ದೋಣಿ ಮುಳುಗಿ 70ಕ್ಕೂ ಹೆಚ್ಚು ಮಂದಿ ಜಲಸಮಾಧಿ

ಜಕಾರ್ತ, ಜು.4-ಇಂಡೋನೆಷ್ಯಾದ ಕರಾವಳಿ ಪ್ರದೇಶವೊಂದರಲ್ಲಿ ದೋಣಿ ಮುಳುಗಿ 70ಕ್ಕೂ ಹೆಚ್ಚು ಮಂದಿ ಜಲಸಮಾಧಿಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆಗ್ನೇಯ ಏಷ್ಯಾದ ದ್ವೀಪ ಸಮೂಹದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ನೌಕಾ ದುರಂತ ಇದಾಗಿದೆ.
ಈ ದೋಣಿ ದುರಂತದಲ್ಲಿ ಕೆಲವರು ಕಣ್ಮರೆಯಾಗಿದ್ದು, ಅವರಿಗಾಗಿ ತೀವ್ರ ಶೋಧ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೆಎಂ ಲೆಸ್ಟರಿ ಹೆಸರಿನ ದೋಣಿ ಸುಮಾರು 140 ಪ್ರಯಾಣಿಕರು ಹಾಗೂ ಅನೇಕ ವಾಹನಗಳನ್ನು ಹೊತ್ತೊಯ್ಯುತ್ತಿತ್ತು. ಸುಲಾವೆಸಿ ದ್ವೀಪದ ಬಳಿ ಈ ನೌಕೆಯು ಮುಳುಗಡೆಯಾಯಿತು. ಈ ದುರ್ಘಟನೆಯಲ್ಲಿ ಈವರೆಗೆ 70ಕ್ಕೂ ಹೆಚ್ಚು ಮಂದಿ ನೀರು ಪಾಲಾಗಿದ್ದಾರೆ. ಇನ್ನು ಹಲವರು ಕಣ್ಮರೆಯಾಗಿದ್ದು, ಕೆಲವರು ಮಾತ್ರ ಸುರಕ್ಷಿತವಾಗಿ ಈಜಿ ದಡ ಸೇರಿದ್ದಾರೆ. ಇನ್ನು ಕೆಲ ಪ್ರಯಾಣಿಕರನ್ನು ರಕ್ಷಿಸಲಾಗಿದೆ.
ನಾಪತ್ತೆಯಾಗಿರುವ ಮಂದಿಗಾಗಿ ತೀವ್ರ ಶೋಧ ಮುಂದುವರಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ