ಜೆಮ್ಶೆಡ್ಪುರ್, ಜು.4-ಶಿಕ್ಷಕಿಯ ಶಿರಚ್ಛೇದ ಮಾಡಿದ ಮಾನಸಿಕ ಅಸ್ವಸ್ಥನೊಬ್ಬ ರುಂಡವನ್ನು ಹಿಡಿದುಕೊಂಡು ಆಕೆಯ ಶವದ ಸುತ್ತ ಎರಡು ಗಂಟೆ ಪ್ರದಕ್ಷಿಣೆ ಹಾಕಿದ ಭೀಭತ್ಸ ಘಟನೆ ಜಾರ್ಖಂಡ್ನ ಸೆಐಕೆಲಾ-ಖಾರಸ್ವಾನ್ ಜಿಲ್ಲೆಯ ಶಾಲೆಯೊಂದರ ಬಳಿ ನಡೆದಿದೆ.
ಈ ಭೀಕರ ಕೃತ್ಯ ಎಸಗಿ ಮೃತದೇಹದ ಸುತ್ತ ಸುತ್ತು ಹಾಕಿ ತನ್ನನ್ನು ಬೆನ್ನಟ್ಟಿದ ಗುಂಪಿನಿಂದ ಪಾರಾಗಲು 5 ಕಿ.ಮೀ. ದೂರದ ಅರಣ್ಯದೊಳಗೆ ಓಡಿ ಹೋಗಿದ್ದ ಹರಿ ಹೇಮಬ್ರಹ್ಮ್ (26) ಎಂಬ ಮಾನಸಿಕ ಅಸ್ವಸ್ಥನನ್ನು ನಂತರ ಪೆÇಲೀಸರು ಬಂಧಿಸಿದ್ಧಾರೆ.
ಕಪ್ರಾಸಿ ಪ್ರಾಥುಕ ಶಾಲೆಯ ದ್ಯಾರ್ಥಿಗಳಿಗೆ ನಿನ್ನೆ ಮಧ್ಯಾಹ್ನದ ಬಿಸಿ ಊಟ ನೀಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೆÇಲೀಸ್ ಅಧಿಕಾರಿ ಅನಾಶ್ ಕುಮಾರ್ ತಿಳಿಸಿದ್ದಾರೆ. ಬುದ್ಧಿಭ್ರಮಣೆಗೊಂಡ ಹರಿ ನಿನ್ನೆ ಮಧ್ಯಾಹ್ನ ಶಾಲಾ ಆವರಣ ಪ್ರವೇಶಿಸಿ 30 ವರ್ಷದ ಶಿಕ್ಷಕಿ ಸುಕ್ರಾ ಹೆಸಾ ಎಂಬುವರನ್ನು ಹೊರಗೆ ಎಳೆದೊಯ್ದು ಹರಿತವಾದ ಆಯುಧದಿಂದ ರುಂಡ ಕತ್ತರಿಸಿದ. ಈ ಘಟನೆ ನಂತರ ಎರಡು ಗಂಟೆ ಕಾಲ ಶವದ ಸುತ್ತ ತಿರುಗಿದ. ಈ ಭೀಕರ ಘಟನೆಯಿಂದ ಬೆಚ್ಚಿ ಬಿದ್ದ ಜನರು ಪೆÇಲೀಸರಿಗೆ ಸುದ್ದಿ ಮುಟ್ಟಿಸಿದರು. ಈತ ಎರಡು ಖಡ್ಗಗಳನ್ನು ಡಿದುಕೊಂಡಿದ್ದರಿಂದ ಆತನ ಬಳಿ ಹೋಗಲು ಯಾರೂ ಧೈರ್ಯ ಮಾಡಲಿಲ್ಲ. ಪೆÇಲೀಸರು ಆತನನ್ನು ಗುಂಡಿಕ್ಕಿ ಕೊಲ್ಲಲು ಒಂದು ಹಂತದಲ್ಲಿ ಸಿದ್ಧರಾಗಿದ್ದರು. ಆದರೆ ಅನೇಕ ಜನರು ಆತನ ಸಮೀಪವೇ ಇದ್ದ ಕಾರಣ ಆ ನಿರ್ಧಾರವನ್ನು ಕೈಬಿಟ್ಟರು.
ನಂತರ ಪೆÇಲೀಸರು ಮತ್ತು ಜನರು ಗುಂಪು ತನ್ನತ್ತ ಬರುವುದನ್ನು ನೋಡಿದ ಆತ, 5 ಕಿ.ುೀ. ದೂರದ ಅರಣ್ಯದೊಳಗೆ ಕತ್ತಿರಿಸಿದ ರುಂಡದೊಂದಿಗೆ ಓಡಿ ಹೋದ.
ರೊಚ್ಚಿಗೆದ್ದ ಗುಂಪಿನಿಂದ ಹರಿ ಹತ್ಯೆಯಾಗುವುದನ್ನು ತಡೆಯಲು ಪೆÇಲೀಸರು ಮುಂದಾದಾಗ ನಡೆದ ಘರ್ಷಣೆಯಲ್ಲಿ ಪೆÇಲೀಸರೂ ಸೇರಿದಂತೆ ಹಲವರು ಗಾಯಗೊಂಡರು. ನಂತರ ಹರಿಯನ್ನು ಬಂಧಿಸಲಾಯಿತು. ಸರ್ದಾರ್ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಿದ ಬಳಿಕ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾನೂನು ಪ್ರಕಾರ ಆತನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹಿರಿಯ ಪೆÇಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.