ಲಂಡನ್, ಜು.1- ಮಕ್ಕಳ ಕಳ್ಳ ಸಾಗಾಣಿಕೆ ವಿರುದ್ಧ ಹೋರಾಟ ನಡೆಸುತ್ತಿರುವ ಭಾರತ ಮೂಲದ ಬ್ರಿಟನ್ನ ಮಹಿಳಾ ಉದ್ಯಮಿಯೊಬ್ಬರು ನಿಧಿ ಸಂಗ್ರಹಿಸುವ ನಿಟ್ಟಿನಲ್ಲಿ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ.
ಮುಂಬರುವ ಜು.4ರಂದು ಫ್ರಾನ್ಸ್ನಲ್ಲಿರುವ ಕಲಿಸಿಸ್ನಿಂದ ಸುಮಾರು 35 ಕಿ.ಮೀ ಉದ್ದದ ಇಂಗ್ಲೀಷ್ ಕಾಲುವೆಯನ್ನು ಈಜುವ ಮೂಲಕ ಏಷ್ಯಾ ಮೂಲದ ಮಹಿಳೆಯೊಬ್ಬರು ಹೊಸ ದಾಖಲೆ ಬರೆಯಲಿದ್ದಾರೆ.
ಲೀನ್ ಚೌದರಿ ಎಂಬ ಉದ್ಯಮಿ ಬ್ರಿಟನ್ನಲ್ಲಿ ಮಕ್ಕಳ ಆರೈಕೆಯ ಪೆÇೀಪ್ ಅಪ್ ಪಾರ್ಟಿ ಅಂಡ್ ಪ್ಲೇ ಕೇಂದ್ರವನ್ನು ನಡೆಸುತ್ತಿದ್ದು , ಇಡೀ ವಿಶ್ವದಲ್ಲಿ ಈಗ ಮಕ್ಕಳ ಕಳ್ಳ ಸಾಗಾಣಿಕೆ ದೊಡ್ಡ ಪಿಡುಗು ಆಗಿ ಪರಿಣಮಿಸಿದೆ. ಇದನ್ನು ನಿಯಂತ್ರಿಸಲು ದೊಡ್ಡ ಆಂದೋಲನವೇ ಅಗತ್ಯವಿದೆ. ಇದಕ್ಕಾಗಿ ಹೊಸ ಜಾಗೃತಿ ಮೂಡಿಸಲು ದೃಢ ನಿರ್ಧಾರ ಕೈಗೊಂಡಿದ್ದು, ಈ ನಿಟ್ಟಿನಲ್ಲಿ ಇಂಗ್ಲೀಷ್ ಕೆನೆಲ್ ಈಜಿ ಸಾಗುವ ಧೈರ್ಯ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇದೊಂದು ಕಠಿಣ ಸವಾಲಾಗಿದ್ದು , ಹಗಲು-ರಾತ್ರಿ ಎನ್ನದೆ ಅಲ್ಲಿನ ಜಲಚರಗಳು ಮತ್ತು ಸಂಚರಿಸುವ ಹಡಗುಗಳ ಮಧ್ಯೆಯೇ ಲೀನ್ ಸುಮಾರು 13 ಗಂಟೆಗಳ ಕಾಲ ಈಜ ಬೇಕಾಗುತ್ತದೆ. ಬೆಳಕು ಕತ್ತಲ ಜತೆಗೆ ವಾತಾವರಣವೂ ಕೂಡ ಬದಲಾಗುತ್ತದೆ. ಹೀಗಿರುವಾಗ ಈ ಮಹಿಳೆಯ ಧೈರ್ಯವನ್ನು ಮೆಚ್ಚಲೇಬೇಕು ಎಂದು ಇಲ್ಲಿನ ಕೆಲ ಮಾಧ್ಯಮಗಳು ಹಾಗೂ ಗಣ್ಯರು ಹೇಳಿದ್ದಾರೆ.
ಲೀನ್ ಅವರು ಈ ಸಾಹಸ ಮಾಡುವಾಗ ಅವರ ಸ್ನೇಹಿತರು, ಸಂಬಂಧಿಕರು ಬೋಟ್ನಲ್ಲಿ ಸಾಗಬಹುದು. ಆದರೆ ಆಕೆಯನ್ನು ಸಂಪರ್ಕಿಸಬಾರದು ಎಂಬ ನಿಯಮವನ್ನು ಕೂಡ ವಿಧಿಸಲಾಗಿದೆ.
ಈಗಾಗಲೇ 35,000 ಪೌಂಡ್ ನಿಧಿಯನ್ನು ಸಂಗ್ರಹಿಸಿದ್ದು , ಈ ಹೊಸ ಸಾಹಸದಿಂದ ಇನ್ನು ಹೆಚ್ಚಿನ ಬೆಂಬಲ ಸಿಗುವ ವಿಶ್ವಾಸವಿದೆ ಎಂದು ಹೇಳಲಾಗುತ್ತಿದೆ.
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಭಾರತದಲ್ಲೂ ಕೂಡ ಹೆಚ್ಚಾಗುತ್ತಿದ್ದು, ಅದರಲ್ಲೂ ಬಾಲಕಿಯರು ಅತ್ಯಂತ ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಬ್ರಿಟೀಷ್ ಏಷ್ಯನ್ ಟ್ರಸ್ಟ್ ಜತೆಗೂಡಿ ಪ್ರೇರಣಾ ಸಂಸ್ಥೆ ಇಂತಹ ಘಟನೆಗಳನ್ನು ತಡೆಗಟ್ಟುವುದು ಮತ್ತು ನಿರಾಶ್ರಿತ ಮಕ್ಕಳಿಗೆ ಆಶ್ರಯ ನೀಡುವ ಮಹತ್ವದ ಕಾರ್ಯಕ್ರಮವನ್ನು ಕೂಡ ನಡೆಸಲಾಗುತ್ತಿದೆ. ಕಳೆದ ಫೆಬ್ರವರಿಯಲ್ಲಿ ಭಾರತಕ್ಕೆ ಬಂದಿದ್ದ ಲೀನ್ ಚೌದರಿ ಇಲ್ಲಿಗೆ ಭೇಟಿ ನೀಡಿ ತಮ್ಮ ಕಡೆಯಿಂದ ನೆರವನ್ನು ನೀಡುವ ಭರವಸೆಯನ್ನು ಕೂಡ ನೀಡಿದ್ದರು.