ಬ್ರೇಡಾ: ನೇದರ್ ಲ್ಯಾಂಡ್ಸ್ ನ ಬ್ರೇಡಾದಲ್ಲಿ ನಡೆದ ಚಾಂಫಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 1-3 ಗೋಲುಗಳ ಅಂತರದಿಂದ ಸೋಲಿಗೆ ಶರಣಾಯಿತು. ನಿನ್ನೆ ನಡೆದ ಕೊನೆಯ ಸುತ್ತಿನ ರಾಬಿನ್ ಪಂದ್ಯದಲ್ಲಿ ನೆದರ್ ಲ್ಯಾಂಡ್ಸ್ ವಿರುದ್ಧ 1-1 ಡ್ರಾ ಮಾಡಿಕೊಂಡಿದ್ದ ಭಾರತ ಇಂದು ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಹೋರಾಡುವಲ್ಲಿ ವಿಫಲವಾಯಿತು.
ಬ್ಲಾಕ್ ಗೊವೆರ್ಸ್ ಅವರ ಪೆನಾಲ್ಟಿ ಕಾರ್ನರ್ ಅವಕಾಶ ಮೂಲಕ 24 ನೇ ನಿಮಿಷದಲ್ಲಿ ಆಸ್ಟ್ರೇಲಿಯಾ ಲೀಡ್ ಪಡೆದುಕೊಂಡಿತು. ಆದರೆ. ಭಾರತ ವಿವೇಕ್ ಸಾಗರ್ ಪ್ರಸಾದ್ ಅವರ ಸ್ಟ್ರೈಕ್ ಮೂಲಕ 42 ನೇ ನಿಮಿಷದಲ್ಲಿ ಗೋಲು ಗಳಿಸಿತು. ಕಳೆದ ವರ್ಷದಂತೆ ಈ ಪಂದ್ಯದಲ್ಲಿಯೂ 1-1 ಸಮಾಂತರವಾಗಿ ನಿಯಂತ್ರಣ ಸಾಧಿಸಿ, ಶೂಟ್ ಅಫ್ ಹಂತಕ್ಕೂ ಹೋಗಿತ್ತು. ಆದರೆ. ಆಸ್ಟ್ರೇಲಿಯಾದ ಗೋಲ್ ಕೀಪರ್ ಟೈಲರ್ ಲವ್ ವೇಲ್ ಅವರ ನೆರವಿನಿಂದ ಪಂದ್ಯದ ಗತಿಯೇ ಬದಲಾಯಿತ್ತಲ್ಲದೇ, ಅವರು ಹಿರೋ ಆಗಿ ಹೊರಹೊಮ್ಮಿದ್ದರು. ಅತಿಥೇಯ ನೆದರ್ ಲ್ಯಾಂಡ್ಸ್ ಮೂರನೇ ಸ್ಥಾನ ಪಡೆಯುವ ಮೂಲಕ ಕಂಚು ಪದಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು. ಓಲಿಂಪಿಕ್ ಚಾಂಫಿಯನ್ ಅರ್ಜಿಂಟೀನಾ ನಾಲ್ಕುನೇ ಸ್ಥಾನ ಪಡೆದುಕೊಂಡಿತು.