ನವದೆಹಲಿ,ಜು.1-ಪಾನ್ಕಾರ್ಡ್ಗೆ ಆಧಾರ್ ಜೋಡಿಸುವ ಅವಧಿಯನ್ನು 2019ರ ಮಾರ್ಚ್ವರೆಗೆ ವಿಸ್ತರಿಸಲಾಗಿದೆ. ಆದಾಯ ತೆರಿಗೆ ಇಲಾಖೆಯ ನೀತಿ ನಿಯಮ ಜಾರಿ ಸಮಿತಿ ಕಳೆದ ಮಧ್ಯರಾತ್ರಿ ಮಹತ್ವದ ಸಭೆ ನಡೆಸಿ ಪಾನ್ಕಾರ್ಡ್-ಆಧಾರ್ ಜೋಡಣೆ ಅವಧಿಯನ್ನು ವಿಸ್ತರಿಸುವ ಆದೇಶ ಹೊರಡಿಸಿದೆ. ಇದುವರೆಗೂ ಪಾನ್ಕಾರ್ಡ್-ಆಧಾರ್ ಜೋಡಣೆ ಅವಧಿಯನ್ನು 5ನೇ ಬಾರಿಗೆ ವಿಸ್ತರಿಸುತ್ತಿರುವುದು ವಿಶೇಷವಾಗಿದೆ.
ಆದಾಯ ತೆರಿಗೆ ಪಾವತಿಸುವ ಸಂದರ್ಭದಲ್ಲಿ ಪಾನ್ಕಾರ್ಡ್ಗೆ ಆಧಾರ್ ಜೋಡಣೆಯನ್ನು ಕಡ್ಡಾಯ ಮಾಡಿ ಐಟಿ ಇಲಾಖೆ ಆದೇಶ ಹೊರಡಿಸಿತ್ತು. ಈ ಆದೇಶದ ವಿರುದ್ದ ಕೆಲವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ವಾದ-ವಿವಾದ ಆಲಿಸಿದ ನ್ಯಾಯಾಲಯ ಪಾನ್ಕಾರ್ಡ್- ಆಧಾರ್ ಜೋಡಣೆ ಅವಧಿಯನ್ನು ವಿಸ್ತರಿಸುವಂತೆ ಸೂಚನೆ ನೀಡಿತ್ತು. ಈ ಆದೇಶದ ಮೇರೆಗೆ ಇದುವರೆಗೂ ಐದು ಬಾರಿ ಆಧಾರ್ ಜೋಡಣೆ ಅವಧಿಯನ್ನು ವಿಸ್ತರಿಸಲಾಗುತ್ತಿದೆ.