ರೊನಾಲ್ಡೋ ಅವರ ಫಿಫಾ ವಿಶ್ವಕಪ್ ಗೆಲ್ಲುವ ಕನಸು ಭಗ್ನ

ಸೋಚಯ್, ಜು.1- ಫುಟ್ಬಾಲ್ ಲೋಕದ ದಿಗ್ಗಜರಾದ ಲಿಯೋನ್ ಮೆಸ್ಸಿ ಹಾಗೂ ಕ್ರಿಸ್ಟಿಯಾನೋ ರೊನಾಲ್ಡೋ ಅವರ ಫಿಫಾ ವಿಶ್ವಕಪ್ ಗೆಲ್ಲುವ ಕನಸು ಒಂದೇ ದಿನದಲ್ಲಿ ನುಚ್ಚು ನೂರಾಗಿದೆ. ಫ್ರಾನ್ಸ್ ವಿರುದ್ಧ 4-3 ಗೋಲುಗಳಿಂದ ಅರ್ಜೇಂಟಿನಾ ಶರಣಾಗುವ ಮೂಲಕ ಮೆಸ್ಸಿಯ ಕಾಲ್ಚೆಂಡಿನ ವಿಶ್ವಕಪ್ ಗೆಲ್ಲುವ ಕನಸಿಗೆ ಭಗ್ನವಾದರೆ, ಉರುಗ್ವೆ ವಿರುದ್ಧ ರೊನಾಲ್ಡೊ ಪ್ರತಿನಿಧಿಸುತ್ತಿರುವ ಪೆÇೀರ್ಚಿಗಲ್ 2-1 ಗೋಲುಗಳಿಂದ ಸೋಲುವ ಮೂಲಕ ಕ್ವಾರ್ಟರ್‍ಫೈನಲ್ ಪ್ರವೇಶಿಸುವ ಅವಕಾಶವನ್ನು ಕೈಚೆಲ್ಲಿದೆ. ಕವಾನಿ ಅಬ್ಬರ, ಕ್ವಾರ್ಟರ್‍ಗೆ ಉರುಗ್ವೆ: ಉರುಗ್ವೆನ ಕವಾನಿ ಅವರ ಅಬ್ಬರದ ಆಟದ ಎದುರು ಮಂಕಾದ ರೊನಾಲ್ಡೊ ತನ್ನ ತಂಡಕ್ಕೆ ಒಂದೇ ಒಂದು ಗೋಲು ಗಳಿಸಿಕೊಡಲು ಕೂಡ ಶಕ್ತರಾಗದೆ ನಿರಾಸೆ ಮೂಡಿಸಿದರು. ಉರುಗ್ವೆನ ಗಳಿಸಿದ ಎರಡು ಗೋಲುಗಳನ್ನು ಕವಾನಿ ಅವರೇ ಬಾರಿಸಿದ್ದು ಕೂಡ ವಿಶೇಷವಾಗಿತ್ತು. ಪಂದ್ಯದ ಆರಂಭದ 7 ನೆ ನಿಮಿಷದಲ್ಲೇ ಸುರೇಜ್ ಹಾಗೂ ಕವಾನಿರ ಹೊಂದಾಣಿಕೆಯಿಂದ ಪ್ರಥಮ ಗೋಲು ಗಳಿಸಿದ ಉರುಗ್ವೆ ನಂತರ ಫ್ರಿ ಕಿಕ್ ಮೂಲಕ ಕವಾನಿ ಮತ್ತೊಂದು ಗೋಲನ್ನು ಗಳಿಸಿದರು. ಮೊದಲಾರ್ಧದಲ್ಲಿ ಉರುಗ್ವೆ 1-0 ಯಿಂದ ಮುನ್ನಡೆದಿತ್ತು ಆದರೆ ದ್ವಿತೀಯಾರ್ಧ ಆರಂಭವಾದ 10ನೇ ನಿಮಿಷದಲ್ಲಿ ಪೆÇೀರ್ಚುಗಲ್‍ನ ರ್ಯಾಪ್‍ಹೆಲ್
ಗುಹಿರಿಯೋ ಗೋಲು ಗಳಿಸಿ ಸಮಬಲ ಸಾಧಿಸಿತ್ತು. ಪಂದ್ಯದ 62ನೆ ನಿಮಿಷದಲ್ಲಿ ಉರುಗ್ವೆನ ಕವಾನಿ ಫ್ರಿಕಿಕ್ ಮೂಲಕ ಹೊಡೆದ ಚೆಂಡನ್ನು ಪೆÇೀರ್ಚುಗಲ್ ಗೋಲ್‍ಕೀಪರ್ ಫಾರ್ನಾಂಡೋ ಮುಸ್‍ಲೆರಾ ಹಿಡಿಯಲಾಗದ ಕಾರಣ ಉರುಗ್ವೆಗೆ ಗೋಲನ್ನು ಕಾಣಿಕೆಯ ರೂಪದಲ್ಲಿ ಕೊಡುವ ಮುನ್ನ ಪೆÇೀರ್ಚುಗಲ್ ಕ್ವಾರ್ಟರ್‍ಫೈನಲ್‍ಗೇರುವ ಅವಕಾಶವನ್ನು ಕೈಚೆಲ್ಲಿದೆ. ಉರುಗ್ವೆ ತಂಡವು 2018ರ ಫಿಫಾ ವಿಶ್ವಕಪ್‍ನ ಕ್ವಾಟರ್‍ಫೈನಲ್‍ಗೇರುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು. ಜುಲೈ 6 ರಂದು ನಡೆಯಲಿರುವ ಕ್ವಾಟರ್‍ಫೈನಲ್‍ನಲ್ಲಿ ಉರುಗ್ವೆ ತಂಡವು ಬಲಿಷ್ಠ ಫ್ರಾನ್ಸ್ ತಂಡದ ಸವಾಲನ್ನು ಎದುರಿಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ