
ಮದ್ದೂರು,ಜೂ.30- ಎಟಿಎಂನಲ್ಲಿ ಹಣವನ್ನು ಕದಿಯಲು ಕಳ್ಳರು ವಿಫಲ ಯತ್ನ ನಡೆಸಿದ್ದಾರೆ.
ಮಂಡ್ಯ ಪಶ್ಚಿಮ ಪೆÇಲೀಸ್ ಠಾಣೆ ವ್ಯಾಪ್ತಿಯ ಬೆನಕ ಕಲ್ಯಾಣ ಮಂಟಪದ ಸಮೀಪವಿರುವÀ ಕೆನರಾ ಬ್ಯಾಂಕ್ಗೆ ಸೇರಿದ ಎಟಿಎಂನ್ನು ಮೊನ್ನೆ ತಡರಾತ್ರಿ ದೋಚಲು ಕಳ್ಳರು ಯತ್ನಿಸಿದ್ದಾರೆ. ಎಟಿಎಂನ ಬಾಗಿಲು ಮುರಿದು ಒಳನುಗ್ಗಿ ಯಂತ್ರವನ್ನು ಜಖಂಗೊಳಿಸಿ ಕಳ್ಳತನ ಮಾಡಲು ವಿಫಲ ಯತ್ನ ನಡೆಸಿ ಪರಾರಿಯಾಗಿದ್ದಾರೆ. ಈ ಬಗ್ಗೆ ಮಂಡ್ಯ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.