ಕನ್ನಡ ಚಿತ್ರರಂಗದ ಸಮಗ್ರ ಬೆಳವಣಿಗೆಗೆ ಒತ್ತು ನೀಡಬೇಕು: ಬಿಜೆಪಿ ಸದಸ್ಯೆ ತಾರಾ ಅನುರಾಧ ಆಗ್ರಹ

 

ಬೆಂಗಳೂರು, ಜು.3-ಕನ್ನಡ ಚಲನಚಿತ್ರಗಳಿಗೆ ನೀಡುವ ಸಹಾಯ ಧನ ತಾರತಮ್ಯ ನಿವಾರಣೆ, ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ಕನ್ನಡ ಚಲನಚಿತ್ರ ಪ್ರದರ್ಶನ, ನಿರ್ಮಾಪಕರು-ನಿರ್ದೇಶಕರು, ಕಾರ್ಮಿಕರ ಸಮಸ್ಯೆ ಬಗೆಹರಿಸುವುದೂ ಸೇರಿದಂತೆ ಕನ್ನಡ ಚಿತ್ರರಂಗದ ಸಮಗ್ರ ಬೆಳವಣಿಗೆಗೆ ಒತ್ತು ನೀಡಬೇಕೆಂದು ಬಿಜೆಪಿ ಸದಸ್ಯೆ ತಾರಾ ಅನುರಾಧ ಅವರು ವಿಧಾನಪರಿಷತ್‍ನಲ್ಲಿಂದು ಸರ್ಕಾರವನ್ನು ಆಗ್ರಹಿಸಿದರು.
ಕಡಿಮೆ ಮೊತ್ತದಲ್ಲಿ ಚಿತ್ರ ನಿರ್ಮಾಣ ಮಾಡಿ ಬಿಡುಗಡೆಯೇ ಮಾಡದೆ ಸಹಾಯ ಧನ ಪಡೆಯಲಾಗುತ್ತದೆ. ಕೋಟ್ಯಂತರ ರೂ. ಖರ್ಚು ಮಾಡಿ ಒಳ್ಳೆಯ ಗುಣಮಟ್ಟದ ಸಿನಿಮಾ ಮಾಡಿದವರಿಗೆ ಸಹಾಯ ಧನ ಸಿಗುವುದಿಲ್ಲ. ಇಂತಹ ತಾರತಮ್ಯ ಮುಂದೆ ಮರಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದರು.

ಪರಿಷತ್ ಕಲಾಪದಲ್ಲಿ ಗಮನ ಸೆಳೆಯುವ ಸೂಚನೆಯಡಿ ಈ ವಿಷಯ ಪ್ರಸ್ತಾಪಿಸಿದ ಅವರು, ಗುಣಮಟ್ಟದ ಚಿತ್ರಗಳನ್ನು ಪೆÇ್ರೀ ಸಲುವಾಗಿ ಸರ್ಕಾರ ನೀಡುತ್ತಿರುವ ನೆರವು ಎಲ್ಲೋ ಕೆಲವರ ಪಾಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಸದ್ಯ ಕಂಠೀರವ ಸ್ಟುಡಿಯೋ ಸೇರಿದಂತೆ ಬೆಂಗಳೂರಿನಲ್ಲಿ ಎರಡು ಮೂರು ಕಡೆ ಸ್ಟುಡಿಯೋಗಳನ್ನು ಖಾಸಗಿಯವರು ಆಕ್ರಮಿಸಿಕೊಂಡಿದ್ದಾರೆ. ಹೀಗಾಗಿ ಚಿತ್ರಗಳನ್ನು ತೆಗೆಯಲು ಫೆÇ್ರೀ ಸಿಗುತ್ತಿಲ್ಲ. ಚಿತ್ರನಗರಿ ಪ್ರಾರಂಭವಾಗಲು ಐದು ವರ್ಷ ಬೇಕಾಗುತ್ತದೆ. ಅಲ್ಲಿಯವರೆಗೂ ಮೈಸೂರು ಲ್ಯಾಂಪ್ ಆವರಣ ಮಿನರ್ವ ಮಿಲ್‍ನಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡುವಂತೆ ತಾರಾ ಅನುರಾಧ ಒತ್ತಾಯಿಸಿದರು.
ಚಿತ್ರರಂಗದಲ್ಲಿ ಅಶಕ್ತ ಕಲಾವಿದರಿಗೆ ನೆರವು ನೀಡಲು ಸ್ಥಾಪಿಸಿರುವ ಕಲಾವಿದರ ಕಲ್ಯಾಣ ನಿಧಿಯಲ್ಲಿರುವ ಹಣ ಬಳಕೆಯಾಗುತ್ತಿಲ್ಲ. ಕಲಾವಿದರಿಗೆ ನೆರವು ಕೂಡ ಸಿಗುತ್ತಿಲ್ಲ. ಆ ಹಣದ ಮೂಲಕ ಕಲಾವಿದರಿಗೆ, ತಂತ್ರಜ್ಞರಿಗೆ, ನಿರ್ಮಾಪಕ-ನಿರ್ದೇಶಕರಿಗೆ ಮಾಸಾಶನ ಕೊಡಬೇಕೆಂದು ಹೇಳಿದರು.
ಕನ್ನಡ ಚಿತ್ರರಂಗದ ಮೇಲೆ ತೆರಿಗೆ ಮೇಲೆ ತೆರಿಗೆಗಳನ್ನು ಹಾಕಲಾಗುತ್ತಿದೆ. ಇದು ಸಹಜವಾಗಿ ಚಿತ್ರರಂಗದ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆರಿಗೆಯನ್ನು ಇಳಿಸಬೇಕು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ