ನಾವೀಗ ಉದ್ದಿಮೆ ಮಾಲೀಕರು ಮತ್ತು ಸಂಸ್ಥೆ ಹಿರಿಯ ನಿರ್ವಹಣಾಧಿಕಾರಿಗಳೊಂದಿಗೆ ಪ್ರಶ್ನೆ ರೂಪದ ಸಂವಾದ ಮಾಡೋಣ…
- ನಿಮ್ಮಲ್ಲಿ ಉದ್ದಿಮೆ ಹಾಗೂ ಪಾಲುದಾರರನ್ನು ಸಂಪೂರ್ಣ ತೃಪ್ತಿಗೊಳಿಸುವ ಸಮಗ್ರ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆಯೇ?
- ನಿಮ್ಮಲ್ಲಿರುವ ಸಮಗ್ರ ವ್ಯವಸ್ಥೆ ಸಂಸ್ಥೆಯ ಸುಧಾರಣೆ ಮತ್ತು ಉನ್ನತಿಗೆ ನೆರವಾಗಲಿದೆ ಎಂಬ ವಿಶ್ವಾಸ ಹೊಂದಿರುವ ನಿಮಗೆ ಕಾರ್ಯಗತಗೊಳಿಸಲು ಸಾಧ್ಯವಾಗುತ್ತಿಲ್ಲವೇ?
- ನಿಮಗೆ ಟಿಪಿಎಂ, ಕೈಸನ್, 5 ಎಸ್, ಲೀನ್ 6 ಸಿಗ್ಮಾ, ಬಗ್ಗೆ ತಿಳಿದಿದ್ದು, ಆದರೆ ಇದನ್ನು ನಿಮ್ಮ ವ್ಯವಸ್ಥೆಯಲ್ಲಿ ಕಾರ್ಯಗತಗೊಳಿಸಲು ಮತ್ತು ನಿಮ್ಮ ಸಿಬ್ಬಂದಿಯ ತಂಡಕ್ಕೆ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ ಅವಶ್ಯಕತೆ ಇದೆ ಎನಿಸುತ್ತಿದೆಯೇ?
- ಉದ್ದಿಮೆಯ ಪ್ರತಿಯೊಂದು ಚಟುವಟಿಕೆಗಳಲ್ಲಿ ವೆಚ್ಚ ಕಡಿತ ಹಾಗೂ ನಿರ್ವಹಣೆ ಮತ್ತು ಸಮಯದ ಸದ್ಬಳಕೆಯನ್ನು ಮಾಡುವ ರೀತಿ-ನೀತಿಗಳನ್ನು ರೂಪಿಸುವ (ರೂಪಿಸುವವರ) ಅಗತ್ಯವಿದೆಯೇ?
- ಉದ್ದಿಮೆಯ ಗುಣಮಟ್ಟ ಪರಿಶೀಲನೆ, ಸುರಕ್ಷತಾ ಮೌಲ್ಯಮಾಪನ, ಕಚೇರಿ ವಾತಾವರಣದ ನಿಸ್ಕರ್ಷೆ ಜೊತೆಗೆ ಅಗತ್ಯ ಸುರಕ್ಷತಾ ನಿಯಮಗಳನ್ನು ಪಾಲಿಸಲು ನೆರವಿನ ಅಗತ್ಯವಿದೆಯೇ?
“ನಮಗೆ ಗೊತ್ತಿರುವ ಹಾಗೆ ಬದಲಾವಣೆಯೊಂದೇ ಶಾಶ್ವತ ಮತ್ತು ಮುಖ್ಯವಾಗಿ ಅದೇ ಸ್ಥಳದಲ್ಲಿರಲು ನಾವು ನಿನ್ನೆಗಿಂತಲೂ ಹೆಚ್ಚು ವೇಗವಾಗಿ ಓಡಬೇಕಿದೆ” ಎಂದು ವ್ಯಾಪಾರ-ವಹಿವಾಟುಗಳ ತಜ್ನ ಸಲಹೆಗಾರ ತರಬೇತುದಾರ ಬಾಲಮುರುಗನ್ ಹೇಳುತ್ತಾರೆ.
ಯಶಸ್ವಿ ಸಂಸ್ಥೆಗಳು ಬದಲಾವಣೆಗಳನ್ನು ಮತ್ತು ಸುಧಾರಣೆಗಳನ್ನು ಪ್ರತಿಯೊಂದು ವಿಷಯಗಳಲ್ಲಿಯೂ ತಕ್ಷಣ ಅಳವಡಿಸಿರುವುದೇ ಸಾಧನೆಗೆ ಕಾರಣವಾಗಿದೆ. ಈ ಪದ್ಧತಿಯಿಂದ ಹೊಸ ಗ್ರಾಹಕರನ್ನು ಸೆಳೆಯುವಲ್ಲಿ ಮತ್ತು ಖಾಯಂ ಗ್ರಾಹಕರನ್ನು ಉಳಿಸಿಕೊಳ್ಳುವಲ್ಲಿ ಸಾಧ್ಯವಾಗಿದೆ. ಇದರೊಂದಿಗೆ ಸಂಸ್ಥೆಯ ಪ್ರಮುಖ ಆಸ್ತಿ ಎನಿಸಿರುವ ಉದ್ಯೋಗಿಗಳನ್ನು ಮರೆಯಲೇಬಾರದು. ಅವರನ್ನು ಕೇವಲ ತರಬೇತಿಗೊಳಿಸಿದರೆ ಮಾತ್ರ ಸಾಲದು, ಅವರನ್ನು ಆಗಾಗ್ಯೇ ಉನ್ನತೀಕರಣಗೊಳಿಸಿ, ಉತ್ತಮ ದೃಷ್ಟಿಕೋನನೀಡಿ ಕಾರ್ಯನಿರ್ವಹಿಸುವಂತೆ ಪ್ರೇರೇಪಿಸಬೇಕಾಗುತ್ತದೆ.
ಇದೆಲ್ಲವನ್ನೂ ಕಾರ್ಯಗತಗೊಳಿಸುವುದು ಹೇಗೆ?
ಈ ಎಲ್ಲಾ ಮೇಲಿನ ಅಂಶಗಳನ್ನು ಉದ್ದಿಮೆಗಳ ಯಶಸ್ಸಿಗಾಗಿ ಅಳವಡಿಸುವ ಬಗ್ಗೆ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ:-
1. ಅನುಭವಿ ಮತ್ತು ಪ್ರಾಮಾಣಿಕ ಲೆಕ್ಕಪರಿಶೋಧಕರಿಂದ ISO 9000/14000/18000 ಮಾದರಿಯ ಪರಿಶೀಲನೆ ನಡೆಸಿ, ಉದ್ಯಮಿಯ ಗುಣಮಟ್ಟ, ಸುರಕ್ಷತೆ ಹಾಗೂ ಕಛೆರಿಯ ಸ್ಥಿತಿಗತಿಯ ಬಗ್ಗೆ ನಿಸ್ಕರ್ಷೆ ನಡೆಸುವುದು.
2.ಬಹುತೇಕ ಉದ್ದಿಮೆಗಳು ಮೌಲ್ಯವರ್ದಿತ ವಿಷಯಗಳಲ್ಲಿ ಗಮನಾರ್ಹ ಸಾಧನೆಯಾಗಿರುವುದಿಲ್ಲ. ಆಗ ಸಂಸ್ಥೆಯ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಮೌಲ್ಯವರ್ಧನೆ ರೂಪು-ರೇಷೆಗಳನ್ನು ರಚಿಸುವುದರ ಮೂಲಕ ಚುರುಕಿನ ನಿರ್ವಹಣೆ, ಸುಧಾರಣೆ ಮತ್ತು ಎಲ್ಲಾ ವಿಭಾಗಗಳಲ್ಲಿಯೂ ಕಾರ್ಯಧಕ್ಷತೆಯನ್ನು ಕಂಡುಕೊಳ್ಳಲು ಸಾಧ್ಯವಿದೆ.
3. ಕಛೇರಿಯ ವಿವಿಧ ತಂಡಗಳನ್ನು TEI ಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ಶ್ರೇಷ್ಠತೆಯನ್ನು ಕಾಪಾಡುವುದರೊಂದಿಗೆ ಉದ್ಯೋಗಿಗಳು ಎಲ್ಲಾ ಹಂತಗಳಲ್ಲೂ ಉತ್ಸಾಹಿಗಳಾಗಿರುತ್ತಾರೆ.
4. ಗ್ರಾಹಕರ ಬೇಡಿಕೆಗಳಿಗೆ ತಕ್ಕಂತೆ ನಮ್ಮಲ್ಲಿ ಉತ್ಪಾದನೆಗೆ ಯಂತ್ರಗಳು ಅನುಕೂಲಕರವಾಗದಿದ್ದಲ್ಲಿ TPM ಪರಿಹಾರ ನೀಡಲಿದೆ. ಇಂತಹ ಸಂದರ್ಭಗಳಲ್ಲಿ ತರಬೇತಿ ಮೂಲಕ ಕಾರ್ಯಧಕ್ಷತೆ ಹಾಗೂ ಯಂತ್ರಗಳ ನಿರ್ವಹಣೆ ಹಾಗೂ ಸಮಗ್ರ ವ್ಯವಸ್ಥೆ ಮೂಲಕಬೇಡಿಕೆಯನ್ನು ಪೂರೈಸುವಲ್ಲಿ ಸಾಧ್ಯವಾಗಲಿದೆ.
5. ಸಿಬ್ಬಂದಿಗಳನ್ನು ಆದಷ್ಟು ಸನ್ನೆಗಳ ಮೂಲಕ ನಿರ್ವಹಣಾ ಶೈಲಿ ರೂಪಿಸಿದರೆ ಮಾತುಗಳು ಕಡಿಮೆಯಾಗಿ ಎಲ್ಲಾ ವಿವರಗಳನ್ನು ಬೇಗ ದೊರಕಿಸಲು ಸಾಧ್ಯವಿದೆ.
6. ಲೀನ್ ಸಿಕ್ಸ್ ಸಿಗ್ಮಾ (DMAIC) ವ್ಯವಸ್ಥೆ ಮೂಲಕ ನಿಮ್ಮ ಸಿಬ್ಬಂದಿ ಸಾಮರ್ಥ್ಯಗಳನ್ನು ಉನ್ನತೀಕರಿಸಿ, ಸಮಸ್ಯೆಗಳನ್ನು ವೈಜ್ನಾನಿಕ ರೀತಿಯಲ್ಲಿ ಪರಿಷ್ಕರಿಸಬಹುದು.
7. ವೆಚ್ಚಕಡಿತ ಪ್ರಮುಖವಾಗಿದ್ದು, ಕಚ್ಚಾ ವಸ್ತುಗಳ ಬಳಕೆ ಮತ್ತು ನಿರ್ವಹಣಾ ವಿಧಾನಗಳು ಪರಿಣಾಮಕಾರಿಗೊಳಿಸಲು ತರಬೇತಿ ಅಗತ್ಯ.
8. ನಿರ್ವಹಿಸಲೇಬೇಕಾದ SMED, RCA, SMEA ಮತ್ತು ಕಾರ್ಯಚತುವಟಿಕೆಗಳ ಆಧಾರಿತ ವಿಷಯಗಳಲ್ಲಿ ತರಬೇತಿ ಅವಶ್ಯಕ.
9. ಗ್ರಹಾಕರ ಪ್ರತಿಕ್ರಿಯೆಯನ್ನು ಉತ್ತಮಗೊಳಿಸುವುದು ಮತ್ತು ಅವರ ಬೇಡಿಕೆಗಳನ್ನು ಹೆಚ್ಚಳ ಮಾಡುವಲ್ಲಿ ತರಬೇತಿ ಅಗತ್ಯ.
10. ಆಡಳಿತ ಮಂಡಳಿಯ ಕಾರ್ಯಶೈಲಿ, ಯಾಂತ್ರಿಕ ವಿಭಾಗದ ಆಯ್ಕೆ, ವಿವಿಧ ಸೌಲಭ್ಯಗಳ ಚರ್ಚೆ ಮತ್ತು ನಿಗದಿತ ಕಾರ್ಯನಿರ್ವಹಣೆ ಬಗ್ಗೆ ಮಾರ್ಗದರ್ಶನ ಮಾಡುವುದು.
11. ಸಮಯ ನಿರ್ವಹಣೆ-ನಾಯಕತ್ವ, ಸಾಮೂಹಿಕ ಕಾರ್ಯನಿರ್ವಹಣೆ, ಆಂತರಿಕ ವ್ಯಕ್ತಿ ಸಂಬಂಧಗಳು, ಸುರಕ್ಷತೆ, ಕಾರ್ಯ ಪ್ರಸ್ತುತಿ ಮತ್ತು ಉದ್ಯೋಗ ಜೀವನದಲ್ಲಿ ಸಮತೋಲನದಲ್ಲಿ ಅಗತ್ಯ ಅರಿವು ಮೂಡಿಸುವುದರಿಂದ ಉತ್ತಮ ಫಲಿತಾಂಶ ಪಡೆಯಲು ನೆರವಾಗಲಿದೆ.
ಬಾಲಮುರುಗನ್:-
ತಜ್ನ ಸಲಹೆಗಾರರಾಗಿ ಮತ್ತು ಸರಕಾರಿ ಪ್ರಾಮಾಣಿಕೃತ ZED ಸಲಹಾಗಾರರಾಗಿ ಕಳೆದ 30 ವರ್ಷಗಳ ಅನುಭವವಿರುವ ಬಾಲಮುರುಗನ್ ಸ್ಟ್ರ್ಯಾಟಜಿಕ್ ಸೊಲುಷನ್ ಪ್ರೈ.ಲಿ. ನಿರ್ದೇಶಕರಾಗಿದ್ದಾರೆ. ಉತ್ಪಾದನೆ ಮತ್ತು ಸೇವಾ ವಲಯದಲ್ಲಿ ತಜ್ನ ಸಲಹೆಗಾರರಾಗಿರುವ ಅವರು ಕಾರ್ಯದಕ್ಷತೆ, ವೆಚ್ಚ ಕಡಿತ, ಜನಕಲ್ಯಾಣ ಮತ್ತು ಸಂಕ್ಷಿಪ್ತ ಕಾರ್ಯನಿರ್ವಹಣೆ ವಿಷಯಗಳಲ್ಲಿ ಅಪಾರ ಅಧ್ಯಯ ನಡೆಸಿರುವ ಅವರು ದೇಶ-ವಿದೇಶಗಳಲ್ಲಿ ವಿವಿಧ ಸಂಸ್ಥೆಗಳಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು 97407 63799 (Email: bala.a@straightegicsolutions.com) ದೂರವಾಣಿ ಮೂಲಕ ಸಂಪರ್ಕಿಸಬಹುದು.
ಇದರೊಂದಿಗೆ ಪರಿಣಾಮಕಾರಿ ವ್ಯಚ್ಚ ನಿರ್ವಹಣೆಗೆ ನೆರವಾಗಲಿ ERP, ಡಿಜಿಟಲ್ ಮಾರ್ಕೆಟಿಂಗ್, ಸಂಸ್ಥೆ ನೋಂಡಣಿ, ಅಕೌಂಟ್ಸ್ ಮತ್ತು ಮೌಲ್ಯಮಾಪನಗಳಲ್ಲಿ ನೆರವಾಗಲು ಯಾವಾಗಲೂ ಸಿದ್ಧವೆಂದು ಬಾಲಮುರುಗನ್ ಭರವಸೆ ಮೂಡುವುದರ ಮೂಲಕ ಸಂಸ್ಥೆಗಳಿಗೆ ಚೈತನ್ಯ ತುಂಬುತ್ತಾರೆ.