
ತುಮಕೂರು, ಜು.4-ದ್ವಿಚಕ್ರ ವಾಹನ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮ್ಯಾಕಾನಿಕ್ಸ್ಗಳು ಸಾವನಪ್ಪಿರುವ ಘಟನೆ ಗುಬ್ಬಿ-ನಿಟ್ಟೂರು ಮಾರ್ಗಮಧ್ಯೆಯ ಬೆಂಜನಗೆರೆಗೇಟ್ ಬಳಿ ತಡರಾತ್ರಿ ಸಂಭವಿಸಿದೆ. ತುಮಕೂರಿನ ಪುರಸ್ಕಾಲೋನಿಯ ನಿವಾಸಿಗಳಾದ ಅಜ್ಗರ್ಪಾಷಾ(28), ಇಮ್ರಾನ್ಪಾಷಾ(40) ಹಾಗೂ ಇಮ್ರಾನ್(30)ಮೃತಪಟ್ಟ ದುರ್ದೈವಿಗಳು. ಇವರು ನಿಟ್ಟೂರಿನಲ್ಲಿ ಲಾರಿ ರಿಪೇರಿ ಮಾಡಿ ದ್ವಿಚಕ್ರ ವಾಹನದಲ್ಲಿ ತುಮಕೂರಿಗೆ ವಾಪಸ್ ಬರುತ್ತಿದ್ದಾಗ ಚಿಕ್ಕಮಗಳೂರು ಕಡೆಗೆ ತೆರಳುತ್ತಿದ್ದ ಕಾರಿಗೆ ಅಪ್ಪಳಿಸಿದ ಪರಿಣಾಮ ಅಜ್ಗರ್, ಇಮ್ರಾನ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಗುಬ್ಬಿ ಠಾಣೆ ಇನ್ಸ್ಪೆಕ್ಟರ್ ಗಂಗಾಧರ್, ಸಿಪಿಐ ರಂಗಸ್ವಾಮಿ, ಡಿವೈಎಸ್ಪಿ ವೆಂಕಟನಾಯ್ಡು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.