ಮಾಸ್ಕೋ: ಉರುಗ್ವೆ ವಿರುದ್ಧ ಶನಿವಾರ ನಡೆದ ನಾಕೌಟ್ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಪೋರ್ಚುಗಲ್ ತಂಡ ಟೂರ್ನಿಯಿಂದ ಹೊಬಿದ್ದಿದೆಯಾದರೂ, ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಮತ್ತೊಂದು ವಿಶ್ವಕಪ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಹೌದು.. ಇಂತಹುದೊಂದು ಸುಳಿವು ನೀಡಿರುವುದು ಸ್ವತಃ ತಂಡದ ಕೋಚ್ ಫರ್ನಾಂಡೋ ಸ್ಯಾಂಟೋಸ್.. ನಿನ್ನೆ ಉರುಗ್ವೆ ವಿರುದ್ಧದ ಪಂದ್ಯದಲ್ಲಿ ಪೋರ್ಚುಗಲ್ ತಂಡ 2-1 ಅಂತರದಲ್ಲಿ ಸೋತ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಚ್ ಫರ್ನಾಂಡೋ, ಪೋರ್ಚುಗಲ್ ತಂಡಕ್ಕೆ ರೊನಾಲ್ಡೋ ಸೇವೆ ಇನ್ನೂ ಅಗತ್ಯವಿದೆ ಎಂದು ಹೇಳುವ ಮೂಲಕ ಮುಂದಿನ 2022ರ ವಿಶ್ವಕಪ್ ಟೂರ್ನಿಯಲ್ಲಿ ರೊನಾ್ಡೋ ಆಡುವ ಕುರಿತು ಸುಳಿವು ನೀಡಿದ್ದಾರೆ.
ಪೋರ್ಚುಗಲ್ ತಂಡಕ್ಕೆ ರೊನಾಲ್ಡೋ ಅನುಭವದ ಪಾಠ ಬೇಕಿದೆ. ವಿಶ್ವಕಪ್ ಬಳಿಕ ಸೆಪ್ಟೆಂಬರ್ ನಲ್ಲಿ ಯುಇಎಫ್ ಎ (ನ್ಯಾಷನಲ್ ಲೀಗ್)ನಲ್ಲಿ ತಂಡ ಪಾಲ್ಗೊಳ್ಳುತ್ತಿದ್ದು, ಆ ಸರಣಿಯಲ್ಲಿ ಖಂಡಿತಾ ರೊನಾಲ್ಡೋ ತಂಡವನ್ನು ಮುನ್ನಡೆಸಲಿದ್ದಾರೆ. ತಂಡಕ್ಕೆ ರೊನಾಲ್ಡೋ ಉಪಸ್ಥಿತಿ ಹಾಗೂ ಅನುಭವದ ಅಗತ್ಯವಿದ್ದು, ತಂಡದಲ್ಲಿರುವ ಯುವಕರ ಉತ್ತೇಜಿಸಲು ರೊನಾಲ್ಡೋ ಇರುತ್ತಾರೆ. ತಂಡದಲ್ಲಿ ರೊನಾಲ್ಡೋ ಇದ್ದರೆ ಅದು ಸಹ ಆಟಗಾರರಿಗೆ ಹೊಸ ಚೈತನ್ಯ ನೀಡುತ್ತದೆ.
ವಿಶ್ವಕಪ್ ಟೂರ್ನಿಯಲ್ಲಿ ನಮ್ಮ ಕಠಿಣ ಪರಿಶ್ರಮದ ಹೊರತಾಗಿಯೂ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಇದಕ್ಕಾಗಿ ಪೋರ್ಚುಗಲ್ ತಂಡ ಅಭಿಮಾನಿಗಳ ಕ್ಷಮೆ ಕೋರುತ್ತೇವೆ. ಆದರೆ ಪೋರ್ಚುಗಲ್ ತಂಡ ಬಲಿಷ್ಟ ತಂಡವಾಗಿ ಮುಂದುವರೆಯಲಿದೆ ಎಂಬ ಮಾತನ್ನು ನೀಡುತ್ತೇನೆ ಎಂದು ಕೋಚ್ ಸ್ಯಾಂಟೋಸ್ ಹೇಳಿದ್ದಾರೆ.