ಬೆಂಗಳೂರು, ಜು.5- ನೊರೆ ಉತ್ಪಾದನೆಯಿಂದ ನಗರಕ್ಕೆ ಅಪಖ್ಯಾತಿ ತರುತ್ತಿರುವ ಬೆಳ್ಳಂದೂರು ಕೆರೆಯ ಸರ್ವಾಂಗೀಣ ಅಭಿವೃದ್ಧಿಗೆ 50 ಕೋಟಿ ರೂ.ಗಳನ್ನು ಮೀಸಲಿರಿಸಿರುವ ಸಮ್ಮಿಶ್ರ ಸರ್ಕಾರ ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮ ನಿಯಮಿತ ಸಹಭಾಗಿತ್ವದೊಂದಿಗೆ ಆ ಕೆರೆಯ ನೀರನ್ನು ಗ್ರಾಮಾಂತರ ಪ್ರದೇಶದ ಕೃಷಿ ಚಟುವಟಿಕೆಗಳಿಗೆ ಹನಿ ನೀರಾವರಿ ಮೂಲಕ ಸರಬರಾಜು ಮಾಡಲು ಸಮ್ಮತಿ ಸೂಚಿಸಿದೆ.
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಈಗಾಗಲೇ 5 ಸಾವಿರ ನಿವೇಶನ ಹಂಚಿಕೆ ಮಾಡಲಾಗಿದ್ದು, ಇನ್ನೂ 5 ಸಾವಿರ ನಿವೇಶನ ಹಂಚಿಕೆಯ ಕಾರ್ಯಕ್ರಮ ಪ್ರಗತಿಯಲ್ಲಿದೆ.
ಮೊದಲನೆ ಹಂತದಲ್ಲಿ ಭೂ ಮಾಲೀಕರಿಗೆ 2157 ನಿವೇಶನಗಳನ್ನು ಹಂಚಿಕೆ ಮಾಡಿದ್ದು, ಎರಡನೆ ಹಂತದಲ್ಲಿ 3 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮ ವಹಿಸಲಾಗಿದೆ.
ನಗರದ ಹೊರವಲಯದಲ್ಲಿ 65ಕಿಮೀ ಉದ್ದದ ಪೆರಿಫೆರಲ್ ರಿಂಗ್‍ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನ ವೆಚ್ಚ ಸೇರಿದಂತೆ ಯೋಜನೆ ಅನುಷ್ಠಾನಕ್ಕೆ 11,950 ಕೋಟಿ ರೂ.ಗಳನ್ನು ಅನುಷ್ಠಾನಗೊಳಿಸಲಾಗಿದ್ದು, ಯೋಜನೆಯ ಚಾಲನೆಗೆ ಸಂಪನ್ಮೂಲ ಕ್ರೋಢೀಕರಣದತ್ತ ಗಮನ ಹರಿಸಲಾಗಿದೆ.