ಪ್ರಜ್ವಲ್ ದೇವರಾಜ್‍ಗೆ ಇಂದು ತಮ್ಮ 31ನೇ ಹುಟ್ಟುಹಬ್ಬ

 

ಬೆಂಗಳೂರು, ಜು.4-ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಇಂದು ತಮ್ಮ 31ನೇ ಹುಟ್ಟುಹಬ್ಬವನ್ನು ಕುಟುಂಬ ಹಾಗೂ ಅಭಿಮಾನಿಗಳೊಂದಿಗೆ ಸಂಭ್ರಮದಿಂದ ಆಚರಿಸಿಕೊಂಡರು.
ಹುಟ್ಟುಹಬ್ಬದ ಅಂಗವಾಗಿ ಗುರು ದೇಶ್‍ಪಾಂಡೆ ನಿರ್ಮಿಸುತ್ತಿರುವ ಚಿತ್ರವೊಂದರ ಮುಹೂರ್ತವನ್ನು ಇಂದೇ ನೆರವೇರಿಸಲಾಯಿತು.
ರಾಜಹಂಸ ಖ್ಯಾತಿಯ ಜಡೇಶ್‍ಕುಮಾರ್ ಈ ಚಿತ್ರಕ್ಕೆ ನಿರ್ದೇಶನದ ಮಾಡುತ್ತಿದ್ದು, ಜಂಟಲ್‍ಮೆನ್ ಎಂಬ ಹೆಸರಿನಲ್ಲಿ ಚಿತ್ರ ನಿರ್ಮಿಸಲಾಗುತ್ತಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿ ಪ್ರಜ್ವಲ್ ಮತ್ತು ಚಿತ್ರತಂಡಕ್ಕೆ ಶುಭ ಕೋರಿದರು.
ಸಿಕ್ಸರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರಜ್ವಲ್ ಭದ್ರ ,ಗೆಳೆಯ, ಚೌಕ, ಮುರುಳಿ ಮೀಟ್ಸ್ ಮೀರಾ, ಗುಲಾಮ ಸೇರಿದಂತೆ ಇನ್ನಿತರ ಚಿತ್ರಗಳಲ್ಲಿ ಪ್ರಜ್ವಲ್ ನಟಿಸಿದ್ದಾರೆ.
ನಿನ್ನೆಯಷ್ಟೇ ಪ್ರಜ್ವಲ್ ಅಭಿನಯದ ಇನ್‍ಸ್ಪೆಕ್ಟರ್ ವಿಕ್ರಮ ಚಿತ್ರದ ಟೀಸರ್ ಕೂಡ ಬಿಡುಗಡೆಗೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ