ರೇಷ್ಮೆ ಗೂಡು ಮಾರುಕಟ್ಟೆ

 

ಬೆಂಗಳೂರು, ಜು.5- ಮೈಸೂರು ಜಿಲ್ಲೆಯ ರೇಷ್ಮೆ ಬೆಳೆಗಾರರು ಮತ್ತು ರೀಲರ್‍ಗಳಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಉತ್ಪಾದಿಸುವ ರೇಷ್ಮೆ ಗೂಡಿಗೆ ಮಾರುಕಟ್ಟೆ ಕಲ್ಪಿಸಲು ಮೂರು ಕೋಟಿ ರೂ. ವೆಚ್ಚದಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಇಂದು ತಾವು ಮಂಡಿಸಿದ ಬಜೆಟ್‍ನಲ್ಲಿ ಈ ವಿಷಯ ಪ್ರಕಟಿಸಿದ ಅವರು, ಇದಕ್ಕಾಗಿ 2018-19ನೆ ಸಾಲಿಗೆ ಒಂದು ಕೋಟಿ ಒದಗಿಸಲಾಗುವುದು ಎಂದರು.
ತಲಘಟ್ಟಪುರದಲ್ಲಿರುವ ರಾಜ್ಯ ರೇಷ್ಮೆ ಸಂಶೋಧನಾ ಅಭಿವೃದ್ಧಿಯ ಪುನಃಶ್ಚೇತನಕ್ಕೆ 5 ಕೋಟಿ ರೂ.ಗಳನ್ನು ನೀಡಲಾಗುವುದು. ಸಾಂಪ್ರದಾಯಿಕ ರೇಷ್ಮೆ ವಸ್ತ್ರ ಉತ್ಪಾದನೆಯ ಜತೆಗೆ ಉಪ ಉತ್ಪನ್ನಗಳಾದ ಉಗುರು ಪಾಲಿಶ್, ಲಿಪ್‍ಸ್ಟಿಕ್, ರೇಷ್ಮೆ ಬಣ್ಣೆಗಳಿಗೆ ವಿಶ್ವ ವ್ಯಾಪಿ ಬೇಡಿಕೆ ಇದ್ದು ಈ ಮಾರುಕಟ್ಟೆಯ ಅವಕಾಶವನ್ನು ಬಳಸಿಕೊಳ್ಳಲು ಅಗತ್ಯ ತಂತ್ರಕ್ಕೆ 2 ಕೋಟಿ ನೀಡಲಾಗುವುದು.
ಚನ್ನಪಟ್ಟಣದಲ್ಲಿರುವ ಕೆಎಸ್‍ಐಸಿ ಘಟಕದ ಪುನಃಶ್ಚೇತನಕ್ಕಾಗಿ 5 ಕೋಟಿ ಒದಗಿಸಲಾಗುವುದು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ