ದೆಹಲಿಯಲ್ಲಿ ಲಘು ಭೂಕಂಪ!

ನವದೆಹಲಿ, ಜು.3- ರಾಷ್ಟ್ರ ರಾಜಧಾನಿಯಲ್ಲಿ ಇಂದು ಮುಂಜಾನೆ ಲಘು ಭೂಕಂಪನ ಸಂಭವಿಸಿದೆ.
ರಿಕ್ಟರ್ ಮಾಪನದಲ್ಲಿ ಇದು 2.8 ಕಿ.ಮೀ ದಾಖಲಾಗಿದೆ. ಇಂದು ಮುಂಜಾನೆ 3.47ರಲ್ಲಿ ಈ ಕಂಪನ ಸಂಭವಿಸಿದ್ದು , ಭೂಮಿಯ 17 ಕಿ.ಮೀ ಆಳದಲ್ಲಿ ಇದರ ಕೇಂದ್ರ ಬಿಂದುವಿತ್ತು. ಗಾಢ ನಿದ್ರೆಯ ಕಾರಣ ಜನತೆಗೆ ಇದು ಅರಿವಾಗಿಲ್ಲ. ಆದರೆ ಮಾರುಕಟ್ಟೆ ರಾತ್ರಿ ಪಾಳಯದ ಖಾಸಗಿ ಕಚೇರಿಗಳಲ್ಲಿ ಕೆಲವರಿಗೆ ಅನುಭವವಾಗಿದೆ ಎನ್ನಲಾಗಿದೆ. ಆದರೆ ಇದರಿಂದ ಯಾವುದೇ ಹಾನಿ ಸಂಭವಿಸಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ