ಬಜೆಟ್ ದಿನವೇ ದೋಸ್ತಿಗಳ ನಡುವಿನ ಭಿನ್ನಮತ ಸ್ಫೋಟ

ಬೆಂಗಳೂರು: ಬಜೆಟ್ ಗೆ ಕೆಲವೇ ಕ್ಷಣ ಇರುವಾಗಲೇ ದೋಸ್ತಿಗಳ ನಡುವೆ ಮತ್ತೊಮ್ಮೆ ಭಿನ್ನಮತ ಭುಗಿಲೆದ್ದಿದೆ.

ಜೆಡಿಎಸ್ ಶಾಸಕರು ಕೃಷ್ಣಬೈರೇಗೌಡ ಸೇರಿ ಕಾಂಗ್ರೆಸ್ ಸಚಿವರ ವಿರುದ್ಧ ಸಿಡಿದೆದ್ದಿದ್ದಾರೆ. ಕಾಂಗ್ರೆಸ್ ಸಚಿವರು ನಮ್ಮ ಶಾಸಕರ ಮಾತಿಗೆ ಗೌರವ ಕೊಡುತ್ತಿಲ್ಲ. ಕೆಲಸ ಮಾಡಿಕೊಡುತ್ತಿಲ್ಲ. ಸಚಿವರು ನಮ್ಮನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಹೀಗೆ ಆದರೆ ನಮ್ಮ ಕ್ಷೇತ್ರದ ಜನಕ್ಕೆ ಏನು ಉತ್ತರ ಕೊಡೋದು ಮುಖ್ಯಮಂತ್ರಿಗಳೇ? ಎಂದು ಸಿಎಂಗೆ ಕಾಂಗ್ರೆಸ್ ಸಚಿವರ ವರ್ತನೆ ಬಗ್ಗೆ ಜೆಡಿಎಸ್ ಶಾಸಕರು ದೂರು ನೀಡಿದ್ದಾರೆ.

ಸಚಿವ ಕೃಷ್ಣಭೈರೇಗೌಡ ವಿರುದ್ಧ ಸ್ವತಃ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಗರಂ ಆಗಿದ್ದಾರೆ. ಜೆಡಿಎಸ್ ಶಾಸಕರು ರೇವಣ್ಣ ಮಾತಿಗೆ ದನಿಗೂಡಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಆಗಿರುವುದರಿಂದ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆದರೆ ಕಾಂಗ್ರೆಸ್ ಶಾಸಕರು ನಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಬುಧವಾರ ನಡೆದ ಶಾಸಕರ ಸಭೆಯಲ್ಲಿ ಶಾಸಕರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ