ಸುನಂದಾ ಪುಷ್ಕರ್ ಸಾವು ಪ್ರಕರಣ: ಶಶಿ ತರೂರ್ ಗೆ ನಿರೀಕ್ಷಣಾ ಜಾಮೀನು ಮಂಜೂರು

ನವದೆಹಲಿ: ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಶಶಿ ತರೂರ್ ಅವರಿಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಒಂದು ಲಕ್ಷ ರೂಪಾಯಿ ಬಾಂಡ್ ನ್ನು ನ್ಯಾಯಾಲಯಕ್ಕೆ ಒದಗಿಸಿ ನಿರೀಕ್ಷಣಾ ಜಾಮೀನು ಪಡೆಯಬೇಕಾಗಿದೆ.ದೆಹಲಿಯ ಹೊಟೇಲೊಂದರಲ್ಲಿ ಸುನಂದಾ ಪುಷ್ಕರ್ ಅಸಹಜವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿ ತರೂರ್ ಅವರ ಹೆಸರು ಕೇಳಿಬರುತ್ತಿದೆ. 2014ರ ಜನವರಿ 17ರಂದು  ದೆಹಲಿಯ ಐಷಾರಾಮಿ ಹೊಟೇಲೊಂದರಲ್ಲಿ ಸುನಂದಾ ಪುಷ್ಕರ್ ಮೃತಪಟ್ಟಿದ್ದರು.ಶಶಿ ತರೂರ್ ತಮ್ಮ ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ಕೇಸಿನಲ್ಲಿ ಸಲ್ಲಿಸಲಾಗಿದ್ದ ಆರೋಪಪಟ್ಟಿಯನ್ನು ನೀಡಿದ್ದು ವಿಶೇಷ ತನಿಖಾ ತಂಡ ತನಿಖೆ ನಡೆಸಿ ತನಿಖೆ ಮುಗಿದಿದ್ದು ಶಶಿ ತರೂರ್ ಅವರನ್ನು ಬಂಧಿಸಿ ತನಿಖೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದೆ.ಪ್ರಕರಣದಲ್ಲಿ ಆರೋಪಿಯಾಗಿ ಇಂದು ತನಿಖೆಗೆ ಕರೆದ ನ್ಯಾಯಾಲಯ ಅವರ ವಿರುದ್ಧ ತನಿಖೆ ಮಾಡುವ ಎಲ್ಲಾ ಸಾಕ್ಷ್ಯಗಳಿವೆ ಎಂದು ಹೇಳಿ ಜುಲೈ 7ರೊಳಗೆ ಮುಂದಿನ ತನಿಖೆಗೆ ಹಾಜರಾಗಬೇಕೆಂದು ಹೇಳಿದೆ.ಭಾರತೀಯ ದಂಡಸಂಹಿತೆಯ ಸೆಕ್ಷನ್ 498ಎ ಮತ್ತು ಸೆಕ್ಷನ್ 306ರಡಿ ಶಶಿ ತರೂರ್ ವಿರುದ್ಧ ಆರೋಪ ದಾಖಲಾಗಿದೆ. 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ