ಬೆಂಗಳೂರು: ಒಂದೇ ದೇಶ ಒಂದೇ ತೆರಿಗೆ ಅಥವಾ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿ ಇಂದಿಗೆ ಒಂದು ವರ್ಷ.
ಕಳೆದ ವರ್ಷ ಜೂನ್ 30ರಂದು ಸಂಸತ್ ಭವನದಲ್ಲಿ ನಡೆದಿದ್ದ ಐತಿಹಾಸಿಕ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಿಎಸ್‍ಟಿಯನ್ನು ದೇಶಕ್ಕೆ ಅರ್ಪಿಸಿದ್ರು. ಈ ಮೂಲಕ ಸರಕು ಮತ್ತು ಸೇವೆಗಳ ಮೇಲೆ ವಿಧಿಸಲಾಗಿದ್ದ 12 ಬಗೆಯ ಪರೋಕ್ಷ ತೆರಿಗೆಗಳು ರದ್ದಾಗಿ ಒಂದೇ ತೆರಿಗೆ ಪದ್ಧತಿಯಲ್ಲಿ ವಿಲೀನವಾಗಿದ್ದವು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗಬ್ಬರ್ ಸಿಂಗ್ ತೆರಿಗೆ ಎಂದು ಟೀಕಿಸಿದ್ದರು. ಶೇಕಡಾ 28ರಷ್ಟು ತೆರಿಗೆ ದರದ ಜೊತೆಗೆ ಜಿಎಸ್‍ಟಿಯಲ್ಲಿ ಶೇ.0, ಶೇ.5, ಶೇ.12, ಶೇ.18ರಷ್ಟು ತೆರಿಗೆ ದರಗಳಿವೆ. ಕರ್ನಾಟಕದಲ್ಲಿ ಒಟ್ಟು 7 ಲಕ್ಷ ಮಂದಿ ಜಿಎಸ್‍ಟಿ ತೆರಿಗೆ ಪಾವತಿದಾರರಿದ್ದಾರೆ. ವಿಚಿತ್ರ ಅಂದ್ರೆ ನಮ್ಮಲ್ಲಿ ಜಿಎಸ್‍ಟಿಯಿಂದ ಆಗಿರುವ ತೆರಿಗೆ ಸಂಗ್ರಹದ ಹೆಚ್ಚಳ ಶೇ.1ರಷ್ಟು ಮಾತ್ರ.
ಒಂದು ವರ್ಷದಲ್ಲಿ ಜಿಎಸ್ಟಿಯಿಂದಾದ ಬದಲಾವಣೆಗಳು:
1. 65 ಲಕ್ಷದಷ್ಟಿದ್ದ ಪರೋಕ್ಷ ತೆರಿಗೆ ಪಾವತಿದಾರರ ಸಂಖ್ಯೆ 1 ಕೋಟಿ 12 ಲಕ್ಷದ 15 ಸಾವಿರದ 693ಕ್ಕೆ ಹೆಚ್ಚಳ.
2. ತೆರಿಗೆ ವ್ಯಾಪ್ತಿಗೆ ಬಂದ ಹೊಸಬರ ಸಂಖ್ಯೆ 48 ಲಕ್ಷದ 38 ಸಾವಿರದ 726.
3. ಜಿಎಸ್‍ಟಿಯಿಂದಾಗಿ ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಶೇ.14ರಷ್ಟು ಹೆಚ್ಚಳ
4. ಸಣ್ಣ-ಮಧ್ಯಮ ಉದ್ದಿಮೆಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರಿಗೆ ವ್ಯಾಪ್ತಿಗೆ ಬಂದಿವೆ.
ಜಿಎಸ್ಟಿ ಅಳವಡಿಕೆಯಿಂದ ಒಂದು ವರ್ಷದಲ್ಲಾದ ತೆರಿಗೆ ಸಂಗ್ರಹದ ಮೊತ್ತ
`ಒಂದೇ ದೇಶ ಒಂದೇ ತೆರಿಗೆ’ಗೆ ಒಂದು ವರ್ಷ..!
ಯಾವಾಗ –ಎಷ್ಟು ( ಕೋಟಿ ರೂ.ಗಳಲ್ಲಿ)
ಜುಲೈ – 94,063
ಆಗಸ್ಟ್ – 93,590
ಸೆಪ್ಟೆಂಬರ್ – 93,029
ಅಕ್ಟೋಬರ್ – 95,132
ನವೆಂಬರ್ – 85,931
ಡಿಸೆಂಬರ್ – 83,716
ಜನವರಿ – 88,929
ಫೆಬ್ರವರಿ – 88,047
ಮಾರ್ಚ್ – 89,264
ಏಪ್ರಿಲ್ – 1,03,458
ಮೇ – 94,016
ಒಟ್ಟು – 10,09,175
ಸರಾಸರಿ – 91,743