ಗೋಲ್ಡನ್ ಸ್ಟಾರ್ ಗಣೇಶ್‍ಗೆ 38ನೇ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು: ಇಂದು ಗೋಲ್ಡನ್ ಸ್ಟಾರ್ ಗಣೇಶ್‍ಗೆ 38ನೇ ಹುಟ್ಟುಹಬ್ಬದ ಸಂಭ್ರಮ. ನೆಚ್ಚಿನ ನಟನ ಜನ್ಮದಿನದ ಸಂಭ್ರಮಕ್ಕಾಗಿಯೇ ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ಮುಂಗಾರು ಮಳೆ ಹುಡುಗನ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದರು.

ಅಭಿಮಾನಿಗಳ ಸಮ್ಮುಖದಲ್ಲಿ ಗಣೇಶ್ ಪತ್ನಿ ಶಿಲ್ಪಾ ಜೊತೆಗೆ ಕೇಕ್ ಕಟ್ ಮಾಡಿದ್ರು. ತಮ್ಮದೇ ಹೋಂ ಬ್ಯಾನರ್‍ನಲ್ಲಿ ನಿರ್ಮಾಣವಾಗ್ತಿರೋ ಗೀತಾ ಸಿನಿಮಾವೇ ಗಿಫ್ಟ್ ಅಂದ್ರು ಶಿಲ್ಪಾ. ಬರ್ತ್ ಡೇ ಹಿನ್ನೆಲೆಯಲ್ಲಿ ಇವತ್ತು ಬೆಳಗ್ಗೆ ಆರೆಂಜ್ ಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು.

ಗೋಲ್ಡನ್ ಸ್ಟಾರ್ ಗಣೇಶ್ ಈಗ ‘ಗೀತಾ’ ಸಿನಿಮಾದಲ್ಲಿ ನಟಿಸಲು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಮನೆಯ ಮುಂದೆ ದೊಡ್ಡ ಕಟೌಟ್ ನಿಲ್ಲಿಸಲಾಗಿದೆ. ಇದೇ ಮೊದಲ ಬಾರಿಗೆ ಸಿನಿಮಾ ಸೆಟ್ಟೇರುವ ಮೊದಲೇ ನಟರೊಬ್ಬರ ಕಟೌಟ್ ನಿಲ್ಲಿಸಿ ಅಭಿಮಾನಿಗಳು ಬರ್ತ್ ಡೇ ಆಚರಿಸಿದ್ದಾರೆ. ಸದ್ಯ ಗಣೇಶ್ ಇತ್ತೀಚಿನ ದಿನಗಳಲ್ಲಿ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಹೊಸತನವನ್ನು ಪ್ರಯತ್ನಿಸುತ್ತಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ