ಮನೆಗೆ ಕನ್ನ ಹಾಕಿ ಬೆಲೆಬಾಳುವ ವಸ್ತುಗಳ ಲೂಟಿ

ಮೈಸೂರು, ಜು.3- ಮನೆಯ ಬಾಗಿಲು ಮೀಟಿ ಒಳ ನುಗ್ಗಿರುವ ಕಳ್ಳರು ಲಕ್ಷಾಂತರ ರೂ. ಬೆಲೆಯ ಆಭರಣ ದೋಚಿರುವ ಘಟನೆ ರೂಪಾ ನಗರದಲ್ಲಿ ನಡೆದಿದೆ. ಕಿರಣ್ ಎಂಬುವರು ಮನೆಗೆ ಬೀಗ ಹಾಕಿ ಕುಟುಂಬ ಸದಸ್ಯರೊಂದಿಗೆ ಹೊರ ಹೋಗಿದ್ದರು. ವಾಪಸು ಬಂದಾಗ ಬಾಗಿಲು ಮುರಿದಿರುವುದು ಗೊತ್ತಾಗಿ ಹೌಹಾರಿದ್ದಾರೆ. ತಕ್ಷಣ ಒಳ ಹೋಗಿ ನೋಡಿದಾಗ ಬೀರು ತೆಗೆದು ಸುಮಾರು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿರುವುದು ಗೊತ್ತಾಗಿದೆ. ಜಯಪುರ ಠಾಣೆ ಪೆÇಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ