ಹಣಕಾಸು ಮಂತ್ರಿಯಾಗಿ ಮಂಡಿಸುತ್ತಿರುವ ಮೊದಲ ಬಜೆಟ್ ಇದಾಗಿರುವುದರಿಂದ ಸಹಜವಾಗಿ ಉದ್ವೇಗಕ್ಕೆ ಒಳಗಾಗಿದ್ದೇನೆ. ಆದರೂ ರಾಜ್ಯ ರಾಜಧಾನಿಗೆ ಸಿಹಿ ಸುದ್ದಿ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

 

ಬೆಂಗಳೂರು,ಜು.5-ಹಣಕಾಸು ಮಂತ್ರಿಯಾಗಿ ಮಂಡಿಸುತ್ತಿರುವ ಮೊದಲ ಬಜೆಟ್ ಇದಾಗಿರುವುದರಿಂದ ಸಹಜವಾಗಿ ಉದ್ವೇಗಕ್ಕೆ ಒಳಗಾಗಿದ್ದೇನೆ. ಆದರೂ ರಾಜ್ಯ ರಾಜಧಾನಿಗೆ ಸಿಹಿ ಸುದ್ದಿಯನ್ನೇ ನೀಡಲಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.
ಬಜೆಟ್ ಮಂಡನೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ 20 ತಿಂಗಳು ಮುಖ್ಯಮಂತ್ರಿಯಾಗಿದ್ದರೂ ಬಜೆಟ್ ಮಂಡನೆ ಮಾಡಲು ಅವಕಾಶವಿರಲಿಲ್ಲ. ಇದು ನಾನೇ ಮಂಡಿಸುತ್ತಿರುವ ಬಜೆಟ್ ಆಗಿರುವುದರಿಂದ ಸಹಜವಾಗಿಯೇ ಉದ್ವೇಗಕ್ಕೆ ಒಳಗಾಗಿದ್ದೇನೆ ಎಂದು ಭಾವುಕರಾಗಿ ನುಡಿದರು.
ಜನರ ನಿರೀಕ್ಷೆಗಳು ಏನೆಂಬುದು ನನಗೆ ತಿಳಿದಿದೆ. ಅವರ ನಿರೀಕ್ಷೆಗೆ ತಕ್ಕಂತೆಯೇ ಬಜೆಟ್ ಮಂಡನೆ ಮಾಡಲಿದ್ದೇನೆ. ಯಾರೂ ಕೂಡ ಮುನಿಸಿಕೊಳ್ಳದಂತಹ ಸಿಹಿ ಸುದ್ದಿಯನ್ನು ನೀಡಲಿದ್ದೇನೆ. ಸರ್ವರು ಒಪ್ಪಿಕೊಳ್ಳುವಂತಹ ಬಜೆಟ್ ಇದಾಗಿದೆ. ಅಲ್ಲಿಯ ತನಕ ಕಾದು ನೋಡಿ ಎಂದು ಸೂಚ್ಯವಾಗಿ ಹೇಳಿದರು.
ನನ್ನ ಬಜೆಟ್ ಏನೆಂಬುದು ಮಂಡನೆಯಾಗುವವರೆಗೂ ಯಾರಿಗೂ ಅರ್ಥವಾಗುವುದಿಲ್ಲ. ಜನರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಇದು ಜನೋಪಯೋಗಿ ಬಜೆಟ್ ಎಂಬುದರಲ್ಲಿ ಎರಡು ಮಾತಿಲ್ಲ ಅಲ್ಲಿಯ ತನಕ ಕಾದು ನೋಡಿ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ