ಲಖನೌ: ಜು-3: ಮುಸ್ಲಿಂ ಉದ್ಯಮಿಯೊಬ್ಬರು 51 ದೇವಸ್ಥಾನ ನಿರ್ಮಾಣಕ್ಕೆ ಜಾಗ ನೀಡಲು ಮುಂದಾಗಿರು ವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಶೈನ್ ಗ್ರೂಪ್ ಎಂಬ ರಿಯಲ್ ಎಸ್ಟೇಟ್ ಸಂಸ್ಥೆಯ ಮಾಲೀಕರಾಗಿರುವ ಉದ್ಯಮಿ ರಶೀದ್ ನಸೀಮ್ ಎಂಬುವರು ಕೋಮು ಸಾಮರಸ್ಯದ ಸಂದೇಶ ಸಾರುವ ಸಲುವಾಗಿ ದೇವಾಲಯ ನಿರ್ಮಾಣ ಕೆಲಸಕ್ಕೆ ಮುಂದಾಗಿದ್ದಾರೆ.
ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ದೇವಾಲಯಗಳ ನಿರ್ಮಾಣಕ್ಕೆ ರಶೀದ್ ಮುಂದಾಗಿದ್ದು ಹಿಂದೂ-ಮುಸ್ಲಿಂ ಸಂಸ್ಕೃತಿಗಳ ಸಮ್ಮಿಲನವಾಗಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಲಹಾಬಾದ್-ವಾರಣಾಸಿ ಹೆದ್ದಾರಿಯಲ್ಲಿ ಈಗಾಗಲೇ ಒಂದು ದೇಗುಲ ನಿರ್ಮಾಣಗೊಂಡಿದ್ದು ಶ್ರಾವಣ ತಿಂಗಳು ಕಳೆದ ಕೂಡಲೇ ಉದ್ಘಾಟನೆಯಾಗಲಿದೆ. ಈ ವರ್ಷದ ಅಂತ್ಯದೊಳಗೆ 21 ಮತ್ತು ಮುಂದಿನ ವರ್ಷದ ಅಂತ್ಯದೊಳಗೆ 51 ದೇವಾಲಯಗಳ ನಿರ್ಮಾಣ ರಶೀದ್ ಯೋಜನೆಯಾಗಿದೆ. ಇದಕ್ಕಾಗಿ ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಜಾಗಗಳನ್ನು ಗುರುತಿಸಲಾಗಿದೆ.
ಪ್ರವಾಸೋದ್ಯಮ, ವಾಹನಗಳು, ಜಲ ಶುದ್ಧೀಕರಣ ಸಲಕರಣೆಗಳ ಉದ್ಯಮ ಹೊಂದಿರುವ ಅಲಹಾಬಾದ್ ಮೂಲದ ಉದ್ಯಮಿ ರಶೀದ್ ಗೆ ನರೇಂದ್ರ ಮೋದಿ ಸ್ಪೂರ್ತಿಯಂತೆ. ವ್ಯವಹಾರ ವರ್ಧನೆಗಾಗಿ ತಿಂಗಳಿಗೆ 50 ಸಾವಿರ ಕಿಮೀ.ಗೂ ಅಧಿಕ ಸಂಚಾರ ನಡೆಸುತ್ತಾರೆ. ನಮ್ಮ ಪ್ರಧಾನಿ ಅಷ್ಟೊಂದು ಓಡಾಡುವಾಗ ನಮಗೇಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
Muslim Businessman UP, Donates Land & Money, for 51 Temples