ಮೈಸೂರು, ಜು.2-ಕಡಿಮೆ ಬೆಲೆಗೆ ಮನೆ ಕೊಡಿಸುವುದಾಗಿ ಮಹಿಳೆಯರಿಗೆ ಆಮಿಷವೊಡ್ಡಿದ ಖದೀಮರು ಪೆÇಲೀಸರಿಗೆ ಮಂಜೂರಾಗಿದ್ದ ಕ್ವಾಟ್ರರ್ಸ್ಗಳನ್ನು ತೋರಿಸಿ ಯಮಾರಿಸಿರುವುದು ಬೆಳಕಿಗೆ ಬಂದಿದೆ.
ವಿಜಯನಗರ ವ್ಯಾಪ್ತಿಯ ಕೂಟಗಳ್ಳಿಯಲ್ಲಿ ಪೆÇಲೀಸರಿಗಾಗಿ ಕ್ವಾಟ್ರರ್ಸ್ಗಳನ್ನು ನಿರ್ಮಿಸಲಾಗಿದ್ದು, ಇನ್ನೂ ಪೆÇಲೀಸರಿಗೆ ಹಸ್ತಾಂತರಿಸಿಲ್ಲ.
ಇದನ್ನು ದುರುಪಯೋಗಪಡಿಸಿಕೊಂಡ ರೇವಣ್ಣ, ಬಾಲು, ನಾಗರಾಜು ಎಂಬುವರು ಹತ್ತಕ್ಕೂ ಹೆಚ್ಚು ಮಹಿಳೆಯರಿಗೆ ಪುಸಲಾಯಿಸಿ ಕಡಿಮೆ ಬೆಲೆಗೆ ಮನೆಗಳನ್ನು ಕೊಡಿಸುವುದಾಗಿ ನಂಬಿಸಿ ಅವರಿಂದ 10 ಲಕ್ಷಕ್ಕೂ ಹೆಚ್ಚು ಹಣ ಪಡೆದು ಮಹಿಳೆಯರಿಗೆ ನಂಬಿಕೆ ಬರಲು ಅವರ ಫೆÇೀಟೋ, ಆಧಾರ್ಕಾರ್ಡ್ನ್ನು ಪಡೆದು 15 ದಿನದಲ್ಲಿ ಮನೆಯ ಪತ್ರಗಳನ್ನು ನೀಡುವುದಾಗಿ ಹೇಳಿ ತಲೆಮರೆಸಿಕೊಂಡಿದ್ದಾರೆ.
ಈ ವಂಚಕರ ಮಾತನ್ನು ನಂಬಿದ ಮಹಿಳೆಯರು ಹಣ ನೀಡಿ ಅವರು ತೋರಿಸಿದ ಮನೆಗೆ ಬಂದು ಗೃಹಪ್ರವೇಶಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಮಹಿಳೆಯರನ್ನು ವಿಚಾರಿಸಿದಾಗ ಈ ಮನೆಯನ್ನು ಖರೀದಿಸಿರುವುದಾಗಿ ಹೇಳಿದ್ದಾರೆ. ಅನುಮಾನಗೊಂಡು ಸ್ಥಳೀಯರು ತಕ್ಷಣ ಪೆÇಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ವಿಜಯನಗರ ಠಾಣೆ ಪೆÇಲೀಸರು ಮಹಿಳೆಯರನ್ನು ವಿಚಾರಿಸಿದಾಗ ನಾವು ರೇವಣ್ಣ, ಬಾಲು, ನಾಗರಾಜು ಎಂಬುವರಿಗೆ ಹಣ ಕೊಟ್ಟು ಮನೆ ಖರೀದಿಸಿರುವುದಾಗಿ ತಿಳಿಸಿದ್ದಾರೆ.
ನೀವು ಮೋಸ ಹೋಗಿದ್ದೀರಿ, ಇದು ಪೆÇಲೀಸರಿಗಾಗಿ ನಿರ್ಮಿಸಿರುವ ಮನೆಗಳು ಎಂದು ಹೇಳಿದಾಗಲೇ ತಾವು ಮೋಸ ಹೋಗಿರುವುದು ಮಹಿಳೆಯರಿಗೆ ಅರಿವಾಗಿದೆ. ಈ ಬಗ್ಗೆ ಮಹಿಳೆಯರಿಂದ ದೂರು ಪಡೆದು ತಲೆಮರೆಸಿಕೊಂಡಿರುವ ವಂಚಕರಿಗಾಗಿ ಪೆÇಲೀಸರು ಶೋಧ ಕೈಗೊಂಡಿದ್ದಾರೆ.