ಸೆಟ್ಟೇರಲಿದೆ ಧೋನಿ ಜೀವನ ಆಧಾರಿತ ಮತ್ತೊಂದು ಚಿತ್ರ

2019ಕ್ಕೆ ಎಂ.ಎಸ್.ಧೋನಿ ತೆರೆಗೆ
ಮುಂಬೈ: ಕಳೆದ ವರ್ಷ ಬಾಕ್ಸ್ ಆಫೀಸ್‍ನಲ್ಲಿ ಭಾರೀ ಸದ್ದು ಮಾಡಿದ್ದ ಟೀಂ ಇಂಡಿಯಾದ ಮಿಸ್ಟರ್ ಕೂಲ್ ಧೋನಿ ಅವರ ಜೀನಧಾರಿತ ಚಿತ್ರ ದಿ ಅನ್ ಟೋಲ್ಡ್ ಸ್ಟೋರಿ ಚಿತ್ರದ ಎರಡನೇ ಭಾಗ ತೆರೆ ಮೇಲೆ ಬರಲಿದೆ ಎಂದು ತಿಳಿದು ಬಂದಿದೆ.
ಕಳೆದ ಕೆಲವು ವರ್ಷಗಳಿಂದ ಬಾಲಿವುಡ್‍ನಲ್ಲಿ ಜೀವನಾಧಾರಿತ ಚಲನ ಚಿತ್ರಗಳು ಯಶಸ್ಸು ಕಂಡಿವೆ. ಈ ಪೈಕಿ ಕಳೆದ ವರ್ಷ ಧೋನಿ ಅವರ ಜೀವನಾಧರಿತ ಚಿತ್ರ ದಿ ಅನ್‍ಟೋಲ್ಡ್ ಸ್ಟೋರಿ ಕೂಡ ಒಂದು. ಸುಶಾಂತ್ ಸಿಂಗ್ ರಜಪೂತ್ ಧೋನಿ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಕೋಟಿ ಕೋಟಿ ಹಣ ಸಂಪಾದಿಸಿತ್ತು.
ಇದೀಗ ಅರ್‍ಎಸ್‍ವಿಪಿ ಫಿಲಂ ಪ್ರೊಡಕ್ಷನ್ ಧೋನಿ ಜೀವನಾಧಾರಿತ ಮತ್ತೊಂದು ಚಿತ್ರವನ್ನ ತೆಗೆಯಲು ತೀರ್ಮನಿಸಿದೆ. ಎಂ.ಎಸ್.ಧೋನಿ ಎಂದು ಚಿತ್ರದ ಟೈಟಲ್ ಅಗಿದೆ. ಈ ಚಿತ್ರದಲ್ಲೂ ಸುಶಾಂತ್ ಧೋನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. 2011ರ ವಿಶ್ವಕಪ್ ಗೆಲುವು ಚಿತ್ರದ ಪ್ರಮುಖ ಅಂಶÀ ಆಗಿದೆ. 2019ರ ವೇಳೆಗೆ ಈ ಸಿನಿಮಾ ತೆರೆಗೆ ಬರಲಿದೆ ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ