
ನಾಸಿಕ್, ಜು.1- ನಿಷ್ಪ್ರಯೋಜಕ ಎಂದು ನಿಂದಿಸಿದ್ದರಿಂದ ತಾಳ್ಮೆ ಕಳೆದುಕೊಂಡ ಯುವಕನೊಬ್ಬ ತಮ್ಮ ಸಂಬಂಧಿಕರ ಕುಟುಂಬದ ನಾಲ್ಕು ವರ್ಷದ ಮಗು ಸೇರಿದಂತೆ ಮೂವರನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಮಾಲ್ವಾಡಿ ಗ್ರಾಮದಲ್ಲಿ ನಡೆದಿದೆ.
ಕೆಲಸಕ್ಕೆ ಬಾರದವನು ಎಂಬ ನಿಂದನೆಯಿಂದ ಮೂವರನ್ನು ಹತ್ಯೆ ಮಾಡಿದ ಆರೋಪಿಯನ್ನು ಸಚಿನ್ ಗಣಪತ್ ಚಿಮೆಟ್ ಇದೀಗ ಪೆÇಲೀಸರ ಅತಿಥಿಯಾಗಿದ್ದಾನೆ.
ಸಚಿನ್ ಗಣಪತ್ ಆಕ್ರೋಶಕ್ಕೆ ಪ್ರಾಣ ಕಳೆದುಕೊಂಡವರನ್ನು ಅವರ ಸಂಬಂಧಿಕರಾದ ಹೀರಾಬಾಯಿ (55), ಮಂಗಲ್ ಗಣೇಶ್ (30) ಹಾಗೂ ಅವರ ನಾಲ್ಕು ವರ್ಷದ ಮಗು ರೋಹಿತ್ ಎಂದು ಗುರುತಿಸಲಾಗಿದೆ.
ಎಸ್ಎಸ್ಎಲ್ಸಿ ಉತ್ತೀರ್ಣನಾಗಿದ್ದ ಸಚಿನ್ ಗಣಪತ್ ಯಾವುದೇ ಕೆಲಸ ಮಾಡದೆ ನಿಷ್ಪ್ರಯೋಜಕನಾಗಿದ್ದು, ಗ್ರಾಮದಲ್ಲಿ ಓಡಾಡಿಕೊಂಡಿದ್ದ. ಇವರ ಮನೆ ಸಮೀಪವೇ ಇದ್ದ ಸಂಬಂಧಿಕರ ಕುಟುಂಬಕ್ಕೂ, ಗಣಪತ್ ಕುಟುಂಬಕ್ಕೂ ಜಮೀನು ವಿವಾದವಿತ್ತು.
ಜಮೀನು ವಿವಾದದ ಗಲಾಟೆ ಸಂದರ್ಭದಲ್ಲಿ ಹೀರಾಬಾಯಿ ಕುಟುಂಬ ನೀನು ಕೆಲಸಕ್ಕೆ ಬಾರದವನು ಎಂದು ನಿಂದಿಸಿದ್ದರಿಂದ ತಾಳ್ಮೆ ಕಳೆದುಕೊಂಡ ಸಚಿನ್ ಗಣಪತ್ ಮನೆಗೆ ಹೋಗಿ ಚಾಕು ತಂದು ದಾಳಿ ನಡೆಸಿದ.
ಮೊದಲು ಹೀರಾಬಾಯಿ ಅವರ ಮೊದಲನೆ ಮಗ ಆರು ವರ್ಷದ ಯಶ್ ಮೇಲೆ ದಾಳಿ ನಡೆಸಿದರೂ ಮಗು ತಪ್ಪಿಸಿಕೊಂಡು ಪರಾರಿಯಾಗುವಲ್ಲಿ ಯಶಸ್ವಿಯಾಯಿತು. ಆದರೂ ಕೋಪಕ್ಕೆ ಬುದ್ಧಿ ಕೊಟ್ಟಿದ್ದ ಸಚಿನ್ ಮನೆಗೆ ನುಗ್ಗಿ ಅಲ್ಲಿದ್ದ ಮೂವರನ್ನೂ ಇರಿದು ಕೊಲೆ ಮಾಡಿದ್ದಾನೆ ಎಂದು ಜಿಲ್ಲಾ ಉಪ ಪೆÇಲೀಸ್ ವರಿಷ್ಠಾಧಿಕಾರಿ ಅತುಲ್ ಜಿಂದೆ ತಿಳಿಸಿದ್ದಾರೆ.