ತಮ್ಮ ಭದ್ರತೆ ಹೆಚ್ಚಳದ ಬಗ್ಗೆ ಪ್ರಧಾನಿ ಮೋದಿ ನೀಡಿದ ಪ್ರತಿಕ್ರಿಯೆ ಏನು…?

ನವದೆಹಲಿ:ಜು-3; ತಮ್ಮ ಭದ್ರತೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀದಿರುವ ಪ್ರಧಾನಿ ನರೇಂದ್ರ ಮೋದಿ, ನಾನು ಶಹೆನ್‏ಶಾಹ್ ಅಥವಾ ಚಕ್ರವರ್ತಿ ಅಲ್ಲ. ಜನರೊಂದಿಗೆ ಬೆರೆಯುವುದರಿಂದ ಮತ್ತು ಅವರ ಶುಭಹಾರೈಕೆಗಳಿಂದ ನನಗೆ ಮತ್ತಷ್ಟು ಶಕ್ತಿ ಬರಲಿದೆ ಹೊರತು ಭಯವಲ್ಲ ಎಂದು ಹೇಳಿದ್ದಾರೆ.

‘ಸ್ವರಾಜ್ಯ’ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ರೋಡ್ ಶೋ ನಡೆಸಬಾರದು ಎಂಬ ಬಗ್ಗೆ ಪ್ರತಿಕ್ರಿಯೆಸಿದ ಪ್ರಧಾನಿ ಮೋದಿ ಅವರು, ರಸ್ತೆಯಲ್ಲಿ ಜನ ನನ್ನ ಸ್ವಾಗತಿಸಲು ಮತ್ತು ಶುಭಾಶಯ ಕೋರಲು ಕಾಯುತ್ತಿದ್ದರೆ ನಾನು ಕಾರಿನಲ್ಲಿ ಕುಳಿತುಕೊಳ್ಳಲು ಆಗುವುದಿಲ್ಲ ಎಂದರು.

ನಾನು ಪ್ರಯಾಣ ಮಾಡಬೇಕಾದರೆ ರಸ್ತೆಯಲ್ಲಿ ಎಲ್ಲಾ ವಯೋಮಾನದ ನೂರಾರು ಜನರನ್ನು ನೋಡುತ್ತೇನೆ. ಅವರೆಲ್ಲರೂ ನನಗೆ ಶುಭಾಶಯ ಕೋರಲು ಮತ್ತು ಸ್ವಾಗತಿಸಲು ಬಂದಿರುತ್ತಾರೆ. ಅವರ ಪ್ರೀತಿ ಮತ್ತು ಹಾರೈಕೆಯನ್ನು ನೋಡಿಯೂ ನಾನು ಕಾರಿನಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರಿಗೆ ನಕ್ಸಲರಿಂದ ಜೀವ ಬೇದರಿಕೆ ಇದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇತ್ತೀಚಿಗೆ ಗೃಹ ಸಚಿವಾಲಯ ಅವರ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದು, ಸಾರ್ವಜನಿಕ ರ್ಯಾಲಿ ನಡೆಸದಂತೆ ಪ್ರಧಾನಿಗೆ ಸಲಹೆ ನೀಡಿತ್ತು.

I am not a Shahenshah or an imperious ruler: Modi on personal security

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ