ಅಗ್ನಿ-5 ಖಂಡಾಂತರ ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆಗೆ ಸಿದ್ಧ

ನವದೆಹಲಿ,ಜು.1-ಕ್ಷಣ ಮಾತ್ರದಲ್ಲಿ ಇಡೀ ಚೀನಾವನ್ನು ನಾಶಪಡಿಸುವ ಸಾಮಥ್ರ್ಯ ಹೊಂದಿರುವ ಅಗ್ನಿ-5 ಖಂಡಾಂತರ ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆ ಸಿದ್ಧವಾಗಿದ್ದು, ಶೀಘ್ರದಲ್ಲೇ ಸೇನಾ ಬತ್ತಳಿಕೆಗೆ ಸೇರ್ಪಡೆಯಾಗಲಿದೆ. ಅಣ್ವಸ್ತ್ರಗಳನ್ನು ಐದು ಸಾವಿರ ಕಿ.ಮೀ ವ್ಯಾಪ್ತಿಗೆ ಒತ್ತೊಯ್ದು ನಿಗದಿತ ಸ್ಥಳದ ಮೇಲೆ ನಿಖರ ದಾಳಿ ನಡೆಸುವ ಸಾಮಥ್ರ್ಯ ಹೊಂದಿರುವ ಅಗ್ನಿ-5 ಕ್ಷಿಪಣಿಗೆ ವಿಜ್ಞಾನಿಗಳು ಅಂತಿಮ ರೂಪುರೇಷೆ ಸಿದ್ದಪಡಿಸುತ್ತಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಶತ್ರು ರಾಷ್ಟ್ರವಾಗಿರುವ ಚೀನಾದ ಪ್ರಮುಖ ನಗರಗಳಾದ ಬೀಜಿಂಗ್, ಶಾಂಗೈ, ಹಾಂಕಾಂಗ್ ಮತ್ತಿತರ ನಗರಗಳ ಮೇಲೆ ದಾಳಿ ನಡೆಸುವ ಸಾಮಥ್ರ್ಯ ಅಗ್ನಿ-5 ಕ್ಷಿಪಣಿ ಹೊಂದಿದೆ. ಕಳೆದ ತಿಂಗಳು ಒಡಿಶಾದ ಕರಾವಳಿ ತೀರದಲ್ಲಿ ಅಗ್ನಿ-5 ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆ ನಡೆಸಲಾಗಿದ್ದು , ಶೀಘ್ರದಲ್ಲೇ ಮತ್ತಷ್ಟು ಪರೀಕ್ಷೆ ನಡೆಸಿ ಸಂಪೂರ್ಣವಾಗಿ ಸೇನೆಗೆ ಹಸ್ತಾಂತರಿಸಲಾಗುವುದು ಎಂದು ಮೂಲಗಳು ಉಲ್ಲೇಖಿಸಿವೆ. ಅಮೆರಿಕ, ಚೀನಾ, ರಷ್ಯಾ, ಫ್ರಾನ್ಸ್, ಉತ್ತರ ಕೊರಿಯಾಗಳು ಮಾತ್ರ ಅತ್ಯಾಧುನಿಕ ಖಂಡಾಂತರ ಕ್ಷಿಪಣಿಗಳನ್ನು ಹೊಂದಿದ್ದ ರಾಷ್ಟ್ರ ಎಂಬ ಖ್ಯಾತಿ ಒಳಗಾಗಿದ್ದವು. ಇದೀಗ ಭಾರತ ಕೂಡ ಖಂಡಾಂತರ ಕ್ಷಿಪಣಿ ಹೊಂದಿರುವ ರಾಷ್ಟ್ರ ಎಂಬ ಹೆಗ್ಗಳಿಕೆ ಪಡೆಯುವ ಹೊಸ್ತಿಲ್ಲಿಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ