ಕಾರ್ಡಿಫ್: ಮೊದಲ ಪಂದ್ಯದಲ್ಲಿ ಭಾರತ ವಿರುದ್ದ ಹೀನಾಯವಾಗಿ ಸೋಲು ಕಂಡಿರುವ ಇಂಗ್ಲೆಂಡ್ ತಂಡ ಕಾರ್ಡಿಫ್‍ನಲ್ಲಿ ನಡೆಯಲಿರುವ ಎರಡನೆ ಟಿ20 ಪಂದ್ಯಕ್ಕೆ ಕಠಿಣ ಅಭ್ಯಾಸ ಮಾಡುತ್ತಿದೆ.
ಪ್ರಮುಖವಾಗಿ ಚೈನಾಮನ್ ಸ್ಪಿನ್ನರ್ ಕುಲ್‍ದೀಪ್ ಯಾದವ್ ಭಯ ಕಾಡುತ್ತಿದ್ದು ಇದಕ್ಕಾಗಿ ಆಂಗ್ಲರು ಬೌಲಿಂಗ್ ಮಷೀನ್ ಮೊರೆ ಹೋಗಿದ್ದಾರೆ. ಕುಲ್‍ದೀಪ್ ಎದುರಿಸಲು ಬೌಲಿಂಗ್ ಮಷೀನ್‍ನಲ್ಲಿ ಕಠಿಣ ಅಭ್ಯಾಸ ಮಾಡುತ್ತಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ ಕುಲ್‍ದೀಪ್ ಯಾದವ್ ಕೇವಲ 24 ರನ್ ನೀಡಿ ಪ್ರಮುಖ 5 ವಿಕೆಟ್‍ಗಳನ್ನ ಪಡೆದು ಮಿಂಚಿದ್ದರು.
ಎರಡನೇ ಟಿ20 ಪಂದ್ಯ ಶುಕ್ರವಾರ ಕಾರ್ಡಿಫ್‍ನಲ್ಲಿ ಭಾರತೀಯ ಕಾಲಮಾನ ರಾತ್ರಿ 10 ಗಂಟೆಗೆ ನಡೆಯಲಿದೆ.