ಸೆಲೆಬ್ರೇಷನ್‍ಗೆ ಕ್ರಿಸ್ಟಿಯಾನೊ ರೊನಾಲ್ಡೊ ಪ್ರೇರಣೆ

ಸೆಲೆಬ್ರೇಷನ್‍ಗೆ ಕ್ರಿಸ್ಟಿಯಾನೊ ರೊನಾಲ್ಡೊ ಪ್ರೇರಣೆ
ಮ್ಯಾಂಚೆಸ್ಟರ್: ನಾನು ಮತ್ತು ವಿರಾಟ್ ಕೊಹ್ಲಿ ವಿಶೇಷ ರೀತಿಯಲ್ಲಿ ಸೆಲೆಬ್ರೇಷನ್ ಮಾಡಲು ಫುಟ್ಬಾಲ್ ದಂತ ಕತೆ ಕ್ರಿಸ್ಟಿಯಾನೊ ರೊನಾಲ್ಡೊ ಪ್ರೇರಣೆ ಎಂದು ಟೀಂ ಇಂಡಿಯಾದ ಆಟಗಾರ ಕನ್ನಡಿಗ ಕೆ.ಎಲ್. ರಾಹುಲ್ ತಿಳಿಸಿದ್ದಾರೆ.
ಮೊನ್ನೆ ಮ್ಯಾಚೆಸ್ಟರ್‍ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ 8 ವಿಕೆಟ್‍ಗಳ ಭಝ್ರಿ ಗೆಲುವು ಸಾಧಿಸಿದಾಗ ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನ ತಂಡದ ಸಹ ಆಟಗಾರ ದಿನೇಶ್ ಕಾರ್ತಿಕ್ ಸಂದರ್ಶನ ಮಾಡಿದ್ರು. ಸಂದರ್ಶನದ ವೇಳೆ ಕೊಹ್ಲಿಯೊಂದಿಗಿನ ಸಲೆಬ್ರೇಷನ್ ಕುರಿತು ಕೇಳಲಾಯಿತು. ಇದಕ್ಕೆ ಕೆ.ಎಲ್. ರಾಹುಲ್ ನಮ್ಮ ಸೆಲೆಬ್ರೇಷನ್‍ಗೆ ಕ್ರಿಸ್ಟಿಯಾನೊ ರೋನಲ್ಡೊ ಕಾರಣ ಎಂದು ತಿಳಿಸಿದ್ದಾರೆ. ಸಂದರ್ಶನದ ವೇಳೆ ಅಲ್ಲಿಯೇ ಇದ್ದ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಸೆಲೆಬ್ರೇಷನ್ ಮಾಡಿ ಅಭಿಮಾನಿಗಳಿಗೆ ತೋರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ