸಾಹುಕಾರ್ ಗುಟ್ಟಾಗಿ ಮನೆಗೆ ಬಂದಿರುವ ವಿಷಯ ತಿಳಿದ ಪೆÇಲೀಸರು ಕೂಡಲೇ ಆತನನ್ನು ಬಂಧಿಸಿ ಚಡಚಣ ಠಾಣೆಗೆ ಕರೆದೊಯ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೆÇಲೀಸರು ತನ್ನನ್ನು ಬಂಧಿಸದಂತೆ ಸಾಹುಕಾರ್‍ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೋಮವಾರ ವಿಜಯಪುರ ಹೆಚ್ಚುವರಿ ಜಿಲ್ಲಾ ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು.
ಗಂಗಾಧರ ಚಡಚಣ ಹತ್ಯೆ ಪ್ರಕರಣದಲ್ಲಿ ಇನ್ನೂ 9 ಮಂದಿಯನ್ನು ಬಂಧಿಸಲಾಗಿದ್ದು, ಅವರು ನ್ಯಾಯಾಂಗ ವಶದಲ್ಲಿದ್ದಾರೆ. ಜುಲೈ 12ರವರೆಗೂ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಿಕೊಂಡು ಪ್ರತಿ ಆರೋಪಿಯನ್ನು ಅರ್ಧ ಗಂಟೆ ವಿಚಾರಣೆ ನಡೆಸಲು ಇಂಡಿ ನ್ಯಾಯಾಲಯ ಪೆÇಲೀಸರಿಗೆ ಅನುಮತಿ ನೀಡಿತ್ತು.
ರೌಡಿ ಶೀಟರ್ ಧರ್ಮರಾಜ್ ಚಡಚಣ 2017ರ ಅಕ್ಟೋಬರ್ 30ರಂದು ತೋಟದ ಮನೆಯಲ್ಲಿ ನಡೆದ ಪೆÇಲೀಸ್ ಎನ್‍ಕೌಂಟರ್‍ನಲ್ಲಿ ಮೃತಪಟ್ಟಿದ್ದ. ಈ ಎನ್‍ಕೌಂಟರ್ ಬಳಿಕ ಆತನ ಸಹೋದರ ಗಂಗಾಧರ ಚಡಚಣನನ್ನು ಪೆÇಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಆತ ನಾಪತ್ತೆಯಾಗಿದ್ದ. ಕಣ್ಮರೆಯಾಗಿದ್ದ ಗಂಗಾಧರ ಚಡಚಣ ಕೊಲೆಯಾಗಿದ್ದಾನೆ ಎಂಬ ಮಾಹಿತಿ ದೊರಕಿತ್ತು. ಸದ್ಯ ಮಹಾದೇವ ಸಾಹುಕಾ ಅವರನ್ನು ಸಿಐಡಿ ಪೆÇಲೀಸರು ಚಡಚಣ ಪೆÇಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದು, 24 ಗಂಟೆಯೊಳಗೆ ಇಂಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೆÇಲೀಸ್ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ