ಕಠ್ಮಂಡು, ಜು.4- ಟಿಬೆಟ್‍ನಲ್ಲಿರುವ ಕೈಲಾಸ ಮಾನಸ ಸರೋವರ ಪವಿತ್ರ ಯಾತ್ರೆಯಿಂದ ಹಿಂದಿರುಗುತ್ತಿದ್ದಾಗ ಭಾರೀ ಮಳೆಯಿಂದ ನೇಪಾಳದ ಪರ್ವತಮಯ ಪ್ರದೇಶದಲ್ಲಿ ಅತಂತ್ರ ಪರಿಸ್ಥಿತಿಯಲ್ಲಿ ಸಿಲುಕಿದ್ದ 100ಕ್ಕೂ ಹೆಚ್ಚು ಮಂದಿ ಭಾರತೀಯರನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ಐದು ವಾಣಿಜ್ಯ ವಿಮಾನಗಳು ಹಾಗೂ ಒಂದು ನೇಪಾಳ ಸೇನಾ ಹೆಲಿಕಾಪ್ಟರ್ ಭಾರತೀಯ ಯಾತ್ರಿಗಳ ರಕ್ಷಣೆ ಮತ್ತು ಸ್ಥಳಾಂತರಕ್ಕೆ ನೆರವಾದವು. ಇಲ್ಸಾ ಪರ್ವತ ಪ್ರದೇಶದಲ್ಲಿ ನಿನ್ನೆ ಅತಂತ್ರ ಪರಿಸ್ಥಿತಿಗೆ ಸಿಲುಕಿದ್ದ 1500 ಭಾರತೀಯ ಯಾತ್ರಿಕರಲ್ಲಿ ಸುಮಾರು 250 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.