ಗಂಧದ ಮರಗಳನ್ನು ಕದ್ದ ಕಳ್ಳರು

ಮೈಸೂರು, ಜು.2- ಕುಕ್ಕರಹಳ್ಳಿ ಕೆರೆ ಸಮೀಪದ ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಚೋರರು ಗಂಧದ ಮರಗಳನ್ನು ಕದ್ದೊಯ್ದಿರುವ ಘಟನೆ ಜಯಲಕ್ಷ್ಮಿಪುರಂ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಡರಾತ್ರಿ ಅರಣ್ಯ ಪ್ರದೇಶದೊಳಗೆ ನುಗ್ಗಿದ ಚೋರರು ಗಂಧದ ತೈಲ ತಯಾರಿಸುವ ಭಾಗ ಮಾತ್ರ ಕತ್ತರಿಸಿಕೊಂಡು ಪರಾರಿಯಾಗಿದ್ದಾರೆ. ಇಂದು ಬೆಳಗ್ಗಿನ ಜಾವ ವಾಯುವಿಹಾರಕ್ಕೆ ಬಂದ ನಾಗರಿಕರು ಗಂಧದ ಮರಗಳು ತುಂಡಾಗಿ ಬಿದ್ದಿರುವುದನ್ನು ಗಮನಿಸಿ ಅರಣ್ಯ ಇಲಾಖೆ ಹಾಗೂ ಪೆÇಲೀಸರಿಗೆ ತಿಳಿಸಿದ್ದಾರೆ. ಜಯಲಕ್ಷ್ಮಿಪುರಂ ಠಾಣೆ ಪೆÇಲೀಸರು ಹಾಗೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಅರಣ್ಯ ಪ್ರದೇಶದಲ್ಲಿ ನೂರಾರು ಗಂಧದ ಮರಗಳಿದ್ದರೂ ಯಾವುದೇ ಭದ್ರತೆ ಇಲ್ಲ. ಹಾಗಾಗಿ ಶ್ರೀಗಂಧ ಚೋರರು ಸುಲಭವಾಗಿ ಅರಣ್ಯದೊಳಕ್ಕೆ ನುಗ್ಗಿ ಮರಗಳನ್ನು ಕತ್ತರಿಸಿಕೊಂಡು ಹೋಗುತ್ತಿದ್ದಾರೆ ಎಂದು ನಾಗರಿಕರು ದೂರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ