ಯಾವ್ಯಾವ ಇಲಾಖೆಗೆ ಎಷ್ಟೆಷ್ಟು?
ಸುಮಾರು 2 ಲಕ್ಷದ 25 ಸಾವಿರ ಕೋಟಿ ಗಾತ್ರದ ಬಜೆಟ್ ನಲ್ಲಿ ಕಂದಾಯ ಇಲಾಖೆಗೆ 7,180 ಕೋಟಿ ರೂ ಅನುದಾನ ನೀಡಲಾಗಿದೆ. ಅಂತೆಯೇ ಲೋಕೋಪಯೋಗಿ ಇಲಾಖೆಗೆ ಶೇ 4ರಂತೆ 10,200 ಕೋಟಿ ರೂ, ಪ್ರಾಥಮಿಕ ಶಿಕ್ಷಣ ಇಲಾಖೆಗೆ 150 ಕೋಟಿ ರೂಪಾಯಿ ಸೇರಿದಂತೆ ಶಿಕ್ಷಣ ಕ್ಷೇತ್ರಕ್ಕೆ ಶೇ 11ರಷ್ಟು ಅಂದರೆ 26,581 ಕೋಟಿ ರೂ ಅನುದಾನ ನೀಡಲಾಗಿದೆ.
ಜಲ ಸಂಪನ್ಮೂಲ ಇಲಾಖೆಗೆ 18,142 ಕೋಟಿ ರೂ ಅನುದಾನ, ಕೃಷಿ ಮತ್ತು ತೋಟಗಾರಿಕಾ ಇಲಾಖೆಗೆ 7642 ಕೋಟಿ ರೂ. ಹಣ ಮೀಸಲಿಡಲಾಗಿದೆ. ಇದಲ್ಲದೆ ಜಲಸಂಪನ್ಮೂಲ ಇಲಾಖೆಗೆ 18,142 ಕೋಟಿ ರೂ, ನಗರಾಭಿವೃದ್ಧಿ – 17,727 ಕೋಟಿ ರೂ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ – 14,449 ಕೋಟಿ ರೂ. ಹಣ ಮೀಸಲಿಡಲಾಗಿದೆ.
ಅಂತೆಯೇ ವಿದ್ಯುತ್ – 14,123 ಕೋಟಿ ರೂ, ಸಮಾಜ ಕಲ್ಯಾಣ – 11,788 ಕೋಟಿ ರೂ, ಲೋಕೋಪಯೋಗಿ – 10,200 ಕೋಟಿ ರೂ, ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ – 7,953 ಕೋಟಿ ರೂ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ -9,317 ಕೋಟಿ ರೂ, ಕೃಷಿ ಮತ್ತು ತೋಟಗಾರಿಕೆ – 7,642 ಕೋಟಿ ರೂ, ಕಂದಾಯ – 7,180 ಕೋಟಿ ರೂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ – 5,725 ಕೋಟಿ ರೂ ಮತ್ತು ವಸತಿ – 3,942 ಕೋಟಿ ರೂ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ 3,866 ಕೋಟಿ ರೂ. ಮೀಸಲಿಡಲಾಗಿದೆ. ಇತರೆ ಇಲಾಖೆಗಳಿಗೆ 82,196 ಕೋಟಿ ರೂ. ಮೀಸಲಿಡಲಾಗಿದೆ.
ಹಸಿರು ಕರ್ನಾಟಕ ಯೋಜನೆ ಪ್ರಕಟ:
ಬಜೆಟ್ ನಲ್ಲಿ ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನಕ್ಕೆ ಒತ್ತು ನೀಡಲಾಗಿದೆ.
42 ನಿರಂತರ ಸಾಕಷ್ಟು ವಾಯು ಗುಣಮಟ್ಟದ ನಿರ್ವಹಣಾ ಕೇಂದ್ರಗಳನ್ನು 96 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಸರ್ಕಾರಿ ಭೂಮಿಗಳಲ್ಲಿ ಗಿಡ ಮರಗಳನ್ನು ಬೆಳೆಸಲು ಹಸಿರು ಕರ್ನಾಟಕ ಯೋಜನೆ ಹಾಗೂ ಪರ್ವತ ಪ್ರದೇಶಗಳಲ್ಲಿರುವ ಅರಣ್ಯಗಳನ್ನು ರಕ್ಷಿಸಲು 40 ಕೋಟಿ ರೂಪಾಯಿ ವೆಚ್ಚದಲ್ಲಿ ಬೇಲಿ ನಿರ್ಮಿಸಲು ಸರ್ಕಾರ ಮುಂದಾಗಿದೆ.
ರೈತರ 2 ಲಕ್ಷ ರೂ.ವರೆಗಿನ ಕೃಷಿ ಸಾಲಮನ್ನಾ:
ರೈತರ ಸಾಲಮನ್ನಾ ಘೋಷಣೆಗೂ ಮುನ್ನಾ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು, ನಿಮ್ಮದೇ ನೆಲ ನಿಮ್ಮದೇ ಬೆಳೆ ಎಂಬ ರಾಷ್ಟ್ರಕವಿ ಕುವೆಂಪು ಅವರ ರಚನೆಯ ಸಾಲುಗಳನ್ನು ಪ್ರಸ್ತಾಪಿಸಿ ಸಿಎಂ ಕುಮಾರಸ್ವಾಮಿ ಸಾಲಮನ್ನಾ ಘೋಷಣೆ ಮಾಡಿದರು. ಅಂತೆಯೇ ಸಾಲ ಪಾವತಿ ಮಾಡಿದ ರೈತರಿಗೆ ಸಾಲದ ಹಣ ವಾಪಸ್ ನೀಡುವುದಾಗಿ ಮಾತ್ರವಲ್ಲದೇ 25 ಸಾವಿರ ಹೆಚ್ಚುವರಿ ಹಣವನ್ನು ಉತ್ತೇಜನ ಧನವಾಗಿ ನೀಡುವುದಾಗಿ ಘೋಷಣೆ ಮಾಡಿದರು.
ಸಹಕಾರಿ ಬ್ಯಾಂಕ್ ಗಳಲ್ಲಿರುವ ರೈತರ ಸುಮಾರು 2 ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದರು. ರಾಜ್ಯ ಸರ್ಕಾರ ಒಟ್ಟು 34 ಸಾವಿರ ಕೋಟಿ ರೂ.ಗಳ ವರೆಗಿನ ರೈತರ ಸಾಲ ಮನ್ನಾ ಮಾಡಲು ನಿರ್ಧರಿಸಿದೆ ಎಂದು ಕುಮಾರಸ್ವಾಮಿ ಹೇಳಿದರು.
ಅಂತೆಯೇ ಈಗಾಗಲೇ 2 ಲಕ್ಷ ರೂ ವರೆಗಿನ ಸಾಲ ಪಾವತಿ ಮಾಡಿರುವ ರೈತರ ಖಾತೆಗಳಿಗೆ ರಾಜ್ಯ ಸರ್ಕಾರ ಸಾಲದ ಮೊತ್ತವನ್ನು ಮರುಪಾವತಿ ಮಾಡಲಿದೆ ಎಂದೂ ಕುಮಾರಸ್ವಾಮಿ ಹೇಳಿದರು. ಆದಾಯ ತೆರಿಗೆಪಾವತಿಸಿರುವ ರೈತರ ಸಾಲ ಮನ್ನ ಇಲ್ಲ.
ಅಂತೆಯೇ ಕೃಷಿ ಅಭಿವೃದ್ಧಿಗೂ ಸಿಎಂ ಕುಮಾರಸ್ವಾಮಿ ಆಧ್ಯತೆ ನೀಡಿದ್ದು, ಇಸ್ರೇಲ್ ಮಾದರಿಯ ನೀರಾವರಿ ವ್ಯವಸ್ಥೆ ಅಳವಡಿಕೆಗೆ 150 ಕೋಟಿ ರೂ. ಮೀಸಲಿಡುವುದಾಗಿ ಹೇಳಿದ್ದಾರೆ.
ಕೃಷಿ:
ಪ್ರತಿಜಿಲ್ಲೆಯ ಇಬ್ಬರು ಪ್ರಗತಿಪರ ರೈತರನ್ನೊಳಗೊಂಡ ಕರ್ನಾಟಕ ರಾಜ್ಯರೈತರ ಸಲಹಾ ಸಮಿತಿ ರಚನೆ.
ಕೋಲಾರ, ಚಿತ್ರದುರ್ಗ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಮೊದಲಹಂತದಲ್ಲಿ ತಲಾ 5000 ಹೆಕ್ಟೇರ್ ಖುಷ್ಕಿ ಜಮೀನಿನಲ್ಲಿ ಇಸ್ರೇಲ್
ಮಾದರಿ ನೀರಾವರಿ ಸೌಲಭ್ಯ ಒದಗಿಸಲು 150 ಕೋಟಿ ರೂ.ಅನುದಾನ.
ಆಂಧ್ರಪ್ರದೇಶ ಮಾದರಿಯಲ್ಲಿ ಶೂನ್ಯ ಬಂಡವಾಳ ಸಹಜ ಕೃಷಿಗೆ
ಒತ್ತು ನೀಡುವ ಯೋಜನೆಗೆ 50 ಕೋಟಿ ರೂ. ಅನುದಾನ.
ರೈತರು ಅಂಟುವಾಳ ಕಾಯಿ ಮರವನ್ನು ವ್ಯಾಪಕವಾಗಿ ಬೆಳೆಯಲು ರೂಪಿಸುವ ಕಾರ್ಯಕ್ರಮಕ್ಕೆ 10 ಕೋಟಿ ರೂ. ಮೀಸಲು.
ಕೃಷಿಗೆ ಪೂರಕ ತಂತ್ರಜ್ಞಾನ ಆವಿಷ್ಕಾರ ಮಾಡುವ ನವೋದ್ಯಮಗಳಿಗೆ ಉತ್ತೇಜನ; 5 ಕೋಟಿ ರೂ. ಅನುದಾನ.
ಮುಖ್ಯಾಂಶಗಳು:
ನೀರಾವರಿ ನಿಗಮ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ.
ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ದೃಢೀಕರಣ ಸಂಸ್ಥೆU É
ಬೀಜ ಪ್ರಮಾಣೀಕರಣ ಮತ್ತು ದೃಢೀಕರಣ ಕೇಂದ್ರವನ್ನು ಸ್ಥಾಪನೆಗೆ 5 ಕೋಟಿ ರೂ. ಅನುದಾನ.
ತೋಟಗಾರಿಕೆ
ತೋಟಗಾರಿಕಾ ವಲಯದಲ್ಲಿ ಕಾರವಾರ, ತುಮಕೂರು, ಯಾದಗಿರಿ
ಮತ್ತು ಹಾವೇರಿ ಜಿಲ್ಲೆಗಳಲ್ಲಿ ತಲಾ 5000 ಹೆಕ್ಟೇರ್ ಪ್ರದೇಶದಲ್ಲಿಇಸ್ರೇಲ್ ಮಾದರಿ ನೀರಾವರಿ ಸೌಲಭ್ಯ ಒದಗಿಸಲು 150 ಕೋಟಿ
ರೂ. ನಿಗದಿ.
ರೇಷ್ಮೆ:
ಮೈಸೂರು ಜಿಲ್ಲೆಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ರೇಷ್ಮೆ ಗೂಡು
ತಲಘಟ್ಟಪುರದ ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತು ್ತ
ಅಭಿವೃದ್ಧಿ ಸಂಸ್ಥೆಯ ಪುನಶ್ಚೇತನಕ್ಕೆ 5 ಕೋಟಿ ರೂ. ಅನುದಾನ.
ರೇಷ್ಮೆ ಉಪ ಉತ್ಪನ್ನಗಳಿಗೆ ಮಾರುಕಟ್ಟೆಯ ಅವಕಾಶ ಕಲ್ಪಿಸಲು 2
ಕೋಟಿ ರೂ. ಅನುದಾನ.
ಚನ್ನಪಟ್ಟಣದಲ್ಲಿರುವ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದ
(ಕೆ.ಎಸ್.ಐ.ಸಿ.) ಪುನಶ್ಚೇತನಕ್ಕೆ 5 ಕೋಟಿ ರೂ. ಅನುದಾನ.
ಪಶು ಸಂಗೋಪನೆ:
ಧಾರವಾಡ, ಕಲಬುರಗಿ ಮತ್ತು ಮೈಸೂರಿನಲ್ಲಿ 2.25 ಕೋಟಿ ರೂ.
ವೆಚ್ಚದಲ್ಲಿ ಮೂರು ವಿಭಾಗ ಮಟ್ಟದ ಘನೀಕೃತ ವೀರ್ಯನಳಿಕೆಗಳ
ವಿತರಣಾ ಕೇಂದ್ರ ಸ್ಥಾಪನೆ.
ಹಾಸನ ಹಾಲು ಒಕ್ಕೂಟದಲ್ಲಿ 15 ಲಕ್ಷ ಲೀಟರ್ ಸಾಮಥ್ರ್ಯದ
ಮೆಗಾ ಡೈರಿ ಸ್ಥಾಪನೆಗೆ 50 ಕೋಟಿ ರೂ. ಅನುದಾನ.
ಮೀನುಗಾರಿಕೆ:
“ಒಳನಾಡು ಮೀನು ಕೃಷಿಗೆ ಪ್ರೋತ್ಸಾಹ” ಯೋಜನೆಯಡಿ 4
ಕೋಟಿ ರೂ. ಅನುದಾನ.’
ಸಹಕಾರ
ಸ್ವಸಹಾಯ ಗುಂಪುಗಳು ಸ್ವಂತ:
ಉದ್ಯೋಗ ಕೈಗೊಳ್ಳುವ ಸಲುವಾಗಿ ಸಾಲ ಒದಗಿಸಲು ಒದಗಿಸಲು 5 ಕೋಟಿ ರೂ. ಅನುದಾನ.
ವಿದೇಶಗಳಲ್ಲಿ ಉದ್ಯೋಗ ಮತ್ತು ಜೀವನೋಪಾಯವನ್ನು ಹೊಂದಲು ರಾಜ್ಯದ ಯುವ ಜನತೆಗೆ ಅಗತ್ಯ ತರಬೇತಿ ನೀಡಲು
ಕರ್ನಾಟಕ ಅಂತರಾಷ್ಟ್ರೀಯ ವಲಸಿಗ ಕೇಂದ್ರಕ್ಕೆ 2 ಕೋಟಿ ರೂ. ಅನುದಾನ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ:
ಸರ್ಕಾರಿ ಶಾಲಾ-ಕಾಲೇಜುಗಳ ಕಟ್ಟಡಗಳ ದುರಸ್ತಿಗೆ 150 ಕೋಟಿ ರೂ. ಗಳ ವಿಶೇಷ
ಮುಖ್ಯಾಂಶಗಳು:
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯ ತರಬೇತಿ ಕೇಂದ್ರಗಳ ಬಲವರ್ಧನೆಗೆ 5 ಕೋಟಿ ರೂ. ಅನುದಾನ.
1000 ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ಹೊಸದಾಗಿ ಪ್ರಾರಂಭ.
ಮುಂದಿನ ಮೂರು ವರ್ಷದಲ್ಲಿ ಎಲ್ಲಾ 48 ಸಾವಿರ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ಮಕ್ಕಳ ಹಾಜರಿಗೆ ಬಯೀ ಮೆಟ್ರಿಕ್ ಅಳವಡಿಕೆ
ಪ್ರಾಥಮಿಕ ಹಂತದಿಂದಲೇ ಎಲ್‍ಕೆಜಿ, ಯುಕೆಜಿ ತರಗತಿಗಳ ಪ್ರಾರಂ¨s À.
ಉನ್ನತ ಶಿಕ್ಷಣ:
ರಾಜ್ಯದ ಸರ್ಕಾರಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 250 ಕೋಟಿ
ರೂ.ಗಳ ವಿಶೇಷ ಪ್ಯಾಕೇಜ್.
ತುಮಕೂರು ಜಿಲ್ಲೆಯಲ್ಲಿ ಕ್ರೀಡೆ ಮತ್ತು ಅಂಗಸಾಧನೆಗೆ ಸಂಬಂಧಿಸಿದವಿಶ್ವವಿದ್ಯಾಲಯ, ಶಿವಮೊಗ್ಗ ಜಿಲ್ಲೆಯಲ್ಲಿ ತಾಯಿನಾಡು ಭದ್ರತಾ
ವಿಶ್ವವಿದ್ಯಾಲಯ, ಹಂಪಿಯಲ್ಲಿ ಪ್ರವಾಸೋದ್ಯಮ ವಿಶ್ವವಿದ್ಯಾಲಯಸ್ಥಾಪನೆಗೆ ಕ್ರಮ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ:
ಔಷಧ ನಿಯಂತ್ರಣ ವ್ಯವಸ್ಥೆ ಬಲಪಡಿಸಲು 40 ಕೋಟಿ ರೂ. ವೆಚ್ಚದ ಯೋಜನೆ ಜಾರಿ. ಬಡ ರೋಗಿಗಳಿಗೆ ಹೃದಯ, ಮೂತ್ರಪಿಂಡ, ಯಕೃತ್ತು ಇತ್ಯಾದಿ
ಅಂಗಾಂಗ ಕಸಿಗಾಗಿ ಪ್ರತ್ಯೇಕ ಯೋಜನೆಗೆ 30 ಕೋಟಿ ರೂ.ಅನುದಾನ.
ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಡಿಯಾಲಜಿ, ಆಂಕಾಲಜಿಆರೋಗ್ಯ ಸೇವೆಯ ಘಟಕ ಹಾಗೂ ಟ್ರಾಮಾ ಘಟಕ ಸ್ಥಾಪನೆ.
ವೈದ್ಯಕೀಯ ಶಿಕ್ಷಣ
ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ.
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಯನ್ನು 800 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆU Éೀರಿಸಲು 30 ಕೋಟಿ ರೂ.
ಅನುದಾನ.
ರಾಮನಗರದಲ್ಲಿ 40 ಕೋಟಿ ರೂ. ವೆಚ್ಚದಲ್ಲಿ 300 ಹಾಸಿಗೆಗಳ
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಕ್ರಮ
ಬೆಳಗಾವಿ, ಕಲಬುರಗಿ ಮತ್ತು ಮೈಸೂರು ನಗರಗಳಲ್ಲಿ ಹೃದ್ರೋಗ
ಮತ್ತು ಕ್ಯಾನ್ಸರ್ ಹಾಗೂ ಇತರ ರೋಗಗಳಿಗೆ ಸಂಬಂಧಿಸಿದ ತೃತೀಯ ಹಂತದ ಆರೋಗ್ಯ ಸೇವೆ ಒದಗಿಸಲು ಹೊಸ ಸೂಪರ್
ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭ.
ಅನ್ನಭಾಗ್ಯ ಯೋಜನೆ 2ಕೆಜಿ ಅಕ್ಕಿ ಕಡಿತ:
ಪ್ರಸ್ತುತ ನೀಡಲಾಗುತ್ತಿರುವ ಪ್ರತಿ ವ್ಯಕ್ತಿಗೆ 7 ಕೆಜಿ ರೂ.ನಂತಿದ್ದ ಅಕ್ಕಿ ಈಗ 5 ಕೆಜಿಗೆ ಇಳಿಸಲಾಗಿದೆ. ಇದರೊಂದಿಗೆ 1 ಕೆಜಿ ತೊಗರಿಬೆಳೆ ಈಗ ಅರ್ಧ ಕೆಜಿಗೆ ಇಳಿಸಲಾಗಿದೆ.
5 ಕೆ.ಜಿ ಉಚಿತ ಅಕ್ಕಿ ಮತ್ತು ರಿಯಾಯಿತಿ ದರದಲ್ಲಿ ಅರ್ಧ ಕೆ.ಜಿ.
ತೊಗರಿಬೇಳೆ ಹಾಗೂ ಪ್ರತಿ ಬಿಪಿಎಲ್ ಪಡಿತರ ಚೀಟಿಗೆ 1 ಕೆ.ಜಿ.
ಪಾಮ್ ಎಣ್ಣೆ, 1 ಕೆ.ಜಿ. ಅಯೋಡಿನ್ ಮತ್ತು ಕಬ್ಬಿಣಾಂಶಯುಕ್ತ
ಉಪ್ಪು ಹಾಗೂ 1 ಕೆ.ಜಿ. ಸಕ್ಕರೆ ವಿತರಣೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ:
“ಮುಖ್ಯಮಂತ್ರಿ ಮಾತೃಶ್ರೀ ಯೋಜನೆ” 2018ರ ನವೆಂಬರ್
1 ರಿಂದ ಜಾರಿ; ಬಿಪಿಎಲ್ ಕುಟುಂಬದ ಗರ್ಭಿಣಿಯರಿಗೆ ಮೂರು ತಿಂಗಳು ಹಾಗೂ ಬಾಣಂತಿಯರಿಗೆ ಮೂರು ತಿಂಗಳ ಅವಧಿಗೆ
ಮಾಸಿಕ 1,000 ರೂ. ನಂತೆ ಒಟ್ಟು 6,000 ರೂ. ನೀಡಲು ಕ್ರಮ; ಈ ಯೋಜನೆಗೆ 350 ಕೋಟಿ ರೂ. ಅನುದಾನ.
ವಾಣಿಜ್ಯ ಮತ್ತು ಕೈಗಾರಿಕೆ:
ಕಲಬುರಗಿಯನ್ನು ಸೋಲಾರ್ ಜಿಲ್ಲೆಯನ್ನಾಗಿ ಪರಿವರ್ತನೆ
ಮಾಡುವ ಉದ್ಯಮ ಅಭಿವೃದ್ಧಿ, ಹಾಸನ ಜಿಲ್ಲೆಯನ್ನು ಸ್ನಾನಗೃಹ
ನೆಲಹಾಸು ಮತ್ತು ಸ್ಯಾನಿಟರಿ ಉಪಕರಣಗಳ ಉತ್ಪಾದಕ ಜಿಲ್ಲೆಯಾಗಿ ಅಭಿವೃದ್ಧಿ, ಕೊಪ್ಪಳ ಜಿಲ್ಲೆಯಲ್ಲಿ ಆಟಿಕೆ ಸಾಮಾನುಗಳ ಉತ್ಪಾದನಾ
ಕ್ಲಸ್ಟರ್, ಮೈಸೂರಿನಲ್ಲಿ ಐಸಿ ಚಿಪ್ ತಯಾರಿಕಾ ವಲಯ,
ಬಳ್ಳಾರಿಯಲ್ಲಿ ವಸ್ತ್ರ ಉದ್ಯಮ, ಚಿಕ್ಕಬಳ್ಳಾಪುರದಲ್ಲಿ ಮೊಬೈಲ್
ಫೋನ್ ಬಿಡಿಘಟಕಗಳ ಉದ್ಯಮ ಸ್ಥಾಪಿಸಲು ಕ್ರಮ.
ತುಮಕೂರಿನಲ್ಲಿ ಸ್ಪೋಟ್ರ್ಸ್ ಮತ್ತು ಫಿಟ್‍ನೆಸ್ ವಸ್ತುಗಳ
ಉತ್ಪಾದನೆಗೆ ಕ್ರಮ;
ಬೀದರ್ ಜಿಲ್ಲೆಯಲ್ಲಿ ಕೃಷಿ ಉಪಕರಣ ಯಂತ್ರ
ತಯಾರಿಕೆಗೆ ಒತ್ತು.
ಜಲ ಸಂಪನ್ಮೂಲ:
ಮೇಕೆದಾಟು ಯೋಜನೆ ಕಾರ್ಯಗತಗೊಳಿಸಲು ಕ್ರಮ.
ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಮೆರಿಕಾದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆ.ಆರ್.ಎಸ್. ಅಭಿವೃದ್ಧಿಗೆ ಕ್ರಮ. ಡಿಪಿಆರ್
ತಯಾರಿಕೆಗೆ 5 ಕೋಟಿ ರೂ. ಅನುದಾನ.
ಮಹದಾಯಿ ನದಿ ವಿವಾದದ ನ್ಯಾಯಾಧಿಕರಣ ತೀರ್ಪು ಆಗಸ್ಟ್ 2018 ರಲ್ಲಿ ಬರುವ ನಿರೀಕ್ಷೆ; ತೀರ್ಪಿನ ಅನ್ವಯ ಕಾಮಗಾರಿ
ಕೈಗೆತ್ತಿಕೊಳ್ಳಲು ಕ್ರಮ.
ಕೃಷ್ಣಾ ಮೇಲ್ದಂಡೆ ಯೋಜನೆ 3 ನೇ ಹಂತದ ಪುನರ್ವಸತಿ ಮತ್ತುಪುನರ್‍ನಿರ್ಮಾಣ ಕಾರ್ಯಕ್ಕೆ ಚುರುಕು.
ಸಣ್ಣ ನೀರಾವರಿ:
ಹಾಸನ ತಾಲ್ಲೂಕು ದುದ್ದ ಮತ್ತು ಶಾಂತಿಗ್ರಾಮ ಹೋಬಳಿ ವ್ಯಾಪ್ತಿಯ 160 ಕೆರೆಗಳಿಗೆ 70 ಕೋಟಿ ರೂ. ವೆಚ್ಚದಲ್ಲಿ ಹೇಮಾವತಿ
ನದಿಯಿಂದ ನೀರು ತುಂಬಿಸುವ ಯೋಜನೆ ಜಾರಿ.
ಮಂಡ್ಯ ತಾಲ್ಲೂಕಿನ
ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೆ 30 ಕೋಟಿ ರೂ.ಗಳ ಅನುದಾನ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನಲ್ಲಿ ಕೃಷ್ಣಾ ನದಿಯಿಂದ 100
ಕೋಟಿ ರೂ. ವೆಚ್ಚದಲ್ಲಿ ಏತ ನೀರಾವರಿ ಯೋಜನೆ ಜಾರಿ
ಕಂದಾಯ:
ಸಂಧ್ಯಾ ಸುರಕ್ಷಾ ಯೋಜನೆ ಮಾಸಾಶನ ಮೊತ್ತ ಸಾವಿರ ರೂ. ಗಳಿಗೆ ಹೆಚ್ಚಳ. 32.92 ಲಕ್ಷ ಫಲಾನು¨s Àವಿಗಳಿಗೆ ಅನುಕೂಲ; 660
ಕೋಟಿ ರೂ. ಹೆಚ್ಚುವರಿ ಅನುದಾನ; 1ನೇ ನವೆಂಬರ್ 2018 ರಿಂದ ಜಾರಿ.
ಐದು ಜಿಲ್ಲೆಗಳಲ್ಲಿ ಮರು ಭೂಮಾಪನಾ ಕಾರ್ಯ ಪ್ರಾರಂಭ. 50 ನಾಡಕಛೇರಿಗಳಿಗೆ ಮೂಲಸೌಕರ್ಯ ಅಭಿವೃದ್ಧಿಗಾಗಿ
10 ಕೋಟಿ ರೂ. ಅನುದಾನ.
ಮುಜರಾಯಿ:
ಬ್ರಾಹ್ಮಣ ಸಮುದಾಯದ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗಾಗಿ “ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ”
ಸ್ಥಾಪನೆಗೆ 25 ಕೋಟಿ ರೂ. ಅನುದಾನ.
ಕನ್ನಡ ಮತ್ತು ಸಂಸ್ಕøತಿ:
ರಾಜ್ಯಾದ್ಯಂತ ಆದಿ ಶಂಕರಾಚಾರ್ಯರ ಜಯಂತಿ ಆಚರಣೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ
ಡಾ|| ರಾಜ್‍ಕುಮಾರ್ ಸ್ಮರಣಾರ್ಥ ಶ್ರೀ ಕಂಠೀರವ ಸ್ಟುಡಿಯೋ ಆವರಣದಲ್ಲಿ ಸುಸಜ್ಜಿತ ಯೋಗ ಕೇಂದ್ರ ಸ್ಥಾಪನೆ
ರಾಮನಗರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಚಲನಚಿತ್ರ ವಿಶ್ವವಿದ್ಯಾನಿಲಯ ಪ್ರಾರಂಭಿಸಲು 30 ಕೋಟಿ ರೂ. ಬಂಡವಾಳ ಹೂಡಿಕೆ ರಾಮನಗರದ ಫಿಲ್ಮ್ ಸಿಟಿಯಲ್ಲಿಚಲನಚಿತ್ರಕ್ಕೆ ಸೇವೆ
ಲೋಕೋಪಯೋಗಿ:
ಹಾಸನ ನಗರದ ಸುಗಮ ಸಂಚಾರಕ್ಕಾಗಿ ಹಾಸನ ನಗರದ ಸುತ್ತ 30 ಕೋಟಿ ರೂ. ವೆಚ್ಚದಲ್ಲಿ ವರ್ತುಲ ರಸ್ತೆ ನಿರ್ಮಾಣ.
ನಗರಾಭಿವೃದ್ಧಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಬೆಂಗಳೂರಿನಲ್ಲಿ ಉತ್ತಮ ಸಾರಿಗೆ ಸಂಪರ್ಕ ಏರ್ಪಡಿಸಲು 15825 ಕೋಟಿ ರೂ.ಗಳ ವೆಚ್ಚದಲ್ಲಿ ಪರಸ್ಪರ ಸಂಪರ್ಕ ಹೊಂದಿರುವ ಆರು
ಎಲಿವೇಟೆಡ್ ಕಾರಿಡಾರ್‍ಗಳ ನಿರ್ಮಾಣ.