
ಬೆಂಗಳೂರು, ಜು.1- ಮನೆಯಲ್ಲಿ 12 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಮೊಮ್ಮಗಳು ಕಳ್ಳತನ ಮಾಡಿದ್ದಾಳೆಂದು ಅಜ್ಜಿ ಕೆಂಗೇರಿ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೆಂಗೇರಿ ವ್ಯಾಪ್ತಿಯ ಅಂಚೆಕೆರೆಯ ನಿವಾಸಿ ಮಾರಕ್ಕ ಎಂಬುವರು ಮೊಮ್ಮಗಳಾದ ಅನಿತಾ ವಿರುದ್ಧ ದೂರು ನೀಡಿದ್ದಾರೆ.
ತಮ್ಮ ಮನೆಯಲ್ಲಿ 12 ಲಕ್ಷ ರೂ. ಮೌಲ್ಯದ 400 ಗ್ರಾಂ ತೂಕದ ಚಿನ್ನದ ಆಭರಣಗಳು ಕಳ್ಳತನವಾಗಿದ್ದು, ಅನಿತಾ ಮೇಲೆ ಶಂಕೆ ವ್ಯಕ್ತಪಡಿಸಿ ಅಜ್ಜಿ ದೂರು ನೀಡಿದ್ದರು.
ಪ್ರಕರಣ ಸಂಬಂಧ ಅನಿತಾಳನ್ನು ಪೆÇಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.