ಬೆಂಗಳೂರು, ಜು.2- ಮುಂದಿನ ಐದು ವರ್ಷಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ 20ಲಕ್ಷ ಮನೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ತಿಳಿಸಿದರು.
ವಿಧಾನಸಭೆಯಲ್ಲಿ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ಬಹುಮಹಡಿ ಕಟ್ಟಡ ನಿರ್ಮಾಣ ಯೋಜನೆಯನ್ನು ಮುಖ್ಯಮಂತ್ರಿಗಳ ನಗರ ವಸತಿ ಯೋಜನೆಯಡಿ ವಿಸ್ತರಿಸಲು ಯೋಜಿಸಿದ್ದು, ಪ್ರಸಕ್ತ ಸಾಲಿನಲ್ಲಿ ನಾಲ್ಕು ಲಕ್ಷ ಮನೆ ನಿರ್ಮಾಣ, 10ಸಾವಿರ ನಿವೇಶನಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಪ್ರಸಕ್ತ ಸಾಲಿನ ಅಂತ್ಯದಲ್ಲಿ ಸರ್ವರಿಗೂ 24/7 ವಿದ್ಯುತ್ ಪೂರೈಸಲು ಉದ್ದೇಶಿಸಲಾಗಿದೆ. ಬೆಂಗಳೂರಿನಲ್ಲಿ ನೀರು ಸೋರಿಕೆ ತಡೆಯುವ ಯೋಜನೆ 2022ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. 2021ರ ವೇಳೆಗೆ ಮೆಟ್ರೋ ರೈಲು ನಿಗಮ, 118 ಕಿ.ಮೀ. ಉದ್ದ ಮಾರ್ಗವನ್ನು ಪೂರ್ಣಗೊಳಿಸಲಿದೆ. ಮೈಸೂರಿನಲ್ಲಿ ನಡೆಯಲಿರುವ ಬೈಸಿಕಲ್ ಬಾಡಿಗೆ ನೀಡುವ ಕಾರ್ಯಕ್ರಮವನ್ನು ಬೆಂಗಳೂರಿನಲ್ಲೂ ಜಾರಿಗೆ ತರಲಾಗುವುದು. ಬೆಂಗಳೂರು ನಗರದ ಹೃದಯ ಭಾಗಗಳಲ್ಲಿ ಸಮರ್ಥ ಸಾರಿಗೆ ವ್ಯವಸ್ಥೆ ಅನುಷ್ಠಾನಗೊಳಿಸಲು ಯೋಜಿಸಿದ್ದು, ಪ್ರಸಕ್ತ ಸಾಲಿನಿಂದ ಸಾರಿಗೆ ನಿಗಮಗಳ ಎಲ್ಲ ಬಸ್ ಪ್ರಯಾಣಿಕರಿಗೆ ಉಚಿತ ವೈಪೈ ಸೌಲಭ್ಯ ಕಲ್ಪಿಸಲಾಗುತ್ತದೆ. ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ 942 ಬಸ್ಗಳಲ್ಲಿ ಕ್ಯಾಮೆರಾ ಅಳವಡಿಕೆ, 500 ಬಸ್ಗಳಲ್ಲಿ ಪ್ಯಾನಿಕ್ ಅಲಾರಾಮ್ ಅಳವಡಿಸಲು ಮೊಬೈಲ್ ಆ್ಯಪ್ನಲ್ಲಿ ಎಫ್ಒಎಸ್ ಬಟನ್ ಒದಗಿಸಲು ಯೋಜಿಸಲಾಗಿದೆ ಎಂದರು.
ನದಿ ದಡದ ಮೇಲೆ ಮರ:
ನದಿಗಳ ಜಲಾನಯನದ ಪ್ರದೇಶಗಳನ್ನು ಶುದ್ಧೀಕರಿಸಲು ನದಿಯ ದಡಗಳ ಮೇಲೆ ದಟ್ಟವಾದ ನಿಡುತೋಪುಗಳನ್ನು ಬೆಳೆಸಿ ನದಿಗಳ ಸಂರಕ್ಷಣೆ ಮಾಡುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ. ಮಾಲಿನ್ಯಗೊಂಡ ನದಿ ತೀರದಲ್ಲಿ ಹಂತ ಹಂತವಾಗಿ ನೀರಿನ ಗುಣಮಟ್ಟ ಕಾಯ್ದುಕೊಳ್ಳಲು ಮೇಲ್ವಿಚರಣಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
ಪರಿಶಿಷ್ಟ ಜಾತಿ ಮತ್ತು ಪಂಗಡದ ನಿರುದ್ಯೋಗಿ ಯುವ ಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಒದಗಿಸಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಹಿಂದುಳಿದ ವಿದ್ಯಾರ್ಥಿಗಳಿಗೆ ಪೂರ್ವಭಾವಿ ತರಬೇತಿ ನೀಡುವುದರ ಜತೆಗೆ ಡಿ.ದೇವರಾಜ ಅರಸು ವಿದೇಶಿ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು. ಮಹತ್ವದ ಮಾತೃಪೂರ್ಣ ಯೋಜನೆಯನ್ನು ಮುಂದುವರೆಸಲಾಗುವುದು. ಶಾಲಾ ಶಿಕ್ಷಣ ಗುಣಮಟ್ಟದ ಅಭಿವೃದ್ಧಿಗೆ ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದ್ದು, 2020ರ ಒಳಗಾಗಿ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ, ಕಾರ್ಮಿಕ ಮುಕ್ತ ರಾಜ್ಯ ಎಂದು ಘೋಷಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಉತ್ತಮ ಗುಣಮಟ್ಟದ ಸೌಲಭ್ಯ ಒದಗಿಸಲು ಆರೋಗ್ಯ ಉಪ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ 9ಸಾವಿರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಮುಂದಿನ ವರ್ಷದಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಅತ್ಯಂತ ಕನಿಷ್ಠ ಮಟ್ಟಕ್ಕೆ ತರಲಾಗುವುದು. ಎಲ್ಲಾ ಪ್ರಮುಖ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳನ್ನು ಎನ್ಕ್ಯೂಎಎಸ್ ಪ್ರಮಾಣಿಕರಣದ ಅಡಿಯಲ್ಲಿ ತರಲು ಯೋಜಿಸಿದ್ದು, ರಾಜ್ಯ ಆರೋಗ್ಯ ಪರಿಷತ್ತು ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ.
ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಬಳ್ಳಾರಿ, ಶಿವಮೊಗ್ಗ ಮಹಾನಗರಗಳಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಹಾಗೂ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಕ್ಯಾನ್ಸರ್ ಕೇರ್ ಘಟಕಗಳನ್ನು ಹಂತ ಹಂತವಾಗಿ ಬಲಪಡಿಸಲಾಗುವುದು. ಮೀನುಗಾರಿಕೆ ಅಭಿವೃದ್ಧಿಗಾಗಿ ನೀಲಿಕ್ರಾಂತಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಿದ್ದು, ಪ್ರತಿ ವರ್ಷ 8ಸಾವಿರ ಕಿ.ಮೀ. ಗ್ರಾಮೀಣ ರಸ್ತೆಗಳ ನವೀಕರಣ ಮಾಡಲು ನಿಯೋಜಿಸಲಾಗಿದೆ.
ಕಾಯ್ದೆಗೆ ತಿದ್ದುಪಡಿ:
ಲೋಕೋಪಯೋಗಿ ಕಾಯ್ದೆಗೆ ತಿದ್ದುಪಡಿ ತಂದು ಎಲ್ಲಾ ಸಾರ್ವಜನಿಕ ಕಟ್ಟಡದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಡ್ರೆಸಿಂಗ್ ಕೋಣೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ರಸ್ತೆಗಳ ಸ್ಥಿತಿಗತಿಗಳ ದತ್ತಾಂಶದ ಆಧಾರದ ಮೇಲೆ ವಾರ್ಷಿಕ ಕಾಮಾರಿಗಳ ಕಾರ್ಯಕ್ರಮವನ್ನು ಸಿದ್ದಪಡಿಸಲಾಗುತ್ತದೆ ಎಂದರು.
ಯುವ ಜನರನ್ನು ಪೆÇ್ರೀ ಮತ್ತು ತಯಾರಿಕಾ ನವೋದ್ಯಮಗಳನ್ನು ಉತ್ತೇಜಿಸಲು ನಾವೀನ್ಯತಾ ನೀತಿಯನ್ನು ಘೋಷಣೆ ಮಾಡಲಾಗುವುದು. ಕರ್ನಾಟಕ ನಮ್ಮ ಹೆವೆÅ್ಮ ಎಂಬ ಸಾಂಸ್ಕøತಿಕ ಸಮಾರಂಭ, ರಾಷ್ಟ್ರಕವಿ ಕುವೆಂಪು ನಿವಾಸ ಉದಯರವಿಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಅಭಿವೃದ್ದಿ ಪಡಿಸಲಾಗುವುದು. ದಾವಣಗೆರೆಯಲ್ಲಿ ವೃತ್ತಿ ರಂಗಭೂಮಿ ಕೇಂದ್ರ ಸ್ಥಾಪಿಸಲಾಗುವುದು. ರಾಜ್ಯದ 20 ಪ್ರವಾಸಿ ತಾಣಗಳನ್ನು ಮುಂದಿನ ಐದು ವರ್ಷಗಳಲ್ಲಿ ತ್ವರಿತವಾಗಿ ಅಭಿವೃದ್ಧಿಪಸಲಾಗುವುದು ಎಂದು ಹೇಳಿದರು.
Governor Vajubhai Vala,Joint Session,Karnataka Legislative Assembly