ವಿದ್ಯುತ್, ಪೆಟ್ರೋಲ್, ಮೋಟಾರು ವಾಹನ, ಮದ್ಯದ ದರ ಏರಿಕೆ

ಬೆಂಗಳೂರು: ವಿದ್ಯುತ್, ಪೆಟ್ರೋಲ್, ಮೋಟಾರು ವಾಹನ ಮತ್ತು ಮದ್ಯ ಸಹಿತ ಕೆಲ ವಸ್ತುಗಳ ಮೇಲೆ ತೆರಿಗೆ ಹೆಚ್ಚಳದ ಪ್ರಸ್ತಾಪವಾಗಿದ್ದು, ಸಹಜವಾಗಿಯೇ ಈ ವಸ್ತುಗಳ ಬೆಲೆ ಏರಿಕೆ ಆಗಲಿದೆ.

ಅದರಂತೆ ವಿದ್ಯುತ್‌ ದರ ಯೂನಿಟ್‌ಗೆ 20 ಪೈಸೆ ಹೆಚ್ಚಳದ ಪ್ರಸ್ತಾಪವಾಗಿದೆ. ಪೆಟ್ರೋಲ್‌ ಮೇಲಿನ ಸೆಸ್‌ ಶೇ 32ರಿಂದ ಶೇ 34ಕ್ಕೆ,  ಡೀಸೆಲ್‌ ಮೇಲಿನ ಸೆಸ್‌ ಶೇ 19ರಿಂದ ಶೇ 22ಕ್ಕೆ ಏರಿಕೆ ಮಾಡುವ ಪ್ರಸ್ತಾಪವಾಗಿದೆ.

ಇದರಂತೆ ರಾಜ್ಯದಲ್ಲಿ ಪೆಟ್ರೋಲ್‌ ಬೆಲೆ ಪ್ರತಿ ಲೀಟರ್‌ಗೆ 1.14 ರೂ, ಡೀಸೆಲ್‌ ಬೆಲೆ 1.12 ರೂ ಹೆಚ್ಚಳವಾಗುವ ಸಾಧ್ಯತೆ ಇದೆ.

ಇದೇ ವೇಳೆ ಮೋಟಾರು ವಾಹನ ತೆರಿಗೆಗಳಲ್ಲೂ ಶೇ.50 ಹೆಚ್ಚಳ ಮಾಡಲಾಗಿದೆ. ಅಂತೆಯೇ ಮದ್ಯದ ಮೇಲೆ ಶೇ.4 ತೆರಿಗೆ ಹೆಚ್ಚಿಸುವ ಪ್ರಸ್ತಾಪವನ್ನು ಬಜೆಟ್ ನಲ್ಲಿ ಕುಮಾರಸ್ವಾಮಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ