ಚಿತ್ರೋದ್ಯಮದ ಅಭಿವೃದ್ಧಿಗೆ ಸಮಗ್ರ ಚಲನಚಿತ್ರ ನೀತಿ ಜಾರಿ: ಸಚಿವೆ ಡಾ.ಜಯಮಾಲಾ

 

ಬೆಂಗಳೂರು, ಜು.3-ಚಿತ್ರೋದ್ಯಮದ ಅಭಿವೃದ್ಧಿಗೆ ಸಮಗ್ರ ಚಲನಚಿತ್ರ ನೀತಿ ಜಾರಿಗೆ ತರಲಾಗುವುದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಾದ ಡಾ.ಜಯಮಾಲಾ ವಿಧಾನಪರಿಷತ್‍ನಲ್ಲಿ ತಿಳಿಸಿದರು.

ಕನ್ನಡ ಚಲನಚಿತ್ರೋದ್ಯಮದ ಕುರಿತು ಗಮನ ಸೆಳೆಯುವ ಸೂಚನೆಯಡಿ ತಾರಾ ಅನುರಾಧ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ಕನ್ನಡ ಚಲನಚಿತ್ರರಂಗವು ಕರ್ನಾಟಕದಲ್ಲಿ ಸದೃಢವಾಗಿ ನೆಲೆಯೂರಬೇಕೆಂಬ ನಿಟ್ಟಿನಲ್ಲಿ ಕನ್ನಡ ಪ್ರಾದೇಶಿಕ ಭಾಷಾ ಚಲನಚಿತ್ರಗಳಿಗೆ ಸಹಾಯಧನ, ಪ್ರಶಸ್ತಿ, ಪುರಸ್ಕಾರ, ಮುಖ್ಯ ಯೋಜನಾ ಕ್ರಮಗಳನ್ನು ಪುರಸ್ಕರಿಸಿ ಕನ್ನಡ ಚಲನಚಿತ್ರ ನೀತಿ-2011ನ್ನು ಜಾರಿಗೆ ತರಲಾಗಿದೆ.
ಗುಣಾತ್ಮಕ ಕನ್ನಡ ಪ್ರಾದೇಶಿಕ ಭಾಷಾ ಚಲನಚಿತ್ರಗಳನ್ನು ಪೆÇ್ರೀ 125 ಚಲನಚಿತ್ರಗಳಿಗೆ ಸಹಾಯ ಧನ ನೀಡಲಾಗುತ್ತಿದೆ. ಮೈಸೂರಿನ ಹೆಮ್ಮಾವು ಬಳಿ ಚಿತ್ರನಗರಿ ಸ್ಥಾಪನೆ ಮಾಡಲಾಗುತ್ತಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಮೂಲಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ವಿವಿಧ ರಾಜ್ಯಗಳಲ್ಲಿ ಕನ್ನಡ ಚಲನಚಿತ್ರೋತ್ಸವ ಏರ್ಪಡಿಸಲಾಗುತ್ತಿದೆ ಎಂದು ಹೇಳಿದರು.

ಮಲ್ಟಿಫ್ಲೆಕ್ಸ್ ಮತ್ತು ಏಕತೆರೆ ಸಿನಿಮಾ ಮಂದಿರಗಳ ಪ್ರವೇಶ ದರದ ಗರಿಷ್ಠ ಮಿತಿಯ ತೆರಿಗೆಯನ್ನು ಹೊರತುಪಡಿಸಿ 200 ರೂ.ಗಳಿಗೆ ನಿಗದಿಪಡಿಸಲಾಗಿದೆ. ಇಲ್ಲಿ ಕನ್ನಡ ಚಲನಚಿತ್ರ ಪ್ರದರ್ಶನವಾಗುತ್ತಿಲ್ಲ ಎಂಬ ಬಗ್ಗೆ ಗಮನಕ್ಕೆ ಬಂದಿಲ್ಲ. ಅದನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.
ಕನ್ನಡ ಚಲನಚಿತ್ರಗಳ ಪ್ರದರ್ಶನಕ್ಕೆ ಅನುಕೂಲವಾಗುವಂತೆ ಜನತಾ ಚಿತ್ರಮಂದಿರಗಳನ್ನು ನಿರ್ಮಿಸಲು ಮುಂದೆ ಬರುವ ಆಸಕ್ತ ಉದ್ಯಮಿಗಳಿಗೆ 50 ಲಕ್ಷ, ಚಲನಚಿತ್ರ ಮಂದಿರ ನವೀಕರಣಕ್ಕೆ ಸರ್ಕಾರದಿಂದ 25 ಲಕ್ಷ ರೂ. ಉತ್ತೇಜನ ಮತ್ತು ಪೆÇ್ರೀ ಧನ ನೀಡಲಾಗುವುದು.
ಚಲನಚಿತ್ರೋದ್ಯಮದ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ, ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ಆರ್ಥಿಕ ನೆರವು ನೀಡಲು ದತ್ತಿನಿಧಿ ಸ್ಥಾಪಿಸಲಾಗಿದೆ. ಏಕಗವಾಕ್ಷಿ ಪದ್ಧತಿ ಜಾರಿಗೆ ತರುವುದು, ಕೌಶಲ್ಯಾಭಿವೃದ್ಧಿ ಯೋಜನೆಯಡಿ ಸಿನಿಮಾ ಕಾರ್ಮಿಕರ ಒಳಗೊಳ್ಳುವಿಕೆ ಮುಂತಾದವುಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಜಯಮಾಲಾ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ