]ಬೆಂಗಳೂರು,ಜು.5-ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ಪ್ರಕರಣದಲ್ಲಿ ಭಾರತೀಯ ಸೇನೆಯ ನಿವೃತ್ತ ಕಲೊನಿಯಲ್ ಅವರ ಪಾತ್ರ ಇದೆ ಎಂಬ ಶಂಕೆ ವ್ಯಕ್ತ ಪಡಿಸಿದ್ದಾರೆ.
ಬಲಪಂಥೀಯ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ನಿವೃತ್ತ ಕಲೋನಿಯಲ್ ಅವರ ಕೈವಾಡವಿರುವ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ಈ ಸಂಬಂಧ ಸಾಕ್ಷಿ ಕಲೆ ಹಾಕಲು ಪ್ರಯತ್ನಿಸುತ್ತಿದ್ದಾರೆ.
ಗೌರಿ ಹತ್ಯೆ ಮಾಡಲು ಅಮೋಲ್ ಕಾಳೆಗೆ 4 ಮಂದಿಯ ತಂಡವೊಂದು ಆದೇಶ ನೀಡಿದ್ದಾರೆ. ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಗೌರಿ ಲಂಕೇಶ್ ಅವರ ವಿಡಿಯೋ ಕೂಡ ಆರೋಪಿಗೆ ನೀಡಿದ್ದಾರೆ. ಈ ನಾಲ್ಕು ಮಂದಿಯೂ ಗೌರಿ ಹತ್ಯೆಯಲ್ಲಿ ಶಾಮೀಲಾಗಿರಬಹುದೆಂಬ ಹಿನ್ನೆಲೆಯಲ್ಲಿ ಅವರ ವಿರುದ್ಧ ನಿಖರ ಸಾಕ್ಷ್ಯ ಸಂಗ್ರಹಿಸಲು ವಿಶೇಷ ತನಿಖಾ ತಂಡ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಗೌರಿಯನ್ನು ಮುಗಿಸಲು ಈ ನಾಲ್ವರು ಅಮೋಲ್ ಕಾಳೆಗೆ ಆದೇಶ ನೀಡಿರಬೇಕೆಂದು ಹಾಗೂ ಗೌರಿ ಮಾಡಿದ್ದಾರೆನ್ನಲಾದ ಹಿಂದೂ ಧರ್ಮ ಅವಹೇಳನ ಗೈಯ್ಯುವಂತಹ ಭಾಷಣದಿಂದ ಅವರು ಆಕ್ರೋಶಿತರಾಗಿದ್ದರೆಂದು ತಿಳಿದು ಬಂದಿದೆ.
ಗೌರಿ ಕೊಲೆಗೆ ಈ ನಾಲ್ಕು ಮಂದಿಯೇ ಆದೇಶ ನೀಡಿದ್ದಾರೆಂದು ತಿಳಿಯಲಾಗಿದ್ದರೂ ಇಲ್ಲಿಯ ತನಕ ಅವರ ವಿರುದ್ಧ ಸಾಕಷ್ಟು ಸಾಕ್ಷ್ಯಗಳು ದೊರಕಿಲ್ಲ, ಅವುಗಳನ್ನು ಸಂಗ್ರಹಿಸುವ ಯತ್ನ ನಡೆದಿದೆ ಎಂದು ಹೆಸರು ಹೇಳಲಿಚ್ಛಿಸದ ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಮಧ್ಯೆ ತಲೆಮರೆಸಿಕೊಂಡಿರುವ ಕೆಲ ಆರೋಪಿಗಳಿಗೆ ಬಲಪಂಥೀಯ ಸಂಘಟನೆ ರಕ್ಷಣೆ ನೀಡುತ್ತಿದೆ ಎನ್ನಲಾಗುತ್ತಿದ್ದು, ಈ ಪ್ರಕರಣದಲ್ಲಿ ಬೇಕಾದ ಕನಿಷ್ಠ ಮೂರು ಮಂದಿ ತಲೆಮರೆಸಿಕೊಂಡಿದ್ದಾರೆ. ಬಂಧನವನ್ನು ತಪ್ಪಿಸಲು ನಿರ್ದಿಷ್ಟ ಸಂಘಟನೆಯೊಂದು ಅವರಿಗೆ ಧನಸಹಾಯ ನೀಡುತ್ತಿದೆ ಎಂದು ನಮಗೆ ಮಾಹಿತಿಯಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಗೌರಿಯನ್ನು ಹತ್ಯೆಗೈದಿದ್ದು ಅಮೋಲ್ ಕಾಳೆಯಾಗಿದ್ದರೂ ಹಾಗೂ ಆತನೇ ಈ ಸಂಚಿನ ರೂವಾರಿಯಾಗಿದ್ದರೂ ಆತ ಬೇರೆ ಕೆಲವರ ಆದೇಶದಂತೆ ಈ ಕೃತ್ಯ ನಡೆಸಿದ್ದ ಎಂದು ತನಿಖಾಕಾರರು ಬಲವಾಗಿ ನಂಬಿದ್ದಾರೆ.
ಬಲಪಂಥೀಯ ಸಂಘಟನೆಯಿಂದ ಹಣ ಪೂರೈಕೆ:
ಗೌರಿ ಹತ್ಯೆ ಸಂಚಿನಿಂದ ಹಿಡಿದು ಹತ್ಯೆ ನಡೆಸುವ ತನಕ ಪ್ರತಿ ಹಂತದಲ್ಲೂ ಒಂದು ನಿರ್ದಿಷ್ಟ ಬಲಪಂಥೀಯ ಸಂಘಟನೆಯೊಂದು ಹಣಕಾಸು ಒದಗಿಸಿತ್ತು. ಜನವರಿ 2017ರಲ್ಲಿ ಈ ಸಂಚು ಹೂಡಿದಂದಿನಿಂದ ಅಮೋಲ್ ಕಾಳೆಗೆ ಮಾಸಿಕ ಕನಿಷ್ಠ 1.25 ಲಕ್ಷ ರೂ. ನೀಡಲಾಗುತ್ತಿತ್ತು. ಈ ಹಣವನ್ನು ಹತ್ಯೆ ಉದ್ದೇಶಕ್ಕೆ ಜನರನ್ನು ನಿಯೋಜಿಸಲು ಹಾಗೂ ಅವರ ಪ್ರಯಾಣ ಉದ್ದೇಶಗಳಿಗೆ ಬಳಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅವರು ಗೌರಿ ಹತ್ಯೆಗೆ ಕರೆ ನೀಡಿದ್ದಾರೆ, ಆದರೆ ಅವರ ವಿರುದ್ಧ ಸರಿಯಾದ ಸಾಕ್ಷಿಗಳಿಲ್ಲ, ಸಾಕ್ಷಿಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ, ತಪ್ಪಿತಸ್ಥರನ್ನು ರಕ್ಷಿಸಲು ಅದೊಂದು ಸಂಘಟನೆ ಪ್ರಯತ್ನಿಸುತ್ತಿದೆ. ಸುಮಾರು ಮೂವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ, ಆರೋಪಿಗಳು ಬಂಧನದಿಂದ ತಪ್ಪಿಸಿಕೊಳ್ಳಲು ಸಂಘಟನೆ ಅವರಿಗೆ ಹಣಕಾಸಿನ ನೆರವು ನೀಡುತ್ತಿದೆ ಎಂದು ಆಧಿಕಾರಿಗಳು ತಿಳಿಸಿದ್ದಾರೆ.
ಈ ಮೊದಲು ಅಮೋಲ್ ಕಾಳೆ ಗೌರಿ ಲಂಕೇಶ್ ಹತ್ಯೆಗೆ ಯೋಜಿಸಿದ್ದಾಗಿ ತನಿಖೆ ಮಾಡಲಾಗಿತ್ತು. ಆದರೆ ಆತ ಇತರ ಸಂಚುಗಾರರ ಆದೇಶದಂತೆ ಕೊಲೆ ಮಾಡಿದ್ದಾನೆ ಎಂಬ ದಿಕ್ಕಿನಲ್ಲಿ ತನಿಖೆ ನಡೆಯುತ್ತಿದೆ.
ಮಾನವ ಸಹಿತ ಉಪಗ್ರಹ ಉಡಾವಣೆಯ ಉದ್ದೇಶಿತ ಯೋಜನೆಯ
ಸಿಬ್ಬಂದಿ ರಕ್ಷಣಾ ವ್ಯವಸ್ಥೆ (ಕ್ರಿವ್ ಎಸ್ಕೇಪ್ ಸಿಸ್ಟಮ್) ಪ್ರಯೋಗ ಯಶಸ್ವಿ