ಬೆಂಗಳೂರು,ಜು.2-ಐದು ವರ್ಷಕ್ಕೆ ಒಬ್ಬರೇ ಮೇಯರ್, ಒಬ್ಬರೇ ಆಯುಕ್ತ, ಇಬ್ಬರು ಉಪ ಮೇಯರ್, ನಾಲ್ಕು ಮಂದಿ ಉಪ ಆಯುಕ್ತರು ಇರಬೇಕು. ಯಾವುದೇ ಕಾರಣಕ್ಕೂ ಬಿಬಿಎಂಪಿಯನ್ನು ಒಡೆಯಬಾರದು. ಒಂದು ವೇಳೆ ಕೆಂಪೇಗೌಡರು ಕಟ್ಟಿದ ಉದ್ಯಾನನಗರಿಯನ್ನು ಒಡೆಯಲು ಮುಂದಾದರೆ ನಗರವನ್ನು ಸಂಪೂರ್ಣವಾಗಿ ಸ್ತಬ್ದ ಮಾಡಲಾಗುವುದು ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್‍ಎಚ್ಚರಿಕೆ ನೀಡಿದ್ದಾರೆ.
ಬಿಬಿಎಂಪಿ ವಿಭಜನೆ ಖಂಡಿಸಿ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ನಂತರ ಮೇಯರ್ ಸಂಪತ್‍ರಾಜ್ ಅವರಿಗೆ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಬೆಂಗಳೂರಿಗೆ ಒಬ್ಬರೇ ಮೇಯರ್ ಸಾಕು. ಒಬ್ಬರಿಗಿಂತ ಹೆಚ್ಚು ಮೇಯರ್ ಇರಬಾರದು. ಕಳೆದ ವಾರ ಬಿ.ಎಸ್.ಪಾಟೀಲ್ ನೇತೃತ್ವದ ಸಮಿತಿ ಅಂತಿಮ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದ್ದು, ಸಮಿತಿಯ ಶಿಫಾರಸ್ಸಿನಂತೆ ಬಿಬಿಎಂಪಿಯನ್ನು ವಿಭಜನೆ ಮಾಡಬೇಕೆಂದಿತ್ತು.
ಗ್ರೇಟರ್ ಕಾಪೆರ್Çೀರೇಷನ್, ನಗರಪಾಲಿಕೆ, ಕಾಪೆರ್Çೀರೇಟರ್ ನೇತೃತ್ವದ ವಾರ್ಡ್ ಸಮಿತಿಯನ್ನು ಒಳಗೊಂಡ ತ್ರಿ ಟೈರ್ ವ್ಯವಸ್ಥೆಯನ್ನು ಜಾರಿಗೊಳಿಸಲು ತಜ್ಞರ ಸಮಿತಿ ಶಿಫಾರಸ್ಸು ಮಾಡಿತ್ತು.
ಈಗ ಬಿಬಿಎಂಪಿಯನ್ನು ಒಡೆಯುವ ಪ್ರಯತ್ನ ನಡೆಯುತ್ತಿದ್ದು, ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ನಾಡಪ್ರಭು ಕೆಂಪೇಗೌಡರು ಸುಂದರ ಬೆಂಗಳೂರನ್ನು ಕಟ್ಟಿದ್ದಾರೆ. ಅಂತಹ ಬೆಂಗಳೂರನ್ನು ಒಡೆಯಲು ಮುಂದಾದರೆ ಕನ್ನಡಪರ ಹೋರಾಟಗಾರರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ.
ಒಂದು ವೇಳೆ ನಮ್ಮ ಮನವಿಗೂ ಸ್ಪಂದಿಸದಿದ್ದರೆ ಇಡೀ ಬೆಂಗಳೂರನ್ನೇ ಸ್ತಬ್ಧ ಮಾಡಲಾಗುವುದು ಎಂದು ವಾಟಾಳ್ ಎಚ್ಚರಿಸಿದರು.