ಪೋರ್ಚಗಲ್ ತಂಡವನ್ನು 2-1 ಗೋಲುಗಳಿಂದ ಮಣಿಸಿದ ಉರುಗ್ವೆ ಕ್ವಾರ್ಟರ್ ಫೈನಲ್ ಪ್ರವೇಶ
July 2, 2018VDಕ್ರೈಮ್Comments Off on ಪೋರ್ಚಗಲ್ ತಂಡವನ್ನು 2-1 ಗೋಲುಗಳಿಂದ ಮಣಿಸಿದ ಉರುಗ್ವೆ ಕ್ವಾರ್ಟರ್ ಫೈನಲ್ ಪ್ರವೇಶ
Seen By: 57
ಮಾಸ್ಕೋ: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಪುಟ್ಬಾಲ್ ಟೂರ್ನಿಯ 16ರ ಘಟ್ಟದಲ್ಲಿ ಪೋರ್ಚಗಲ್ ತಂಡವನ್ನು 2-1 ಗೋಲುಗಳಿಂದ ಅಂತರದಿಂದ ಮಣಿಸಿದ ಉರುಗ್ವೆ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.ಪ್ರಬಲ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಎಡಿಸನ್ ಕವಾನಿ ಗಳಿಸಿದ ಗೋಲು ಉರುಗ್ವೆ ಗೆಲ್ಲಲು ಕಾರಣವಾಯಿತು. ಪಂದ್ಯದ 7 ಮತ್ತು 62ನೇ ನಿಮಿಷದಲ್ಲಿ ಕವಾನಿ ಗಳಿಸಿದ ಗೋಲು ಪೋರ್ಚುಗಲ್ ಗೆ ದುಬಾರಿಯಾಗಿ ಪರಿಣಮಿಸಿತು.
ಅಲ್ಲದೆ ತಂಡದ ಸ್ಚಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಸಿಡಿಯದೇ ಇದ್ದದ್ದು ಪೋರ್ಚಗಲ್ ಟೂರ್ನಿಯಿಂದ ಹೊರಬೀಳುವಂತೆ ಮಾಡಿತು. ಅಂತಿಮವಾಗಿಪೋರ್ಚುಗಲ್ ತಂಡ 2-1 ಅಂತರದ ಹೀನಾಯ ಸೋಲಿನೊಂದಿಗೆ ವಿಶ್ವಕಪ್ ಟೂರ್ನಿಯಿಂದ ಹೊರಬಿತ್ತು.
ಅಂತೆಯೇ ವಿಶ್ವಕಪ್ ಗೆಲ್ಲಬೇಕು ಎಂಬ ರೊನಾಲ್ಡೋ ಮಹದಾಸೆ ಕೂಡ ಕಮರಿ ಹೋಯಿತು. ಮುಂದಿನ ವಿಶ್ವಕಪ್ ಗೆ ಕ್ರಿಸ್ಟಿಯಾನೋ ರೊನಾಲ್ಡೋ ಆಡುವುದು ಅನುಮಾನವಾಗಿದೆ.
ಇನ್ನು ಪೋರ್ಚುಗಲ್ ಮಣಿಸಿದ ಉರುಗ್ವೆ 8 ರ ಘಟ್ಟದಲ್ಲಿ ಪ್ರಬಲ ಫ್ರಾನ್ಸ್ ವಿರುದ್ಧ ಸೆಣಸಾಡಲಿದೆ.
June 15, 2018VDಕ್ರೀಡೆComments Off on ಸ್ಪೇನ್–ಪೋರ್ಚುಗಲ್ ಮುಖಾಮುಖಿ: ರೊನಾಲ್ಡೊ–ರಾಮೋಸ್ ಜಿದ್ದಾಜಿದ್ದಿ
Seen By: 168 ಸೋಚಿ (ಎಎಫ್ಪಿ/ರಾಯಿಟರ್ಸ್): ಚೊಚ್ಚಲ ಪ್ರಶಸ್ತಿಯ ಕನವರಿಕೆಯಲ್ಲಿರುವ ಪೋರ್ಚುಗಲ್ ಮತ್ತು ಎರಡನೇ ಟ್ರೋಫಿಯ ಮೇಲೆ ಕಣ್ಣು ನೆಟ್ಟಿರುವ ಸ್ಪೇನ್ ತಂಡಗಳು 21ನೇ ವಿಶ್ವಕಪ್ ಫುಟ್ಬಾಲ್ [more]